FACT CHECK | ರಾಹುಲ್ ಗಾಂಧಿ ನೋಡಲು ಬಿಹಾರದಲ್ಲಿ ಸೇರಿದ ಜನಸಾಗರ ಎಂಬ ವಿಡಿಯೋದ ಅಸಲೀಯತ್ತೇನು?
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಬಿಹಾರದಲ್ಲಿ “ಮತದಾರರ ಶಕ್ತಿ ಯಾತ್ರೆ” ಎಂಬ ಹೆಸರಿನಲ್ಲಿ ಚುನಾವಣಾ ಪಟ್ಟಿಯಲ್ಲಿ ಅಕ್ರಮಗಳು ಮತ್ತು ಬಿಹಾರ ವಿಶೇಷ ಚುನಾವಣಾ ಆಯೋಗದ (SEC) ಪರಿಷ್ಕರಣೆಯನ್ನು ಖಂಡಿಸಿ ರ್ಯಾಲಿ ನಡೆಸುತ್ತಿದ್ದಾರೆ. ಆಗಸ್ಟ್ 17 ರಂದು ಪ್ರಾರಂಭವಾದ ಈ ರ್ಯಾಲಿಯು 16 ದಿನಗಳವರೆಗೆ ರಾಜ್ಯಾದ್ಯಂತ ನಡೆಯಲಿದೆ.

ಈ ಸಂದರ್ಭದಲ್ಲಿ, ‘‘ರಾಹುಲ್ ಗಾಂಧಿ ನೀವು ಮುಂದೆ ನಾವು ನಿಮ್ಮ ಹಿಂದೆ ಇದ್ದೀವಿ.. ಬಿಹಾರ್ ಜನರ ಜನಸಾಗರ’’ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ.
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು ಪೋಸ್ಟ್ನಲ್ಲಿ ಮಾಡಿದ ಪ್ರತಿಪಾನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ವೈರಲ್ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ಏಮ್ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಅದೇ ವೈರಲ್ ವಿಡಿಯೋವನ್ನು X ಸೈಟ್ನಲ್ಲಿ ಇಂಗ್ಲಿಷ್ನಲ್ಲಿ ಪೋಸ್ಟ್ ಮಾಡಿರುವುದು ಲಭ್ಯವಾಗಿದೆ. X ಪುಟದಲ್ಲಿ ವೈರಲ್ ವೀಡಿಯೊದ ಸ್ಕ್ರೀನ್ಶಾಟ್ ಅನ್ನು ಪೋಸ್ಟ್ ಮಾಡಿದ್ದರು.
BREAKING
A Tsunami of people have gathered in Bihar for the rally of INDIA alliance leader and LoP Rahul Gandhi.
You couldn’t find and inch of empty space at the venue of the rally. pic.twitter.com/a1AAQNXqaT
— Ravinder Kapur. (@RavinderKapur2) August 19, 2025
ಪೋಸ್ಟ್ನಲ್ಲಿ ಲಭ್ಯವಾದ ಮಾಹಿತಿಯನ್ನು ಆಧರಿಸಿ ಸ್ಕ್ರೀನ್ಶಾಟ್ನಲ್ಲಿರುವ all_about_phaltan ಎಂಬ ಇನ್ಸ್ಟಾಗ್ರಾಮ್ ಪುಟವನ್ನು ಸರ್ಚ್ ಮಾಡಿದಾಗ, ಜೂನ್ 22 ರಂದು ಅದೇ ವಿಡಿಯೋವನ್ನು ಪೋಸ್ಟ್ ಮಾಡಿರುವುದು ಕಂಡುಬಂತು, ಅದರಲ್ಲಿ #bakasur #mathur ನಂತಹ ಹ್ಯಾಶ್ಟ್ಯಾಗ್ಗಳೊಂದಿಗೆ “ಹಿಂದ್ಕೇಸರಿ ಪೆಡಗಾಂವ್ ಮೈದಾನ್ 2025” ಎಂದು ಉಲ್ಲೇಖಿಸಲಾಗಿದೆ. ಇದರ ಬಗ್ಗೆ ಗೂಗಲ್ಲ್ಲಿ ಹುಡುಕಿದಾಗ “ಬಕಾಸುರ” ಮತ್ತು “ಮಾಥುರ್” ಮಹಾರಾಷ್ಟ್ರದ ಎತ್ತಿನ ಗಾಡಿ ಓಟಗಳಿಗೆ ಸಂಬಂಧಿಸಿದ ಹೆಸರುಗಳು ಎಂದು ತಿಳಿದುಬಂದಿದೆ.
View this post on Instagram
ಅಲ್ಲದೆ, ವೀಡಿಯೊದಲ್ಲಿ ಉಲ್ಲೇಖಿಸಿರುವಂತೆ, ಎತ್ತಿನ ಬಂಡಿ ಓಟವು ಮಹಾರಾಷ್ಟ್ರದಲ್ಲಿ ಜನಪ್ರಿಯ ಕ್ರೀಡೆಯಾಗಿದೆ. ಹಿಂದು ಕೇಸರಿ ಪೆಡಗಾಂವ್ ಇದನ್ನು ಕ್ರೀಡಾ ಮೈದಾನದಲ್ಲಿ ನಡೆಸಲಾಗುತ್ತದೆ. ಹಿಂದ್_ಕೇಸರಿ_ಮೈದಾನ್_ಪುಸೆಗಾಂವ್ ಇನ್ಸ್ಟಾಗ್ರಾಮ್ ಪುಟದಲ್ಲಿ ವಿವಿಧ ವೀಡಿಯೊಗಳನ್ನು ಪೋಸ್ಟ್ ಮಾಡಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮಹಾರಾಷ್ಟ್ರದಲ್ಲಿ ನಡೆದ ಎತ್ತಿನ ಗಾಡಿ ಓಟಕ್ಕೆ ಸಂಬಂಧಿಸಿದ ವಿಡಿಯೋವನ್ನು ಬಿಹಾರದಲ್ಲಿ ರಾಹುಲ್ ಗಾಂಧಿ ಭೇಟಿಗಾಗಿ ಜನಸಮೂಹ ಕಾಯುತ್ತಿದೆ ಎಂದು ತಪ್ಪಾಗಿ ಪ್ರಸಾರ ಮಾಡಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ ಎಂದು ಸೌತ್ ಚೆಕ್ ವರದಿ ಮಾಡಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ದೆಹಲಿ ಸಿಎಂ ಮೇಲೆ ಹಲ್ಲೆ ನಡೆಸಿದ ಆರೋಪಿಯೊಂದಿಗೆ ಎಎಪಿ ಶಾಸಕನ ಫೋಟೋದ ಅಸಲೀಯತ್ತೇನು?

