FACT CHECK | ಪಾಕಿಸ್ತಾನದಲ್ಲಿ 12 ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದು ನಿಜವೇ?
ಪಾಕಿಸ್ತಾನದಲ್ಲಿ 12 ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ ಎಂಬ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಪಾಕಿಸ್ತಾನದಲ್ಲಿ 11 ವರ್ಷದ ಬಾಲಕಿಯೊಬ್ಬಳು 60 ವರ್ಷದ ಮುಲ್ಲಾನ ಮದುವೆಯಾಗಿ 12 ವರ್ಷದವಳಿದ್ದಾಗ ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ” ಎಂದಿದೆ.
![]()
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
![]()
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ಫೊಟೊದ ಕೀ ಫ್ರೇಮ್‌ಗಳನ್ನು ತೆಗದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, https://www.jn.pt/ ಎಂಬ ವೆಬ್ ಸೈಟ್ ನಲ್ಲಿ ಪ್ರಕಟಗೊಂಡ ಸತ್ಯಶೋಧನೆ ಲೇಖನವೊಂದು ಲಭ್ಯವಾಗಿದೆ. ಇದರಲ್ಲಿ ಈ ವಿಡಿಯೋ ಬೆಳವಣಿಗೆ ಕುಂಠಿತಗೊಂಡ ವಿಯೆಟ್ನಾಂ ಸೋದರಿಯರದ್ದು ಎಂದಿದೆ. (ಪೋರ್ಚುಗೀಸ್ ಭಾಷೆಯಿಂದ ಅನುವಾದಿಸಲಾಗಿದೆ)
ಇದನ್ನು ಆಧಾರವಾಗಿಟ್ಟುಕೊಂಡು ಗೂಗಲ್ ಸರ್ಚ್ ಮಾಡಿದಾಗ, ಆಗಸ್ಟ್ 9, 2024 ರ ಟಿಕ್ ಟಾಕ್ ಪೋಸ್ಟ್ ಒಂದನ್ನು ನೋಡಿದ್ದೇವೆ. ಅದರಲ್ಲಿ ವೈರಲ್ ವಿಡಿಯೋವನ್ನೆ ಹೋಲುವ ಮತ್ತೊಂದು ಹೋಲುವ ವೀಡಿಯೋಲಭ್ಯವಾಗಿದೆ.
![]()
ಈ ವೀಡಿಯೋದ ವಿವರಣೆಯನ್ನು ವಿಯೆಟ್ನಾಂ ಭಾಷೆಯಲ್ಲಿ ಬರೆಯಲಾಗಿದ್ದು, “ಅಕ್ಕ 700 ಗ್ರಾಂ ತೂಕ ಮತ್ತು ತಂಗಿ 900 ಗ್ರಾಂ ತೂಕ. ಅಮ್ಮನ ಇಬ್ಬರು ಮುದ್ದಾದ ದೇವತೆಗಳು ಇಬ್ಬರೂ ಈಗ ದೊಡ್ಡವರಾಗಿದ್ದಾರೆ ಮತ್ತು ತಮ್ಮ ತಾಯಿಯನ್ನು ಅರ್ಥಮಾಡಿಕೊಂಡಿದ್ದಾರೆ.” ಎಂದಿದೆ. (ಅನುವಾದಿಸಲಾಗಿದೆ)
ಇದೇ ವೀಡಿಯೋದಲ್ಲಿ Long An Pediatrics Hospital · Tan An (ಅನುವಾದಿಸಲಾಗಿದೆ) ಎಂದು ಲೊಕೇಶನ್ ಟ್ಯಾಗ್ ಮಾಡಲಾಗಿದ್ದು ಅದು ವಿಯೆಟ್ನಾಂನ ಒಂದು ಮಕ್ಕಳ ಆಸ್ಪತ್ರೆ ಎಂಬುದನ್ನು ಕಂಡುಕೊಂಡಿದ್ದೇವೆ. ವೀಡಿಯೋ ಜೊತೆಗಿನ ವಿವರಣೆಯಲ್ಲಿ ಆಸ್ಪತ್ರೆ ಹೆಸರು ಇದೆ.
![]()
ಅಕ್ಟೋಬರ್ 10, 2024ರ ಇನ್ನೊಂದು ಪೋಸ್ಟ್ ನಲ್ಲಿ baongoc._.93 ಅವರು ಇಬ್ಬರು ಮಕ್ಕಳು ಸಹೋದರಿಯರು ಎಂದು ಬರೆದುಕೊಂಡಿದ್ದಾರೆ. ವೀಡಿಯೋದಲ್ಲಿರುವವರು ಸಹೋದರಿಯರು ಎಂದು ಬರೆದಿರುವುದನ್ನು ಕಾಣಬಹುದು. (ಅನುವಾದಿಸಲಾಗಿದೆ)
![]()
ವೈರಲ್ ವೀಡಿಯೋದಲ್ಲಿ ಕಾಣಿಸಿಕೊಂಡ ಇಬ್ಬರು ಅಕ್ಕ ತಂಗಿಯರಾಗಿದ್ದಾರೆ. ಮತ್ತು ಇಬ್ಬರೂ ಮಕ್ಕಳು ಬೆಳವಣಿಗೆ ಕುಂಠಿತಗೊಂಡು ಜನಿಸಿದವರಾಗಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಪಾಕಿಸ್ತಾನದಲ್ಲಿ 12 ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳುತ್ತಿರುವ ಸುಳ್ಳು ನಿರೂಪಣೆಯಿಂದ ಕೂಡಿದೆ. ವಾಸ್ತವವಾಗಿ ಈ ವಿಡಿಯೋ ವಿಯೆಟ್ನಾಂ ಮೂಲದ್ದಾಗಿದ್ದು, ವೀಡಿಯೋದಲ್ಲಿ ಕಂಡುಬರುವ ಇಬ್ಬರು ಸಹೋದರಿಯರಾಗಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಗಣೇಶ ವಿಸರ್ಜನೆ ಮೆರವಣಿಗೆಯ ಮೇಲೆ ಮುಸ್ಲಿಂ ವ್ಯಕ್ತಿಗಳು ಕಲ್ಲು ತೂರಿದ್ದು ನಿಜವೇ?

