FACT CHECK | ಸಮೀರ್‌ಗೆ ಪಾಕ್‌ನಿಂದ ಹಣ ಆರೋಪ, ನನ್ನನ್ನು ಕೊಂಡುಕೊಳ್ಳುವ ನೋಟು ಇನ್ನು ಪ್ರಿಂಟ್ ಆಗಿಲ್ಲ ಎಂದ ಸಮೀರ್

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಧರ್ಮಸ್ಥಳ ಗ್ರಾಮದಲ್ಲಿ 2012ರಲ್ಲಿ ನಡೆದ ಸೌಜನ್ಯ  ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕರ್ನಾಟಕದಲ್ಲಿ ಭಾರಿ ಸದ್ದು ಮಾಡಿತ್ತು. ಕೃತ್ಯ ನಡೆಸಿದವರನ್ನು ಪತ್ತೆ ಹಚ್ಚಿ ಸೌಜನ್ಯಾಳ ಸಾವಿಗೆ ನ್ಯಾಯ ಒದಗಿಸಬೇಕೆಂದು ನಾಡಿನ ಉದ್ದಗಲಕ್ಕೂ ಪ್ರತಿಭಟನೆಗಳು ನಡದಿದ್ದವು. ಇದರ ನಡುವೆ ಸಂತೋಷ್ ರಾವ್ ಎಂಬ ಅಮಾಯಕನನ್ನು ಅಪರಾಧಿ ಮಾಡಿ ಅನ್ಯಾಯವಾಗಿ ಹತ್ತು ವರ್ಷಗಳ ಕಾಲ ಜೈಲಿನಲ್ಲಿರಿಸಲಾಗಿತ್ತು. ಕೊನೆಗೆ ಆತ ನಿರ್ದೋಷಿ ಎಂದು ಕೋರ್ಟ್ ತೀರ್ಪು ನೀಡಿತ್ತು. ಹಾಗಿದ್ದರೆ ಸೌಜನ್ಯಾಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದವರು ಯಾರು ಎಂಬ ಚರ್ಚೆ ಮತ್ತೆ ಮುನ್ನಲೆಗೆ ಬಂದಿತ್ತು.

ಇದೇ ಸಂದರ್ಭದಲ್ಲಿ ಎಂ ಡಿ ಸಮೀರ್ ಎಂಬ ಯೂಟ್ಯೂಬರ್ ‘ದೂತ’  @Dhoothasameermd ಎಂಬ ಯೂಟ್ಯೂಬ್ ಚಾನೆಲ್ ಮೂಲಕ AI ತಂತ್ರಜ್ಞಾನ ಬಳಸಿಕೊಂಡು ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಿದ ವಿಡಿಯೋವನ್ನು ರಾಜ್ಯದಾದ್ಯಂತ ಮತ್ತಷ್ಟು ಸಂಚಲನ ಸೃಷ್ಟಿಸಿತ್ತು. ಈಗ ಇದೇ ಸಮೀರ್‌ ಮೇಲೆ ಪಾಕ್ ಬೆಂಬಲಿತ ISI ಫಂಡ್ ಮಾಡುತ್ತಿದೆ ಎಂಬ ಆರೋಪದ ಪೋಸ್ಟ್‌ರ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗತ್ತಿದೆ.

ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿಯ ವಿರುದ್ದ ವಿಡಿಯೋ ಮಾಡುವ ಯೂಟ್ಯೂಬರ್ ಸಮೀರ್ ಖಾತೆಗೆ ಪಾಕಿಸ್ತಾನದ ಹಮೀದ್‌ನಿಂದ 7,82,000 ರೂಪಾಯಿ ಮತ್ತು ಒಮನ್ ದೇಶದ ಯೂಸಫ್‌ನಿಂದ 23,78,000 ಆಗಿರುವ ಮಾಹಿತಿ ತನಿಖಾ ಸಂಸ್ಥೆಗೆ ಸಿಕ್ಕಿದೆ. ಹವಾಲದ ಮೂಲಕ ನಗದು ಹಣ ಪಡೆದಿರುವ ಮಾಹಿತಿ ಲಭ್ಯ ಶೀರ್ಘವೇ NIA ತನಿಖೆ ಆರಂಭಿಸಲಿ ಎಲ್ಲ ಷಡ್ಯಂತ್ರಗಳು ಬಯಲಾಗಲಿ ಎಂಬ ಬರಹದೊಂದಿಗೆ ಪೋಸ್ಟರ್‌ವೊಂದು ವಾಟ್ಸಾಪ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ.  ಪೋಸ್ಟ್‌ ಕಾರ್ಡ್ ಖ್ಯಾತಿಯ ಟಿವಿ ವಿಕ್ರಮದಲ್ಲಿ ಇಂತಹದೊಂದು ವಿವಾದಾತ್ಮಕ ವಿಡಿಯೋವೊಂದನ್ನು ಹರಿಯಬಿಡಲಾಗಿದೆ.

ಹಾಗಿದ್ದರೆ ಟಿವಿ ವಿಕ್ರಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹೇಳಿರುವಂತೆ ಸಮೀರ್ ಎಂಡಿ ಎಂಬ ಯೂಟ್ಯೂಬರ್ ಸೌಜನ್ಯ ಎಂಬ ಹೆಣ್ಣು ಮಗಳ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಡಿಯೋ ಮಾಡಲು ಮತ್ತು ಧರ್ಮಸ್ಥಳದ ವಿರುದ್ದ ಪಿತೂರಿ ಮಾಡಲು ಪಾಕಿಸ್ತಾನದಿಂದ ಹಣ ಪಡೆದಿದ್ದಾನೆ ಎಂದು ಮಾಡಲಾಗುತ್ತಿರುವ ಆರೋಪ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಟಿವಿ ವಿಕ್ರಮ  ಎಂಬ ಯೂಟ್ಯೂಬ್ ಚಾನೆಲ್‌ವೊಂದು ಬಲಪಂಥೀಯ ವಿಚಾರದಾರೆಯನ್ನು ಪ್ರತಿಪಾದಿಸಿ ಅದನ್ನು ಬೆಂಬಲಿಸುವ ಚಾನೆಲ್ ಆಗಿದೆ. ಈಗ ಸಮೀರ್ ಎಂಡಿ ಎಂಬ ಯೂಟ್ಯೂನರ್ ಸೌಜನ್ಯ ಮತ್ತು ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಬಗ್ಗೆ ಮಾಡಿರುವ ವಿಡಿಯೋಗಳ ಜೊತೆ ಜೊತೆಗೆ, ಇದೇ ಸಂದರ್ಭದಲ್ಲಿ ಭೀಮಾ ಎಂಬ ದೂರುದಾರ ತಾನು ಅಪರಿಚಿತ ಶವಗಳನ್ನು ಹೂತುಹಾಕಿದ್ದೇನೆ ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ನೀಡಿದರೆ ಶವ ಹೂತಿಟ್ಟ ಜಾಗಗಳನ್ನು ತೋರಿಸುತ್ತೇನೆ ಎಂದು ನೀಡಿದ ಹೇಳಿಕೆಗಳಿಂದ ಪ್ರಕರಣಕ್ಕೆ ಮರುಜೀವ ಬಂದಂತಾಯಿತು. ಇದೇ ಕಾರಣಕ್ಕೆ ಸರ್ಕಾರ SIT ರಚಿಸಿತು.

ನಾನು ಹೂತಿಟ್ಟ ಶವಗಳಲ್ಲಿ ಮಹಿಳೆಯರದ್ದೇ ಹೆಚ್ಚು.. ನನಗೆ ಪಾಪಪ್ರಜ್ಞೆ ಕಾಡುತ್ತಿದೆ:  ದೂರುದಾರ ಹೇಳಿದ್ದೇನು? | Public TV - Latest Kannada News, Public TV Kannada  Live, Public TV News

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳ ಹೂತಿರುವುದಾಗಿ ಅನಾಮಿಕ ವ್ಯಕ್ತಿ, ದಕ್ಷಿಣ ಕನ್ನಡ ಎಸ್‌ಪಿ ಮುಂದೆ ಹೇಳಿಕೆ ನೀಡಿದ್ದ. 1995 ರಿಂದ 2014ರವರೆಗೆ ಧರ್ಮಸ್ಥಳದ ನೌಕರನಾಗಿದ್ದೆ. ನಾನು ಹಲವು ಶವಗಳನ್ನು ವಿಲೇವಾರಿ ಮಾಡಿದ್ದೇನೆ. ಹೂತಿಟ್ಟ ಶವಗಳಲ್ಲಿ ಮಹಿಳೆಯರದ್ದೇ ಹೆಚ್ಚು. ಇವೆಲ್ಲ ಅನಾಥ ಶವಗಳು ಅಂತ ನಾನು ಭಾವಿಸಿದ್ದೆ. ಆನಂತರ ನನಗೆ ಅನುಮಾನ ಬರಲು ಶುರುವಾಯ್ತು. ಕೆಲ ಮಹಿಳೆಯರ ಶವಗಳು ನಗ್ನ ಸ್ಥಿತಿಯಲ್ಲಿದ್ದವು. ಲೈಂಗಿಕ ಆಕ್ರಮಣ, ಹಿಂಸೆಯ ಕುರುಹುಗಳಿದ್ದವು.

ನಾನು ಪೊಲೀಸರಿಗೆ ಹೇಳಲು ಮುಂದಾದಾಗ ನನ್ನ ಮೇಲೆ ಹಲ್ಲೆ ಮಾಡಿದರು. ಶವ ಹೂತಿಟ್ಟ ವಿಚಾರ ಬಯಲು ಮಾಡದಂತೆ ಬೆದರಿಸಿದರು. ನಿನ್ನನ್ನೂ ಹೂತು ಹಾಕುತ್ತೇನೆ ಅಂತ ಬೆದರಿಕೆ ಹಾಕಿದರು. ನಾನು ಜೀವ ಭಯದಿಂದ 11 ವರ್ಷಗಳ ಹಿಂದೆ ಧರ್ಮಸ್ಥಳ ತೊರೆದೆ. ಈಗ ನನಗೆ ಪಾಪಪ್ರಜ್ಞೆ ಕಾಡುತ್ತಿದೆ. ಕೊಲೆಪಾತಕರು, ಅತ್ಯಾಚಾರಿಗಳು ಯಾರೆಂದು ಗೊತ್ತಾಗಬೇಕು. ಹೂತು ಹಾಕಿರುವ ಸ್ಥಳವನ್ನು ತೋರಿಸಲು ನಾನು ಸಿದ್ಧ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿ ಎಂದು ದೂರುದಾರ ಒತ್ತಾಯಿಸಿದ್ದ.

ಈಗ ಆತ ತೋರಿಸಿದ ಎಲ್ಲಾ ಜಾಗಗಳಲ್ಲಿಯೂ ಶೋದ ಕಾರ್ಯ ನಡೆಸಲಾಗಿದ್ದು ಎರಡು ಕಡೆ ಮಾತ್ರ ಮಾನವ ಮೂಳೆಗಳು ಪತ್ತೆಯಾಗಿವೆ. ಆದರೆ ಈ ಎರಡರಲ್ಲಿ ಒಂದು ದೂರುದಾರ ಗುರುತಿಸದ ಜಾಗವೂ ಸೇರಿದೆ. ಗುರುತು ಸಂಖ್ಯೆ 13ರ ಉಳಿದ ಅರ್ಧ ಭಾಗದ ಉತ್ಖನನ ಕಾರ್ಯ ಪೂರ್ಣಗೊಂಡಿದೆ. ಸುಮಾರು 18 ಅಡಿ ಆಳ, 8 ಅಡಿ ಅಗಲ, 22ಅಡಿ ಉದ್ದದಲ್ಲಿ ಶೋಧ ಕಾರ್ಯಾಚರಣೆ ನಡೆದು ಯಾವುದೇ ಕಳೇಬರ ಪತ್ತೆಯಾಗಿಲ್ಲ. ಈಗ ಶೋಧ ಕಾರ್ಯಾಚರಣೆಯ ನಂತರ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ.

ಇನ್ನು ಯೂಟ್ಯೂಬರ್ ದೂತ ಸಮೀರ್ ಬಗ್ಗೆ ಮಾಡಿರುವ ಆರೋಪದ ಬಗ್ಗೆ ಈ ದಿನ.ಕಾಂ ಗೆ ಸ್ವತಃ ಸಮೀರ್ ಪ್ರತಿಕ್ರಿಯಿಸಿದ್ದು, ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು ಮತ್ತು ಸೌಜನ್ಯ ಎಂಬ ಹೆಣ್ಣು ಮಗಳ ಮೇಲೆ ನಡೆದ ಅತ್ಯಾಚಾರ ನಡೆಸಿ ಕೊಲೆ ಮಾಡಿದವರಿಗೆ ಶಿಕ್ಷೆ ನೀಡುವ ಮೂಲಕ ಅಲ್ಲಿ ನಡೆದ ಸಾವುಗಳಿಗೆ ನ್ಯಾಯ ಸಿಗಬೇಕೆಂದು ನಾನು ಹೋರಾಡುತ್ತಿದ್ದೇನೆ. ನನ್ನನ್ನು ಕೊಂಡುಕೊಳ್ಳಲು ಯಾರಿಂದಲೂ  ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಮೀರ್‌ನನ್ನು ಕೊಂಡುಕೊಳ್ಳುವ ನೋಟು ಇದುವರೆಗೆ ಪ್ರಿಂಟ್ ಆಗಿಲ್ಲ, ನನ್ನ ಮನಸ್ಸಿಗೆ ಸರಿ ಅನ್ನಿಸದ್ದನ್ನು ನಾನು ಮಾಡ್ತೀನೆ ಹೊರತು ಯಾವುದೇ ವ್ಯಕ್ತಿಯಿಂದ ಹಣ ಪಡೆದು ಮಾಡುವ ಅವಶ್ಯಕತೆ ನನಗಿಲ್ಲ ಎಂದು ಈ ದಿನ.ಕಾಂ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಎಕ್ಷ್‌ಕ್ಲೂಸಿವ್ ಸಂದರ್ಶನದಲ್ಲಿ ಹೇಳಿದ್ದಾರೆ.

ನವೆಂಬರ್ 2022ರಲ್ಲಿ ನಡೆದ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ, ಇಡಿ ಸ್ಪೋಟಕ ವಿಚಾರಣಾ ಮಾಹಿತಿಯನ್ನು ಹೊರಗೆಳೆದಿದೆ. ನಗರದ ಹೊರವಲದಲ್ಲಿ ಆಟೋರಿಕ್ಷಾದಲ್ಲಿ ಕಡಿಮೆ ತೀವ್ರತೆಯ ಸ್ಪೋಟ ಸಂಭವಿಸಿತ್ತು. ಈ ಘಟನೆಯನ್ನು ಸಮೀರ್‌ಗೆ ಲಿಂಕ್ ಮಾಡಿ ತಪ್ಪು ಅಭಿಪ್ರಾಯ ಮೂಡಿಸಲಾಗುತ್ತಿದೆ. ಹಾಗಾಗಿ ಟಿವಿ ವಿಕ್ರಮ ಚಾನೆಲ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ತಂಬ್ ನೇಲ್‌ನಲ್ಲಿ ಹೇಳಲಾಗಿರುವ ಹೇಳಿಕೆ ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಮ ಮತ್ತು ಹನುಮನ ಮೂರ್ತಿಗಳಿಗೆ ಹಾನಿ ಮಾಡಿದ್ದು ಮುಸ್ಲಿಂ ಯುವಕರಲ್ಲ..!!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights