FACT CHECK | 2023ರಂದು ಚಾಮರಾಜನಗರದಲ್ಲಿ ಸಂಭವಿಸಿದ್ದ ಜೆಟ್‌ ಪತನದ ಚಿತ್ರವನ್ನು ಭಾರತ-ಪಾಕ್ ನಡುವಿನ ಸಂಘರ್ಷದ್ದು ಎಂದು ತಪ್ಪಾಗಿ ಹಂಚಿಕೆ

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ಭಾರತೀಯ ವಾಯುಪಡೆಯ ಮಹಿಳಾ ಪೈಲಟ್‌ನ ಫೋಟೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಕೋಟ್ಲಿ ಬಳಿ ಪಾಕಿಸ್ತಾನವು ರಫೇಲ್ ಜೆಟ್ ಅನ್ನು ಹೊಡೆದುರುಳಿಸಿದೆ ಮತ್ತು ಮಹಿಳಾ ಪೈಲಟ್ ಅನ್ನು ಸೆರೆಹಿಡಿಯಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಪಾಕಿಸ್ತಾನಿ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ.

ಟ್ಯಾಕ್ಟಿಕಲ್ ಟ್ರಿಬ್ಯೂನ್ ಈ ಫೋಟೋವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು “ವಶಪಡಿಸಿಕೊಂಡ ಭಾರತೀಯ ರಫೇಲ್ ಪೈಲಟ್‌ನ ಮೊದಲ ಚಿತ್ರ. ಕೋಟ್ಲಿಯ ಮೇಲೆ ಪಾಕಿಸ್ತಾನವು ರಫೇಲ್ ಅನ್ನು ಹೊಡೆದುರುಳಿಸಿದೆ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. ಪಾಕಿಸ್ತಾನದಲ್ಲಿ ಪತನಗೊಂಡ ಮಹಿಳಾ ಭಾರತೀಯ ರಫೇಲ್ ಪೈಲಟ್‌ನ ಮೊದಲ ಚಿತ್ರ.” ಎಂಬ ಶೀರ್ಷಿಕೆ ಎಕ್ಸ್‌ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವೈರಲ್ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜೂನ್ 1, 2023 ರಂದು ಸ್ಟಾರ್ ಆಫ್ ಮೈಸೂರು ವೆಬ್‌ಸೈಟ್‌ನಲ್ಲಿ ಪ್ರಕಟವಾದ ಫೋಟೊ ಲಭ್ಯವಾಗಿದೆ. ವರದಿಯ ಪ್ರಕಾರ,  ಭಾರತೀಯ ವಾಯುಪಡೆಯ ಲಘು ಯುದ್ಧ ತರಬೇತಿ ವಿಮಾನ ‘ಕಿರಣ್‌ ಏರ್‌ಪಥ್‌ ಯು 692’, ತಾಂತ್ರಿಕ ದೋಷದಿಂದಾಗಿ  ಚಾಮರಾಜನಗರ ತಾಲೂಕಿನ ಬೋಗಾಪುರ ಗ್ರಾಮದ ಸಮೀಪ ಪತನಗೊಂಡಿದೆ ಎಂದು ಉಲ್ಲೇಖಿಸಿದೆ.

ಅಧಿಕಾರಿಗಳ ಪ್ರಕಾರ, ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಈ ವಿಮಾನ ಹೊರಟಿದ್ದು, ಬೋಗಾಪುರ ಸಮೀಪ ತರಬೇತಿ ಹಾರಾಟದಲ್ಲಿ ತೊಡಗಿತ್ತು. ಇಬ್ಬರೂ ಪೈಲಟ್‌ಗಳು ತರಬೇತಿ ಹಾರಾಟದಲ್ಲಿದ್ದರು. ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆ, ತಾಂತ್ರಿಕ ದೋಷದಿಂದಾಗ ವಿಮಾನ ಪತನಗೊಂಡು, ಬೋಗಾಪುರ-ಕೆ.ಮೂಕಹಳ್ಳಿ ರಸ್ತೆಯಲ್ಲಿರುವ ಸಪ್ಪಯ್ಯನಪುರ ಎಲ್ಲೆಗೆ ಸೇರಿದ ಪಾಳು ಜಮೀನಿನಲ್ಲಿ ಪತನಗೊಂಡಿತು. ಈ ವೇಳೆ, ಪ್ಯಾರಾಚ್ಯೂಟ್‌ ಮೂಲಕ ಹೊರಗೆ ಜಿಗಿದ ಇಬ್ಬರೂ ಪೈಲಟ್‌ಗಳು ವಿಮಾನ ಪತನಗೊಂಡ 2 ಕಿ.ಮೀ.ದೂರದಲ್ಲಿ ಬಂದು ಬಿದ್ದಿದ್ದರು ಎಂದು ತಿಳಿಸಿದ್ದಾರೆ.

ಎಚ್ ಎ ಎಲ್ ನಿಂದ ಬಂದಿದ್ದ ತರಬೇತಿ ಪೈಲಟ್​ಗಳಾದ ಉತ್ತರ ಭಾರತ ಮೂಲದ ತೇಜಪಾಲ್ (43) ಹಾಗು ಭೂಮಿಕಾ (30) ಸಣ್ಣಪುಟ್ಟ ಗಾಯಗಳಾಗಿವೆ. ಪೈಲಟ್ ತರಬೇತಿಗಾಗಿ ಬೆಂಗಳೂರಿನ ಎಚ್ ಎಎಲ್​ನಿಂದ ಚಾಮರಾಜನಗರಕ್ಕೆ ಬಂದಿದ್ದರು. ಬಳಿಕ ಇಲ್ಲಿಂದ ವಾಪಸ್ ಆಗುತ್ತಿದ್ದಾಗ ಕಿರು ವಿಮಾನ ನೆಲಕ್ಕೆ ಅಪ್ಪಳಿಸಿದೆ. ಸದ್ಯ ಪೈಲಟ್ ಗಳಿಗೆ ಹೆಚ್ಚಿನ ಚಿಕಿತ್ಸೆಗಅಗಿ ಬೆಂಗಳೂರಿಗೆ ರವಾನೆ ಮಾಡಲಾಗುತ್ತಿದೆ. ಯುದ್ದ ವಿಮಾನದ ಮೂಲಕ ಕಳುಹಿಸಲು ಎಚ್. ಎ.ಎಲ್. ಸಿಬ್ಬಂದಿ ಹಾಗೂ ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಒಟ್ಟಾರೆಯಾಗಿ ಹೇಳುವುದಾದರೆ, 2023ರಲ್ಲಿ ಪೈಲಟ್ ತರಬೇತಿಗಾಗಿ ಬೆಂಗಳೂರಿನ ಎಚ್ ಎಎಲ್​ನಿಂದ ಚಾಮರಾಜನಗರ ಬಂದಿದ್ದ ಸಂದರ್ಭದಲ್ಲಿ, ಬೋಗಾಪುರ-ಕೆ.ಮೂಕಹಳ್ಳಿ ರಸ್ತೆಯಲ್ಲಿರುವ ಸಪ್ಪಯ್ಯನಪುರ ಪ್ರದೇಶದಲ್ಲಿ ಲಘು ವಿಮಾನ ಪತನಗೊಂಡ ಹಳೆಯ ಚಿತ್ರವನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಾರತದಲ್ಲಿನ ಭಟಿಂಡಾ ವಾಯುನೆಲೆಯನ್ನು ಪಾಕ್ ನಾಶಪಡಿಸಿದೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights