FACT CHECK : ಪ್ರಧಾನಿ ಮೋದಿಗೆ ಜಲ್ ಮುರಿ ಮಾಡಿಕೊಟ್ಟ ಅಂಗಡಿ ವ್ಯಾಪಾರಿ NSG ಕಮಾಂಡೋ ಅಲ್ಲಾ!

ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ಫೋಟೋವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿ ಪ್ರಧಾನಿ ಮೋದಿ ರಸ್ತೆ ಬದಿ ಅಂಗಡಿಯಲ್ಲಿ “ಜಲ್ ಮುರಿ” ತಯಾರಿಸುವ ವ್ಯಕ್ತಿಯ ಜೊತೆ ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ಸಂಬಂಧಿಸಿದಂತೆ, ಆ ಅಂಗಡಿ ವ್ಯಾಪಾರಿ National Security Guard (NSG) ಕಮಾಂಡೋ ಎಂದು ಹೇಳಲಾಗುತ್ತಿದೆ.

Image

ವೈರಲ್ ಆಗಿರುವ ಫೊಟೊದಲ್ಲಿ ಏನಿದೆ?

ವೈರಲ್ ಪೋಸ್ಟ್‌ಗಳಲ್ಲಿ, “ಪ್ರಧಾನಿ ಮೋದಿಗೆ ಜಲ್ ಮುರಿ ತಯಾರಿಸಿದ ವ್ಯಕ್ತಿ ಸಾಮಾನ್ಯ ಅಂಗಡಿ ವ್ಯಾಪಾರಿ ಅಲ್ಲ, NSG ಕಮಾಂಡೋ” ಎಂದು ಹೇಳಲಾಗಿದೆ. ಕೊಲ್ಕತ್ತಾದಲ್ಲಿ ಪ್ರಧಾನಿ ಮೋದಿಗೆ ಜಲ್ ಮುರಿ ಮಾಡಿಕೊಟ್ಟ ಅಂಗಡಿ ವ್ಯಾಪಾರಿ ನಿಜವಾಗಿ ಪ್ರಧಾನಿ ಭದ್ರತೆ ನೋಡಿಕೊಳ್ಳುವ SPG ಕಮಾಂಡೊ ಎಂದು ಪೋಸ್ಟರ್ ಗಳು ವೈರಲ್ ಆಗುತ್ತಿವೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

Image

ಫ್ಯಾಕ್ಟ್‌ಚೆಕ್ :

ಪಶ್ಚಿಮ ಬಂಗಾಳದ ಜಾರ್ಗ್ರಾಮ್‌ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ, ಪ್ರಧಾನಮಂತ್ರಿ Narendra Modi ಅವರು ರಸ್ತೆ ಮೆರವಣಿಗೆಯ ಮಧ್ಯೆ ಸ್ವಲ್ಪ ವಿರಾಮ ತೆಗೆದುಕೊಂಡು ಒಂದು ಬೀದಿ ವ್ಯಾಪಾರಿಯಿಂದ ಜಲ್ ಮುರಿ ತಿನ್ನುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು.

ಅದಾದ ನಂತರ, ಅದೇ ಘಟನೆಯನ್ನು ಆಧರಿಸಿ ಒಂದು ಗ್ರಾಫಿಕ್ ವೈರಲ್ ಆಗಿತು. ಅದರಲ್ಲಿ, ಜಾರ್ಗ್ರಾಮ್‌ನಲ್ಲಿ ನಡೆದ ರೋಡ್‌ಶೋ ವೇಳೆ ಪ್ರಧಾನಮಂತ್ರಿಗೆ ಜಾಲಮುಡಿ ನೀಡಿದ ವ್ಯಾಪಾರಿ ಒಬ್ಬ NSG  ಕಮಾಂಡೋ ಎಂದು ಹೇಳಲಾಗಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಇದೊಂದು ನಕಲಿ ಫೋಟೊ ಎಂದು ದೃಢಪಟ್ಟಿದೆ. ಆ ವ್ಯಕ್ತಿ NSG ಕಮಾಂಡೋ ಎಂಬುದಕ್ಕೆ ಯಾವುದೇ ಅಧಿಕೃತ ದಾಖಲೆ ಅಥವಾ ದೃಢೀಕರಣ ಇಲ್ಲ. ವಿಶ್ವಾಸಾರ್ಹ ಸುದ್ದಿ ಮೂಲಗಳು ಅಥವಾ ಸರ್ಕಾರದ ಪ್ರಕಟಣೆಗಳಲ್ಲಿ ಈ ಕುರಿತು ಯಾವುದೇ ಮಾಹಿತಿ ಸಿಗುವುದಿಲ್ಲ.

ಈ ಬಗ್ಗೆ ಮತ್ತಷ್ಟು ಪರಿಶೀಲಿಸಲು, “ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿಗೆ ಜಲ್ ಮುರಿ ನೀಡಿದ ವ್ಯಕ್ತಿ ಯಾರು?” ಎಂಬ ಕೀವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, News 24 ಸುದ್ದಿ ಮಾಧ್ಯಮವೊಂದು ಮಾಡಿರುವ ವರದಿ ಲಭ್ಯವಾಗಿದೆ.

ಆ ವರದಿ ಪ್ರಕಾರ, ಪ್ರಧಾನಮಂತ್ರಿಗೆ ಜಲ್ ಮುರಿ ನೀಡಿದ ವ್ಯಕ್ತಿಯ ಹೆಸರು Vikram Sahu, ಅವರು ಮೂಲತಃ ಬಿಹಾರದ ಗಯಾ ಪ್ರದೇಶದವರು ಎಂಬ ಮಾಹಿತಿ ಲಭ್ಯವಾಗಿದೆ.

 ಅಂಗಡಿ ವ್ಯಾಪಾರಿಯ ಹಿನ್ನೆಲೆ

Vikram ಅವರು 9ನೇ ತರಗತಿಯವರೆಗೆ ಮಾತ್ರ ಓದಿದ್ದಾರೆ. ಆರ್ಥಿಕ ಸಮಸ್ಯೆಗಳ ಕಾರಣದಿಂದ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ. ಅವರು ದಿನಕ್ಕೆ ಸುಮಾರು ₹1000–₹1200 ಸಂಪಾದಿಸುತ್ತಾರೆ ಈ ಆದಾಯದಿಂದ ತಮ್ಮ ಕುಟುಂಬವನ್ನು (ತಾಯಿ Sunita Devi ಮತ್ತು ತಂದೆ Uttam Sah) ನೋಡಿಕೊಳ್ಳುತ್ತಾರೆ ಎಂದು ವರದಿಯಾಗಿದೆ.

Vikram ಅವರ ಮಾತಿನ ಪ್ರಕಾರ, ಪ್ರಧಾನಮಂತ್ರಿಯವರೊಂದಿಗೆ ನಡೆದ ಸಂಭಾಷಣೆ ತುಂಬಾ ಸರಳವಾಗಿತ್ತು ಮತ್ತು ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ. ಪ್ರಧಾನಮಂತ್ರಿಗಳು ಅವರ ಕುಟುಂಬ, ಶಿಕ್ಷಣ ಮತ್ತು ಕೆಲಸದ ಬಗ್ಗೆ ವಿಚಾರಿಸಿಕೊಂಡರು — ಅದು ಅವರಿಗೆ ಒಂದು ಮರೆಯಲಾಗದ ಕ್ಷಣವಾಯಿತು ಎಂದಿದ್ದಾರೆ.

NDTV ಯೂಟ್ಯೂಬ್ ಚಾನೆಲ್‌ನಲ್ಲಿ ಏಪ್ರಿಲ್ 19ರಂದು ಅಪ್‌ಲೋಡ್ ಮಾಡಲಾದ ವಿಡಿಯೋ ಲಭ್ಯವಾಗಿದೆ. ಆ ವಿಡಿಯೋದಲ್ಲಿ Vikram ಹೇಳುವುದೇನೆಂದರೆ, ಅವರು ಬಿಹಾರದ ಗಯಾ ಪ್ರದೇಶದವರು. ಕಳೆದ 12 ವರ್ಷಗಳಿಂದ ಪಶ್ಚಿಮ ಬಂಗಾಳದ ಜಾರ್ಗ್ರಾಮ್‌ನಲ್ಲಿ ಜಲ್ ಮುರಿ ಅಂಗಡಿ ನಡೆಸುತ್ತಿದ್ದಾರೆ.  ಪ್ರಧಾನಮಂತ್ರಿ  ಭೇಟಿಯಾದದ್ದು ಅತೀ ಸಂತಸ ತಂದಿದೆ ಎಂದಿದೆ.

ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ “ಅಂಗಡಿ ವ್ಯಾಪಾರಿ NSG ಕಮಾಂಡೋ” ಎಂಬ ಹೇಳಿಕೆ ಸುಳ್ಳು ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ಹೇಳುವುದಾದರೆ ವ್ಯಾಪಾರಿಯು NSG ಕಮಾಂಡೋ ಎಂಬ ಆರೋಪಕ್ಕೆ ಯಾವುದೇ ಆಧಾರವಿಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.


ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights