FACT CHECK | ವಿಜಯ್ ಮಲ್ಯ ಜೊತೆಯಲ್ಲಿ ಕಾಂಗ್ರೆಸ್ ನಾಯಕಿ ಫೋಟೊ ವೈರಲ್! ವಾಸ್ತವವೇನು?
ವಿಜಯ್ ಮಲ್ಯ ಮತ್ತು ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಟೆ ಒಟ್ಟಿಗೆ ಕುಳಿತಿರುವ ಫೋಟೊವೊಂದುಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವಿಜಯ್ ಮಲ್ಯ ದೇಶ ಬಿಟ್ಟು ಹೋದರು ಕಾಂಗ್ರೆಸ್ ಆತನೊಂದಿಗೆ ಸಂಪರ್ಕವನ್ನು ಹೊಂದಿದೆ ಎಂದು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹೇಳುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಬಿಜೆಪಿ ಬೆಂಬಲಿತರು ವೈರಲ್ ಫೋಟೋವನ್ನು ತಮ್ಮ ವೈಯಕ್ತಿಕ ಸಾಮಾಜಿಕ ಮಾಧ್ಯಮಗಳ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
“भारत छोड़ने से पहले मैंने मोदी सरकार के वित्त मंत्री अरुण जेटली को संसद में बताया था कि मैं विदेश जा रहा हूँ.
मैंने उनसे यह भी कहा था कि बैंकों को बोलिए मेरे साथ बैठ कर सेटलमेंट कर लें.
इसके बाद मैं संसद से सीधे दिल्ली एयरपोर्ट के लिए निकला.”
~विजय माल्या
— Supriya Shrinate (@SupriyaShrinate) June 6, 2025
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ವೈರಲ್ ಫೋಟೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಫೋಟೋವಿನ ಕೆಳಗಿನ ಎಡಭಾಗದಲ್ಲಿ AI ಟೂಲ್ “ಗ್ರೋಕ್” ವಾಟರ್‌ಮಾರ್ಕ್ ಕಂಡು ಬಂದಿದೆ.

ಹೀಗಾಗಿ ನಾವು ವಿವಿಧ AI ಫೋಟೋಗಳನ್ನು ಪತ್ತೆ ಹಚ್ಚುವ ಸಾಧನದ ವೆಬ್‌ಸೈಟ್‌ನಲ್ಲಿ ವೈರಲ್ ಫೋಟೋವನ್ನು ಅಪ್‌ಲೋಡ್ ಮಾಡಿ ಪರಿಶೀಲನೆಗೆ ಒಳ ಪಡಿಸಿದಾಗ ಈ ವೈರಲ್ ಫೋಟೋ ಶೇ99.9 ರಷ್ಟು AI ನಿಂದ ನಿರ್ಮಿಸಲಾಗಿದೆ ಎಂಬ ಫಲಿತಾಂಶ ಲಭ್ಯವಾಗಿದೆ. ಹೈವ್ ಮಾಡರೇಶನ್ ಮತ್ತು ಸೈ ಎಂಜಿನ್ ಎಂಬ ವೆಬ್‌ಸೈಟ್‌ಗಳು ಕೂಡ ವೈರಲ್ ಫೋಟೋವನ್ನು AI ಬಳಸಿ ನಿರ್ಮಿಸಿರುವುದನ್ನು ಖಚಿತ ಪಡಿಸಿವೆ.

ಈ ಚಿತ್ರವನ್ನುAI ನಿಂದ ರಚಿಸಲ್ಪಟ್ಟಿದೆ ಎಂದು AI ಫೋಟೋ ಪತ್ತೆ ಹಚ್ಚುವ ತಾಣಗಳು ನಮಗೆ ಮಾಹಿತಿ ನೀಡಿವೆ. ಮತ್ತೊಂದು AI ಪತ್ತೆ ವೆಬ್‌ಸೈಟ್ WasItAI ನಲ್ಲಿಯೂ ನಾವು ವೈರಲ್ ಫೋಟೋವನ್ನು ನೋಡಿದ್ದೇವೆ . ಇದು ಕೂಡ ಒಂದೇ ಫಲಿತಾಂಶವನ್ನು ನೀಡಿರುವುದರಿಂದ ವೈರಲ್ ಫೋಟೋ ನಕಲಿ ಎಂಬುದು ಸ್ಪಷ್ಟವಾಗಿದೆ.

ವಿಜಯ್ ಮಲ್ಯ ಮತ್ತು ಸುಪ್ರಿಯಾ ಶ್ರೀನಾಟೆ ಒಟ್ಟಿಗೆ ಕುಳಿತಿದ್ದಾರೆ ಎಂದು ವೈರಲ್ ಆಗಿರುವ ಫೋಟೊ ಸಂಪೂರ್ಣವಾಗಿ AI-ನಿಂದ ರಚಿತವಾದದ್ದು ಎಂದು ಫ್ಯಾಕ್ಟ್ ಚೆಕ್‌ನಿಂದ ದೃಢಪಟ್ಟಿದೆ. Hive Moderation, Sightengine, ಮತ್ತು WasItAIನಂತಹ ವಿಶ್ವಾಸಾರ್ಹ AI ಡಿಟೆಕ್ಷನ್ ಟೂಲ್‌ಗಳು ಈ ಫೋಟೊ 99%ಕ್ಕಿಂತ ಹೆಚ್ಚು AI-ನಿರ್ಮಿತ ಎಂದು ದೃಢೀಕರಿಸಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ವಿಜಯ್ ಮಲ್ಯ ಮತ್ತು ಸುಪ್ರಿಯಾ ಶ್ರೀನಾಟೆ ಇಬ್ಬರು ಒಟ್ಟಿಗೆ ಕುಳಿತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಫೋಟೊ AI-ನಿಂದ ರಚಿಸಲಾಗಿದ್ದು, ಬಿಜೆಪಿ ಬೆಂಬಲಿತ ಸಾಮಾಜಿಕ ಮಾಧ್ಯಮಗಳ ಬಳಖೆದಾರರು ಸುಳ್ಳು ನಿರೂಪನೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಉತ್ತರ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ ಮಸೀದಿಯನ್ನು ಕೆಡವಲಾಗಿತ್ತೇ? ವೈರಲ್ ವಿಡಿಯೋದ ಅಸಲೀಯತ್ತೇನು?

