Categories
Breaking News District State

ಐತಿಹಾಸಿಕ ತೀರ್ಪು : ಚಿಕ್ಕಮಗಳೂರು ವಿದ್ಯಾರ್ಥಿನಿ ಅತ್ಯಾಚಾರ-ಕೊಲೆ ಆರೋಪಿಗಳಿಗೆ ಗಲ್ಲು!

ಮಲೆನಾಡನ್ನೇ ಬೆಚ್ಚಿ ಬೀಳಿಸಿದ್ದ ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ಚಿಕ್ಕಮಗಳೂರು ಜಿಲ್ಲಾ ಸತ್ರ ನ್ಯಾಯಾಲಯ ಮರಣದಂಡನೇ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ. ಪರೀಕ್ಷೆಗೆ ಓದಿಕೊಳ್ಳೋಕೆಂದು ಅಡ್ಡದಾರಿಯಲ್ಲಿ ಹೋಗ್ತಿದ್ದ ವಿದ್ಯಾರ್ಥಿನಿಯನ್ನ ಅಡ್ಡಗಟ್ಟಿ ಅತ್ಯಾಚಾರಗೈದು ಕೊಲೆ ಮಾಡಿ ಹಾಳು ಬಾವಿಗೆ ಎಸೆದಿದ್ರು. ನಾಲ್ಕು ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಚಿಕ್ಕಮಗಳೂರು ಕೋರ್ಟ್ ಇಬ್ಬರಿಗೂ ಆರೋಪಿಗಳಿಗೂ ಮರಣದಂಡನೆ ವಿಧಿಸಿದ್ದು, ಊರಿನೋರು ಹಾಗೂ ಹೆತ್ತವರ ಆಸೆ ಈಡೇರಿದೆ…..

ಅದು 2016ರ ಫೆಬ್ರವರಿ 16ನೇ ತಾರೀಖು. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಪ್ರಥಮ ಬಿಕಾಂ ಓದುತ್ತಿದ್ದ 19 ವರ್ಷದ ಯುವತಿಯನ್ನ ಸಂತೋಷ್ ಹಾಗೂ ಪ್ರದೀಪ್ ಎಂಬುವರು ಅತ್ಯಾಚಾರಗೈದು ಕೊಲೆ ಮಾಡಿದ್ರು. ನಾಳಿನ ಪರೀಕ್ಷೆಗೆ ಓದೋಣವೆಂದು ಕಾಲು ದಾರಿಯಲ್ಲಿ ಮನೆಗೆ ಹೊರಟಿದ್ದ ಯುವತಿಯನ್ನ ಪ್ರದೀಪ್ ಹಾಗೂ ಸಂತೋಷ್ ಆಕೆಯನ್ನ ಅತ್ಯಾಚಾರಗೈದು, ವೇಲ್‍ನಿಂದ ಕುತ್ತಿಗೆ ಬಿಗಿದು ಗಿಡಘಂಟೆ ತುಂಬಿದ್ದ ಹಾಳು ಬಾವಿಗೆ ಎಸೆದಿದ್ರು. ಊರಿಗೆ ಊರೇ ಕಣ್ಣೀರಿಟ್ಟು ಸ್ವಾತಿಗಾಗಿ ಹುಡುಕಾಡ್ತಿದ್ರೆ ಈ ರಾಕ್ಷಸರು ತಮಗೇನು ಗೊತ್ತಿಲ್ಲದಂತಿದ್ರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ಬೆನ್ನು ಬೀಳ್ತಿದ್ದಂತೆ ಓರ್ವ ಆತ್ಮಹತ್ಯೆಗೆ ಯತ್ನಿಸಿದ್ದ ಮತ್ತೊಬ್ಬ ಪೊಲೀಸರ ಅತಿಥಿಯಾಗಿದ್ದ. ನಾಲ್ಕು ವರ್ಷಗಳಿಂದ ಜೈಲಲ್ಲಿ ಮುದ್ದೆ ಮುರಿಯುತ್ತಿದ್ದ ಈ ನರರಾಕ್ಷಸರ ಆರೋಪ ಸಾಬೀತಾಗಿದ್ದು ಇಬ್ಬರಿಗೂ ಗಲ್ಲು ಶಿಕ್ಷೆ ವಿಧಿಸಿ ಚಿಕ್ಕಮಗಳೂರು ಕೋರ್ಟ್ ಆದೇಶಿಸಿದೆ.

ಈ ಅತ್ಯಾಚಾರಿಗಳು ಇತರೇ ಏಳೆಂಟು ಬೇರೆ-ಬೇರೆ ಪ್ರಕರಣದಲ್ಲೂ ಭಾಗಿಯಾಗಿದ್ರು. ಸ್ಥಳಿಯ ಮಹಿಳೆಯರಿಗೆ ಹಣ ನೀಡಿ ಬಾ ಅನ್ನೋದು, ಒಂಟಿ ಮಹಿಳೆ ಮನೆಗೆ ನುಗ್ಗಿ ಎಳೆದಾಡೋದು ಮಾಡ್ತಿದ್ರು ಎಂದು ಊರಿನ ಜನ ಪೊಲೀಸರಿಗೆ ದೂರು ನೀಡಿದ್ರು. ಸ್ವಾತಿಯ ಕೇಸ್ ದಾಖಲಾಗ್ತಿದ್ದಂತೆ ಪ್ರಕರಣದ ಬೆನ್ನು ಬಿದ್ದಿದ್ದ ಪೊಲೀಸರು ಇಬ್ಬರನ್ನು ಕರೆತಂದು ಕೃಷ್ಣನ ಜನ್ಮಸ್ಥಳದಲ್ಲಿ ಬಿಟ್ಟಿದ್ರು. ಈಗ ಇಬ್ಬರ ಮೇಲಿನ ಆರೋಪವೂ ಸಾಬೀತಾಗಿದೆ. 376(ಡಿ), 302, 201 376 (2) (ಎಂ) ಸೆಕ್ಷನ್ ಅಡಿ ಇವ್ರ ಮೇಲಿನ ಆರೋಪ ಸಾಬೀತಾಗಿದ್ದು ಇಂದು ಇಬ್ಬರಿಗೂ ಚಿಕ್ಕಮಗಳೂರು ಜಿಲ್ಲಾ ಸತ್ರ ನ್ಯಾಯಾಲಯ ಗಲ್ಲು ಶಿಕ್ಷಿ ವಿಧಿಸಿದೆ. ಅಂದೇ ಊರಿನ ಜನ ಹಾಗೂ ಹತ್ತವರು ಇಬ್ಬರಿಗೂ ನೇಣಿಗೆ ಹಾಕಬೇಕೆಂದು ಆಗ್ರಹಿಸಿದ್ರು. ಈಗ ಊರಿನವರು ಹಾಗೂ ಹೆತ್ತವರ ಆಸೆ ಈಡೇರಿದೆ. ಇಬ್ಬರಿಗೂ ಗಲ್ಲು ಶಿಕ್ಷೆ ಪ್ರಕಟವಾಗಿದ್ದಕ್ಕೆ ಮೃತಳ ಅಪ್ಪ ಈ ತೀರ್ಪು ತೃಪ್ತಿ ಹಾಗೂ ಸಂತೋಷ ತಂದಿದೆ. ಇವತ್ತು ಕಣ್ತುಂಬ ನಿದ್ದೆ ಮಾಡ್ತೀನಿ ಅಂತಾರೆ.

ಒಟ್ಟಾರೆ, ಸ್ವಾತಿ ಬೈಕ್ ಹತ್ತಿದ್ರೆ ಅಣ್ಣ ಅಥವಾ ಅಪ್ಪಂದಷ್ಟೆ. ಮೊಬೈಲ್ ಕೂಡ ಬಳಸುತ್ತಿರಲಿಲ್ಲ. ಅಂತಹ ಮುಗ್ಧ ಯುವತಿ ನರರಾಕ್ಷಸರ ಕಾಮಾಂಧಕ್ಕೆ ಬಲಿಯಾಗಿದ್ಲು. ಆದ್ರೀಗ, ನಾಲ್ಕು ವರ್ಷದಿಂದ ಜೈಲಲ್ಲಿ ಮುದ್ದೆ ಮುರಿಯುತ್ತಿದ್ದ ಸಂತೋಷ್ ಹಾಗೂ ಪ್ರದೀಪ್‍ಗೆ ಮರಣದಂಡನೆ ಶಿಕ್ಷೆಯಾಗಿರೋದು ಇಡೀ ಊರಿಗೆ ಖುಷಿ ತಂದಿದೆ. ಇಂದು ನಮ್ಮ ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿದೆ. ನನಗೆ ಬಂದ ಸ್ಥಿತಿ ಬೇರ್ಯಾರಿಗೂ ಬಾರದಿರಲಿ ಅಂತ ಮೃತಳ ತಂದೆ ಮಗಳ ನೆನೆದು ಕಣ್ಣೀರಿಡ್ತಿದ್ದಾರೆ.

Categories
Breaking News State

ರಸ್ತೆ ಗುಂಡಿಗಳಿಂದ ಉಂಟಾಗುವ ಅಪಘಾತಗಳಿಗೆ ಬಿಬಿಎಂಪಿ ಹೊಣೆ- ರಾಜ್ಯ ಹೈಕೋರ್ಟ್ ತೀರ್ಪು

ನಗರಗಳು ಎಷ್ಟೇ ಬೆಳೆದಂತೆ ಕಂಡರೂ ಕೂಡ ಮೂಲಭೂತಸೌಕರ್ಯಗಳಿಂದ ಜನ ಇಂದಿಗೂ ವಂಚಿತರಾಗಿ ಬದುಕುತ್ತಿದ್ದಾರೆ. ವಸತಿ, ನೀರಿನ ಸೌಲಭ್ಯ, ವಿದ್ಯುತ್, ರಸ್ತೆ ವ್ಯವಸ್ಥೆ ಹೀಗೆ ಹಲವಾರು ಸೌಲಭ್ಯಗಳಿಂದು ಬಹುತೇಕ ಜನ ದೂರ ಉಳಿದಿದ್ದಾರೆ. ಆದರೆ ಕೆಲ ಸೌಕರ್ಯಗಳು ಇಲ್ಲದೆ ಜನ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಾಕ್ಷಿ ಪಾತಾಳಕ್ಕೆ ಬಿದ್ದಂತೆ ಬಾಸವಾಗುವ ರಸ್ತೆ ಗುಂಡಿಗಳು. ರಸ್ತೆ ದುರಸ್ಥಿಯಿಂದ ಪ್ರಾಣ ಕಳೆದುಕೊಳ್ಳುವ ವಾಹನ ಸವಾರರ ಹೊಣೆ ಯಾರು ಎಂಬ ಪ್ರಶ್ನೆಗೆ ರಾಜ್ಯ ಹೈಕೋರ್ಟ್  ಮಹತ್ವದ ತೀರ್ಪೊಂದನ್ನ ನೀಡಿದೆ.

ರಸ್ತೆಗುಂಡಿ ಅಪಘಾತಕ್ಕೆ ಪಾಲಿಕೆಯೇ ಹೊಣೆ ಅಂತ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಇದೇ ವೇಳೆ ನ್ಯಾಯಾಲಯ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಉಂಟಾಗುತ್ತಿರುವ ಅಪಘಾತಗಳಿಗೆ ಬಿಬಿಎಂಪಿ ಹೊಣೆ ಎಂಬ ರಾಜ್ಯ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಬಿಬಿಎಂಪಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ಈ ಮೂಲಕ ಬಿಬಿಎಂಪಿಗೆ ಛಿಮಾರಿ ಹಾಕಿದೆ.

ರಸ್ತೆ ನಿರ್ವಹಣೆ ನಿರ್ಲಕ್ಷ್ಯದಿಂದ ಉಂಟಾಗುವ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುವ ಜವಬ್ದಾರಿ ಪಾಲಿಕೆಯದ್ದು ಎಂದು ಸುಪ್ರೀಂಕೋರ್ಟ್ ಹೇಳಿದೆ.

Categories
Breaking News District National State

ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ PFI &SDPI ಸಮರ : ರಾತ್ರೋರಾತ್ರಿ ಸಕ್ಕರೆನಾಡಲ್ಲಿ ಪ್ರಚೋದನಾ ಪೋಸ್ಟರ್ ಅಬ್ಬರ

ಅಯೋಧ್ಯೆ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದೆ. ಸುಪ್ರೀಂಕೋರ್ಟ್ ನ ಈ ತೀರ್ಪನ್ನು ಬಹುತೇಕ ಎರಡು ಸಮೂಹದವರು ಸ್ವಾಗತಿಸಿದ್ದು,ಹಿಂದು ಮುಸ್ಲಿಂ ಬಾಂಧ್ಯವ್ಯವನ್ನು‌ ಎತ್ತಿ‌ಹಿಡಿದು ಸಾಮರಸ್ಯ ಸಹಬಾಳ್ವೆಗೆ ಅವಕಾಶ ನೀಡಿದೆ ಅಂತಿದ್ರು.ಕೆಲವು ಮುಸ್ಲಿಂ ಸಂಘಟನೆಗಳು ಈ ತೀರ್ಪಿನ ವಿರುದ್ದ ದನಿ ಎತ್ತಿವೆ.‌ಶಾಂತಿಯಿಂದ ಬಗೆ ಹರಿಸಿಕೊಳ್ಳಲು ಮೇಲ್ಮನವಿಗೆ ಅವಕಾಶವಿದೆ‌ಯಾದ್ರು,ಬೇರೆ ಹೋರಾಟ ಮಾರ್ಗ‌ ಅನುಸರಿಸಲು‌ ಮುಂದಾಗಿದ್ದು ದೇಶದಲ್ಲಿ ಕೋಮು ಸೌಹಾರ್ದತೆ ಕದಡಲು‌ ಮುಂದಾಗಿವೆ. ಅದ್ರಲ್ಲೂ ಕರ್ನಾಟಕದಲ್ಲಿ PFI ಮತ್ತುSDPI ಮುಸ್ಲಿಂ ಸಂಘಟನೆಗಳು ಈ ಪ್ರಯತ್ನ‌ ಮಾಡ್ತಿದ್ದು ಸಕ್ಕರೆನಾಡಲ್ಲಿ ಶಾಂತಿ ಕದಡಲು ಮುಂದಾಗಿವೆ.

ಹೌದು ! ಸಕ್ಕರೆನಾಡು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ರಾಜ್ಯದಲ್ಲಿ ಸಕ್ರಿಯವಾಗಿರೋ ಮುಸ್ಲಿಂ ಸಂಘಟನೆಗಳಾದ PFI &SDPI ಶಾಂತಿ ಸೌಹಾರ್ಧತೆ ಕದಡುವ ಕೆಲಸಕ್ಕೆ ಮುಂದಾಗಿರೋ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ ಈ ಆರೋಪ ಮಾಡ್ತಿರೋದು‌ ಬೇರೆ ಯಾರು ಅಲ್ಲ. ಅಲ್ಲಿನ‌ ಸ್ಥಳೀಯ ಮುಸ್ಲಿಂ ಮುಖಂಡರುಗಳು.ಯಾಕೆಂದ್ರೆ ಇತ್ತೀಚೆಗಷ್ಟೆ ಸುಪ್ರೀಂಕೋರ್ಟ್ ಅಯೋಧ್ಯೆ ವಿಚಾರದಲ್ಲಿ ಮಹತ್ತರವಾದ ತೀರ್ಪು ನೀಡಿತ್ತು.ಇದನ್ನು‌ ಹಿಂದು‌ ಮುಸ್ಲಿಂ ಆದಿಯಾಗಿ ಬಹುತೇಕರು‌ ಸ್ವಾಗತಿಸಿದ್ರು.ಈ ತೀರ್ಪಿನಿಂದ ಸಾಮರಸ್ಯ ಮತ್ತಷ್ಟು‌ ಬಿಗಿಯಾಗಲಿದೆ ಅಂತಿದ್ರು.ಆದ್ರೆ

PFI &SDPI ಶಾಂತಿ ಸೌಹಾರ್ಧತೆ ಕದಡುವ ಕೆಲಸಕ್ಕೆ ಮುಂದಾಗಿದೆ. ಮಂಡ್ಯ ಜಿಲ್ಲೆಯ‌ ಮದ್ದೂರಿನ ರಾಮ್ ರಹೀಂ‌ ನಗರದಲ್ಲಿ ಅಯೋಧ್ಯೆ ಬಾಬರಿ ಮಸೀದಿ ತೀರ್ಪು ವಿಚಾರದಲ್ಲಿ ಬಾಬರಿ ತೀರ್ಪು, ನ್ಯಾಯದ ನಿರಾಕರಣೆ, ನ್ಯಾಯಕ್ಕಾಗಿ ಧ್ವನಿಯೆತ್ತಿರಿ ಎಂಬ ಕನ್ನಡ ಮತ್ತು ಉರ್ದು ಭಾಷೆಯಲ್ಲಿ ಪ್ರಚೋದನಕಾರಿ ಪೋಸ್ಟರ್ ಗಳನ್ನು ಅಂಟಿಸಿ ಹೋಗಿದ್ದು.ಮದ್ದೂರನ ಮುಸ್ಲಿಂ‌ ಬಡಾವಣೆಯಲ್ಲಿ ಆಂತಕ ಉಂಟುಮಾಡಿದೆ.ಈ ಬಡಾವಣೆಯಲ್ಲಿ ಹಿಂದು ಮುಸ್ಲಿಂರು ವಾಸಮಾಡ್ತಿದ್ದು‌ ಸಹಬಾಳ್ವೆ ನಡೆಸ್ತಿದ್ದು, ಶಾಂತಿ ಕದಡಲು PFI &SDPI ಈ ತರಹ ಪೋಸ್ಟರ್ ರಾತ್ರಿ ಅಂಟಿಸಿ ಹೋಗಿದ್ದಾರೆಂದು ಸ್ಥಳೀಯರು ದೂರಿದ್ದು, ನಮಗೆ ತೀರ್ಪಿನ ಬಗ್ಗೆ ಅಸಮಧಾನವಿಲ್ಲ. ಈ ಪೋಸ್ಟರ್ ಗು ನಮಗೂ‌ ಸಂಬಂಧವಿಲ್ಲ ಇದೂ ಕೋಮಗಲಭೆ ಸೃಷ್ಟಿಸಲು ಮಾಡಿದ್ದು,ನಾವು ಸಹೋದರತ್ವದ ಸಹಬಾಳ್ವೆ ನಡೆಸ್ತಿದ್ದು ಯಾವ ಹಿಂದುಗಳು‌‌‌ ಆತಂಕ ಪಡುವ ಅಗತ್ಯ ಇಲ್ಲ ಅಂದಿದ್ದಾರೆ.

ಇನ್ನು ಮದ್ದೂರಿನ ರಾಮ್ ರಹೀಂ ನಗರದಲ್ಲಿ ರಾರಾಜಿಸ್ತಿರೋ ಈ ಪ್ರಚೋದನಾಕಾರಿ ಪೋಸ್ಟರ್ ನಲ್ಲಿ ಹೋರಾಟಕ್ಕೆ ಕರೆ ನೀಡಿರೋದು ಒಂದು‌ ಕಡೆ ಹಿಂದುಗಳಿಗೆ ಆತಂಕಕ್ಕೆ ಕಾರಣವಾಗಿದೆ.‌ಈ ಪ್ರಚೋದನಾಕಾರಿ ಪೋಸ್ಟರ್ ಗಳ ಸುದ್ದಿ ತಿಳಿದು ಪೊಲೀಸ್ ಇಲಾಖೆ‌ ಕ್ರಮಕ್ಕೆ ಮುಂದಾಗಿದ್ದು ಈ ಪೋಸ್ಟರ್ ತೆಗೆಯುವಂತೆ ಆ ಸಂಘಟನೆಯವರಿಗೆ ಸೂಚಿಸದೆ. ಸ್ಥಳೀಯವಾಗಿ ಎರಡು ಕೋಮುಗಳ ನಡುವೆ ಗಲಭೆಗೆ ಕಾರಣವಾಗಲಿದ್ದು ಈ ಪ್ರಚೋದನಾಕಾರಿ ಯಾರು ಅಂಟಿಸಿದ್ದಾರೆ ಅನ್ನೋದ್ನ‌ ತಿಳಿಯಲು‌ ಮುಂದಾಗಿದೆ.ಪ್ರಚೋದನಕಾರಿ ಪೋಸ್ಟರ್ ತೆಗೆಸಲು ಪೊಲೀಸ್ ಎಸ್ಪಿ ಸೂಚಿಸಿದ್ದು ಗಲಭೆಗೆ ಅವಕಾಸದ ನೀಡದಂತೆ ತಿಳಿಸಿದ್ದಾರೆ.

ಒಟ್ಟಾರೆ ಮದ್ದೂರಿನ‌ ಮುಸ್ಲಿಂ ಬಡಾವಣೆಯಲ್ಲಿ‌ ಈ ಪ್ರಚೋದನಾಕಾರಿ ಪೋಸ್ಟರ್ ಇದೀಗ ಸ್ಥಳೀಯವಾಗಿ ಸಾಮರಸ್ಯದಿಂದರೋ ಎರಡು ಕೋಮುಗಳ ನಡುವೆ ಗಲಭೆ ಕಾರಣವಾಗುವ ಸೂಚನೆ ಕಾಣ್ತಿದೆ.‌ಪೊಲೀಸ್ ಇಲಾಖೆ‌ ಎಚ್ಚತ್ತು‌ ಇದರ ವಿರುದ್ದ ಸೂಕ್ತ ಕ್ರಮವಹಿಸಬೇಕಿದೆ.

 

 

 

Categories
Breaking News District Political State

ಕೋರ್ಟ್ ತೀರ್ಪಿನ ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್ ಸಿಎಂ ಭೇಟಿ : ಏನಿರಬಹುದು ಇದರ ಉದ್ದೇಶ..?

ನೆನ್ನೆ ಅನರ್ಹ ಶಾಸಕರಿಗೆ ಸುಪ್ರೀಕೋರ್ಟ್ ತೀರ್ಪು ನೀಡುತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಹೊಸ ಹೊಸ ಬದಲಾವಣೆಗಳು ನಡೆದಿವೆ.

ಹೌದು.. ಕೋರ್ಟ್ ತೀರ್ಪಿನ ಬಳಿಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ಕೊಟ್ಟಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಮೈತ್ರಿ ಸರ್ಕಾರದ ಶಾಸಕರು ಬಿಜೆಪಿ ಸೇರಲು ಸಿದ್ದರಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಕೂಡ ಇದೆ. ಹೀಗಾಗಿ ಪ್ರತೀ ಬಾಋಇ ರಮೇಶ್ ಜಾರಕಿಹೊಳಿಗೆ ಕಾಳೆಯುತ್ತಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಯಾವ ಉದ್ದೇಶಕ್ಕೆ ಸಿಎಂ ಭೇಟಿ ಮಾಡಿರಬಹುದು ಎನ್ನುವ ಅನುಮಾನ ಶುರುವಾಗಿದೆ.

ಆದರೆ ಈ ಬಗ್ಗೆ ಲಕ್ಷ್ಮ ಹೆಬ್ಬಾಳ್ಕರ್ ಮಾತ್ರ ತಾವು ಕ್ಷೇತ್ರದ ಕೆಲಸಕ್ಕಾಗಿ ಸಿಎಂ ಭೇಟಿ ಮಾಡಿರುವುದಾಗಿ ತಿಳಿಸಿದ್ದಾರೆ.

ಭೇಟಿ ಮೂಲಕ ನೀವು ಪಕ್ಷ ಬಿಟ್ಟು ಅನರ್ಹರಾಗಿ ಬಿಜೆಪಿ ಸೇರಿದರೂ ಸಿಎಂ ಹಾಗೂ ನನ್ನ ಬಾಂಧವ್ಯ ಹೇಗಿದೆ ಅಂತ ತೋರಿಸಿಕೊಳ್ಳುವ ಪ್ರಯತ್ನ ಎನ್ನಲಾಗುತ್ತಿದೆ. ಅಲ್ಲದೆ ಲಕ್ಷ್ಮಿ ಹೆಬ್ಬಾಳ್ಕರ್ ನಿನ್ನೆಯ ಭೇಟಿ ಒಂದು ಹಂತದಲ್ಲಿ ಸಿಎಂ ಯಡಿಯೂರಪ್ಪರಿಗೆ ಇರಿಸು ಮುರಿಸಾಗಿಸಿದೆ ಎಂಬ ಮತುಗಳು ಕೇಳಿ ಬರುತ್ತಿವೆ. ಲಕ್ಷ್ಮಿ ಹೆಬ್ಬಾಳ್ಕರ್ ತಂದಿದ್ದ ಬೇಡಿಕೆಗಳಿಗೆಲ್ಲ ಆಯ್ತು ಮಾಡೋಣ ಎಂದು ಸಿಎಂ ಹೇಳಿದ್ದಾರೆ. ಯಾಕಂದರೆ ಎಲ್ಲಾದರು ಈ ಬೆಳವಣಿಗೆ ರಮೇಶ್ ಜಾರಕಿಹೋಳಿ ಕಣ್ಣು ಕೆಂಪಾಗಿಸಬಹುದು ಎಂದು ಸಿಎಂ ಕೂಡ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಬೇಗ ಕಳುಹಿಸಿ ಕೈ ತೊಳೆದುಕೊಂಡಿದ್ದಾರೆ.

ಇತ್ತ ಕಾಂಗ್ರೆಸ್ ಪಾಳಯದಲ್ಲು ಕೂಡ ಇಂತದ್ದೇ ಗುಮಾನಿ ವ್ಯಕ್ತವಾಗುತ್ತಿದೆ. ಕ್ಷೇತ್ರದ ಕೆಲಸವೇ ಇರಬಹುದು ಆದರೆ ಅನರ್ಹ ಶಾಸಕರ ಕುರಿತ ಕೋರ್ಟ್ ತೀರ್ಪಿನಂತಹ ಮಹತ್ವದ ದಿನ ಹೋಗಿದ್ದೇಕೆ. ಆ ನಡೆ ಹಿಂದಿನ ಲೆಕ್ಕಾಚಾರ ಏನು ಅನ್ನೋ ಅಸಮಾಧಾನ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಚಾಣಕ್ಷ ನಡೆಯ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಿಎಂ ಭೇಟಿ ಕೇವಲ ಕ್ಷೇತ್ರದ ಕೆಲಸಕ್ಕಲ್ಲ. ನಿನ್ನೆಯ ಭೇಟಿ ಉದ್ದೇಶ ಪೂರ್ವಕ ಮತ್ತು ಮಾಜಿ ರಾಜಕೀಯ ಗುರುವಿಗೆ ಹಾಕಿದ ಪರೋಕ್ಷ ಸವಾಲು ಎಂದು ಹೇಳಲಾಗುತ್ತಿದೆ.

Categories
Breaking News District Political State

ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿದ ನಾರಾಯಣಗೌಡ ಬೆಂಬಲಿಗರಿಂದ ಉಪಚುನಾವಣೆಗೆ ಸಿದ್ದತೆ….

ರಾಜ್ಯ ರಾಜಕೀಯದಲ್ಲಿ‌ ಸಂಚಲನ ಉಂಟು ಮಾಡಿದ ಅನರ್ಹ ಶಾಸಕರ ತೀರ್ಪು ಇಂದು ಪ್ರಕಟವಾಯ್ತು.ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ಕೋರ್ಟ್ ತೀರ್ಪು ಒಂದು ಕಡೆ ಚುನಾವಣೆಗೆ ನಿಲ್ಲಲು ಅವಕಾಶ ಕಲ್ಪಿಸಿದ್ದು,ಒಂದು ಸಂತಸ ತಂದ್ರೆ,ಮತ್ತೊಂದು ಕಡೆ ಸ್ಪೀಕರ್ ಅನರ್ಹನತೆ ಎತ್ತಿ ಹಿಡಿದಿದ್ದು ಮಂತ್ರಿಯಾಗಿ ಚುನಾವಣೆ ಎದುರಿಸುವ ಕನಸಿಗೆ ತಣ್ಣೀರೆರಚಿದೆ. ಅದ್ರಲ್ಲೂ ಸಕ್ಕರೆನಾಡು ಮಂಡ್ಯದ ಕೆ.ಆರ್.ಪೇಟೆಯ ಅನರ್ಹ‌ಶಾಸಕ ನಾರಾಯಣಗೌಡಗೆ ಬಿಗ್ ರಿಲೀಪ್ ಸಿಕ್ಕಿದಂತಾಗಿದ್ದು ಮತ್ತೆ ಉಪ ಚುನಾವಣೆ ಎದುರಿಸುವ ಅವಕಾಶ ಸಿಕ್ಕಿರೋದು ಅನರ್ಹ ಶಾಸಕ ಮತ್ತು ಮತ್ತವರ ಬೆಂಬಲಿಗರ ಸಂತಸಕ್ಕೆ ಕಾರಣವಾಗಿದೆ‌.

ಹೌದು ! ಇಂದು ಸುಪ್ರೀಂಕೋರ್ಟ್ನಲ್ಲಿ ರಾಜ್ಯದ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ೧೭ ಜನ ಅನರ್ಹ ಶಾಸಕರ ಪ್ರಕರಣದ ತೀರ್ಪು ಪ್ರಕಟವಾಯ್ತು. ಸುಪ್ರೀಂಕೋರ್ಟ್ ನ ತೀರ್ಪಿನ ಮೇಲೆ ಅನರ್ಹ ಶಾಸಕ ಭವಿಷ್ಯ ನಿಂತಿತ್ತು.ಆಗಾಗಿ ಇಂದು ಬಹುತೇಕ ಅನರ್ಹ ಶಾಸಕರ ಬೆಂಬಲಿಗರು ದೇವರ ಮೊರೆ ಹೋಗಿದ್ರು.ಅದೇ ರೀತಿ ಸಕ್ಕರೆನಾಡು ಮಂಡ್ಯದ ಕೆ.ಆರ್.ಪೇಟೆಯಲ್ಲಿ ಅನರ್ಹ ಶಾಸಕನ‌ ಬೆಂಬಲಿಗರು ಪಟ್ಟಣದ ಭ್ರಮರಾಂಭ ದೇವಾಲಯದಲ್ಲಿ ಸುಪ್ರೀಂಕೋರ್ಟ್ ತೀರ್ಪು ಪರವಾಗಿ ಬರಲೆಂದು ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದ್ರು.

ಇನ್ನು ಪೂಜೆ ಸಲ್ಲಿಕೆ ಬಳಿಕ ಪಟ್ಡಣದ ಅನರ್ಹ ಶಾಸಕನ‌ ಮನೆಯಲ್ಲಿ ಕುಳಿತು ಸುಪ್ರೀಂಕೋರ್ಟ್ ತೀರ್ಪಿಗೆ ಕಾಯ್ದು ಕುಳಿತ್ರು. ತೀರ್ಪು ಪೂರ್ಣ ಪ್ರಮಾಣದಲ್ಲಿ ಪರವಾಗಿ ಬಂದಿದ್ರೆ ಬೆಂಬಲಿಗರು ಭರ್ಜರಿ ಸಂಭ್ರಮಾಚರಣೆಗೆ ಬೇಕಾದ ಸಿದ್ದತೆ ನಡೆಸಿದ್ರು.ಆದ್ರೆ ಸುಪ್ರೀಂಕೋರ್ಟ್ ತೀರ್ಪು ಅನರ್ಹತೆಯನ್ನು ಎತ್ತಿ ಹಿಡಿದು,ಚುನಾವಣೆಗೆ ಅನರ್ಹರ ನಿಲ್ಲಲು ಅವಕಾಶ ನೀಡಿದ್ದು ಕೊಂಚ ಸಮಾಧಾನ ತಂದಿತ್ತು. ಅನರ್ಹ ಶಾಸಕನ ಬೆಂಬಲಿಗರು ಸುಪ್ರೀಂಕೋರ್ಟ್ ತೀರ್ಪುನ್ನು ಅನರ್ಹ ಶಾಸಕನ ಮನೆಯಲ್ಲೇ ಕುಳಿತು ಮೊಬೈಲ್ ಟಿವಿಗಳ ಮೂಲಕ ನೋಡಿ ಚುನಾವಣೆಗೆ ಅವಕಾಶ ನೀಡಿದ ಸುಪ್ರೀಂಕೋರ್ಟ್ ನ ತೀರ್ಪನ್ನು  ಸ್ವಾಗತಿಸಿದ್ರು.ಬಳಿಕ ಸುದ್ದಿಘೋಷ್ಟಿ ನಡೆಸಿದ ಅನರ್ಹ ಶಾಸಕನ ಬೆಂಬಲಿಗರು ತೀರ್ಪುನ್ನ ಸ್ವಾಗತಿಸ್ತಿವಿ. ಉಪ ಚುನಾವಣೆಯಲ್ಲಿ ಗೆದ್ದು ನಮ್ಮ ನಾರಾಯಣಗೌಡ್ರು‌ ಮಂತ್ರಿಯಾಗ್ತಾರೆ ಅದಕ್ಕೆ ಚುನಾವಣೆ ಬೇಕಾದ ತಯಾರಿಗೆ ಸಿದ್ದತೆ‌ ಮಾಡಿಕೊಳ್ತೀವಿ ಅಂದಿದ್ದು, ನಾಳೆ ನಮ್ಮ‌ನಾಯಕರು ಬಂದ ಮೇಲೆ ಸಭೆ ನಡೆಸಿ ಚರ್ಚಿಸ್ತಿವಿ ಅಂದಿದ್ದಾರೆ.

ಒಟ್ಟಾರೆ ಸುಪ್ರೀಂಕೋರ್ಟ್ ನೀಡಿದ ಈ ತೀರ್ಪು ಅನರ್ಹರಿಗೆ ಕೊಂಚ ನೆಮ್ಮದಿ‌ ತಂದಿದೆ. ಅದ್ರಲ್ಲೂ‌ ಮಂಡ್ಯ ಜಿಲ್ಲೆಯ ಈ ಅನರ್ಹ ಶಾಸಕ ನಾರಾಯಣಗೌಡರಿಗೆ ಸುಪ್ರೀಂಕೋರ್ಟ್ ನ ತೀರ್ಪು ಮತ್ತಷ್ಟು ಹುಮ್ಮಸ್ಸು ತಂದಿದ್ದು, ಚುನಾವಣೆ ಗೆಲ್ಲುವ ಹುರುಪು ತಂದಿದೆ. ಅನರ್ಹಗೊಂಡವರು ಚುನಾವಣೆ ಸ್ಪರ್ಧೆಗೆ ಇದ್ದ ತೊಡಕು ಸುಪ್ರೀಂಕೋರ್ಟ್ ನ‌ ತೀರ್ಪಿನಿಂದ ಮುಗಿದಿದ್ದು, ಮುಂದಿನ ಯೋಚನೆ ಮತ್ತು ಯೋಜನೆ ಹೇಗಿರಲಿದೆ ಅನ್ನೋದ್ನ ಕಾದು ನೋಡಬೇಕಿದೆ.

Categories
Breaking News District Political State

ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿದ ಸಿದ್ದರಾಮಯ್ಯ ಹೇಳಿದ್ದೇನು..?

ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಮಾತನಾಡಿದ ಸಿದ್ದರಾಮಯ್ಯ.. ಸುಪ್ರೀಂಕೋರ್ಟ್, ರಾಜೀನಾಮೆ ವಾಸ್ತವಿಕತೆಯಿಂದ ಕೂಡಿಲ್ಲವೆಂಬ ಆದೇಶವನ್ನ ಭಾಗಶಃ ಎತ್ತಿಹಿಡಿದಿದೆ ಎಂದಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಕರ್ನಾಟಕದ ಸ್ಪೀಕರ್ ಅವರ ಆದೇಶವನ್ನ ಭಾಗಶಃ ಎತ್ತಿ ಹಿಡಿದಿದ್ದಾರೆ. ನಾನು ಈ ತೀರ್ಪನ್ನು ಸ್ವಾಗತಿಸುತ್ತೇನೆ, ಅನರ್ಹ ಶಾಸಕರು ವಿಪ್ ಉಲ್ಲಂಘನೆ ಮಾಡಿದ್ದರು, ನಾವು ಪೆಟಿಷನ್ ಹಾಕಿದ್ದೆವು, ಅದರ ಆಧಾರದ ಮೇಲೆ ವಿಚಾರಣೆ ನಡೆಸಿ ಇಂದು ತೀರ್ಪು ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದ್ರು.

ರಾಜೀನಾಮೆ ವಾಸ್ತವಿಕತೆಯಿಂದ ಕೂಡಿಲ್ಲ ಎಂದು 17 ಜನರನ್ನೂ ಅನರ್ಹರನ್ನಾಗಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ, ಮೊದಲನೆಯದಾಗಿ ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗಿದ್ದರಿಂದ ಅನರ್ಹರರಾಗಿದ್ದಾರೆ. ಎರಡನೆಯದ್ದು ಈ ಅವಧಿಗೆ ಚುನಾವಣೆಗೆ ನಿಲ್ಲಲು ಹೇಳಿದ್ದಾರೆ. ಡೆಮಾಕ್ರಸಿ ಮತ್ತು ಟೆನ್ತ್ ಶೆಡ್ಯೂಲ್​​ನಲ್ಲಿ ರಾಜೀನಾಮೆ ಕೊಡಬಾರದು ಅಂತಿಲ್ಲ, ಆದರೆ ಬಾಹ್ಯ ಒತ್ತಡವಿಲ್ಲದಿದ್ದರೆ ಅವರ ರಾಜೀನಾಮೆಯನ್ನ ಒಪ್ಪುವಂತಿಲ್ಲ ಎಂಬುದನ್ನ ಕೋರ್ಟ್ ಎತ್ತಿಹಿಡಿದಿದೆ ಎಂದಿದ್ದಾರೆ.

ಮನಸೋ ಇಚ್ಛೆ ನಡೆದುಕೊಳ್ಳೋ ಹಾಗಿಲ್ಲ, ಹೀಗಾಗಿ ಸುಪ್ರೀಂ ಕೋರ್ಟ್ ನೈತಿಕತೆ ಪದವನ್ನ ಬಳಸಿದೆ. ನಾನು ಸುಪ್ರೀಂ ಕೋರ್ಟ್​ನ ತೀರ್ಪನ್ನ ಸಂಪೂರ್ಣವಾಗಿ ಸ್ವಾಗತಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಗಡ್ಡ  ಬಿಟ್ಟಿರುವ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಈ ಹಿಂದೆಯೂ ಬಿಟ್ಟಿದ್ದೆ, ಈಗಲೂ ಬಿಡಬೇಕು ಎನ್ನಿಸಿತು ಅದಕ್ಕೆ ಬಿಟ್ಟಿದ್ದೇನೆ ಎಂದು ಸಿದ್ದರಾಮಯ್ಯ ನಕ್ಕರು.

Categories
Breaking News District National State

Supreme Ayodhya Verdict Published : ವಿವಾದಿತ ಜಮೀನು ರಾಮಲಲ್ಲಾ ಪಾಲು : ರಾಮಮಂದಿರ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್

ವಿವಾದಿತ ರಾಮಜನ್ಮಭೂಮಿ ಪ್ರಕರಣದ ವಿವಾದ ವಿಚಾರದಲ್ಲಿ ಸುಪ್ರೀಂಕೋರ್ಟ್​ ಇಂದು ತೀರ್ಪು ಪ್ರಕಟ ಮಾಡಿದೆ.

ಹೌದು..  ಎಲ್ಲಾ ಧರ್ಮವನ್ನೂ ಗೌರವಿಸುವುದಾಗಿ ಹೇಳಿದ ಸುಪ್ರೀಂ ಕೋರ್ಟ್​ನ ಸಾಂವಿಧಾನಿಕ ಪೀಠ, ಕೇವಲ ನಂಬಿಕೆಗಳಿಂದ ಭೂಮಿಯ ಹಕ್ಕುದಾರಿಕೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಜತೆಗೆ ಹಿಂದೂಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿ ಅಯೋಧ್ಯೆಯಲ್ಲಿ ಜಾಗವನ್ನು ನೀಡಿ ಸುಪ್ರೀಂ ಕೋರ್ಟ್​ ಆದೇಶಿಸಿದೆ.  ಇನ್ನು ಮುಸ್ಲಿಂ ಸಮುದಾಯಕ್ಕೆ ಬದಲಿ ಜಾಗವನ್ನು ನೀಡಲು ಸಹ ಸುಪ್ರೀಂ ಕೋರ್ಟ್​ ಆದೇಶಿಸಿದೆ. ಈ ಮೂಲಕ ಅತಿ ಹಳೆಯ ವಿವಾದಕ್ಕೆ ತೆರೆ ಎಳೆದಿದೆ.

ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಇದ್ದ ಜಾಗದ 2.77 ಎಕರೆ ವಿವಾದಿತ ಭೂಮಿ ಯಾರಿಗೆ ಸೇರಿದ್ದು ಎಂಬುದೇ ಈಗ ಈ ಪ್ರಕರಣದ ವಸ್ತುವಾಗಿದೆ. 1528 ಶ್ರೀರಾಮ ಹುಟ್ಟಿದ ಸ್ಥಳ ಎಂದು ನಂಬಲಾಗುವ ಅಯೋಧ್ಯೆಯಲ್ಲಿ ಬಾಬರ್‌ ಮಸೀದಿ ನಿರ್ಮಾಣ ಮಾಡಿದ್ದ. ರಾಮ ಮಂದಿರ ಕೆಡವಿ ದೇವಾಲಯ ನಿರ್ಮಿಸಲಾಗಿದೆ ಎಂಬುದು ಆರೋಪ.

ಇದು ಸುಳ್ಳು. ಬಾಬ್ರಿ ಮಸೀದಿ ಜಾಗ ತಮಗೆ ಸೇರಿದ್ದು ಎಂಬುದು ಸುನ್ನಿ ವಕ್ಫ್ ಮಂಡಳಿಯ ವಾದ. ಹಾಗೆಯೇ ನಿರ್ಮೋಹಿ ಅಖಾಡ ಕೂಡ ಇದು ತನಗೆ ಸೇರಿದ್ದೆಂದು ಹೇಳುತ್ತಿದೆ. 2010ರಲ್ಲಿ ಅಲಾಹಾಬಾದ್ ಉಚ್ಚ ನ್ಯಾಯಾಲಯವು ಈ ಮೂರೂ ಗುಂಪುಗಳಿಗೆ ವಿವಾದಿತ ಭೂಮಿಯನ್ನು ಸಮಾನವಾಗಿ ಹಂಚುವ ತೀರ್ಪು ನೀಡಿತ್ತು. ಆ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಹಲವು ಮೇಲ್ಮನವಿಗಳು ದಾಖಲಾದವು. ಈಗ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂ ನ್ಯಾಯಪೀಠವು ಇದರ ವಿಚಾರಣೆ ನಡೆಸಿ, ತೀರ್ಪು ನೀಡಿದೆ.

 

Categories
Breaking News District National Political State

ಅಯೋಧ್ಯೆ ತೀರ್ಪು ಏನೆ ಬಂದರು ಅದನ್ನ ಸ್ವೀಕರಿಸುವ ಮನೋಭಾವ ಇರಬೇಕು – ಶಾಸಕ ತನ್ವೀರ್ ಸೇಠ್

ಐತಿಹಾಸಿಕ ಅಯೋಧ್ಯೆ ತೀರ್ಪು ಇಂದು ಪ್ರಕಟವಾಗುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದೇ ಇರಲು ತೀರ್ಪು ಏನೆ ಬಂದರು ಅದನ್ನ ಸ್ವೀಕರಿಸುವ ಮನೋಭಾವ ಇರಬೇಕು ಎಂದು ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

ನಾವು ಸರ್ವೋಚ್ಚ ನ್ಯಾಯಾಲಯದ ಬಗ್ಗೆ ಗೌರವ ವ್ಯಕ್ತಪಡಿಸಬೇಕು. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಬಾರದು. ಕೆಲ ವ್ಯಕ್ತಿಗಳು ಮಾಡುವ ಹಿಂಸಾತ್ಮಕ ಕೆಲಸ ಬಿಡಬೇಕು. ಸಂವಿಧಾನದ ಆಶಯದಂತೆ ನಾವು ನಡೆಯಬೇಕು. ನಾವೆಲ್ಲ ಭಾರತೀಯರು, ಭಾರತ ಕಟ್ಟುವ ಸಂಕಲ್ಪ ತೊಡಬೇಕು. ನನ್ನ ಎಲ್ಲ ಸಮುದಾಯದವ್ರಿಗೆ ಈ ಮೂಲಕ ಮನವಿ ಮಾಡುತ್ತೇನೆ ಎಂದರು.

ಜೊತೆಗೆ ನಿಮ್ಮ ಭಾವನೆ ಏನೇ ಇದ್ದರು ಅದನ್ನ ಸಾಮಾಜಿಕ ಜಾಲತಾಣದಲ್ಲಿ ಹರಡಬೇಡಿ. ಅದನ್ನ ಲಿಖಿತ ಹಾಗೂ ಮನವಿ ಮಾಡಿಕೊಳ್ಳೋ ಅವಕಾಶ ಇರುತ್ತೆ. ಹಿಂಸೆ, ತೊಂದರೆ ಕೋಡೋದು, ವದಂತಿ ಹಬ್ಬಿಸೋದು ಬೇಡ. ನಮ್ಮ ನಿರೀಕ್ಷೆಗೆ ತಕ್ಕಂತೆ ಎಲ್ಲವು ಆಗೋದಿಲ್ಲ. ಭಗವಂತ ಕೊಡುವ ತೀರ್ಪು ಗೌರವಿಸೋಣ. ನಮ್ಮ ಅಕ್ಕ ಪಕ್ಕದ ನಿವಾಸಿಗಳು ಎಲ್ಲರು ಪ್ರೀತಿ ಇಂದ ಇರೋಣ. ನಮಗೆ ಸೌಹಾರ್ದ ಪ್ರೀತಿ ವಿಶ್ವಾಸ ಮುಖ್ಯ ಎಂದಿದ್ದಾರೆ.

Categories
Breaking News District National Political State

ಮತ್ತೆ ಅನರ್ಹ ಶಾಸಕರಿಗೆ ನಿರಾಸೆ : ಸುಪ್ರೀಂ ಕೋರ್ಟ್ ತೀರ್ಪು ವಿಳಂಬಕ್ಕೆ ಟೆನ್ಶನ್.. ಟೆನ್ಶನ್..

ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬರುವುದು ವಿಳಂಬವಾಗುತ್ತಲೇ ಇದೆ. ಇಂದು ತೀರ್ಪು ಬಂದೇ ಬರುತ್ತೆ ಎಂದು ನಂಬಿಕೊಂಡಿದ್ದ ಅನರ್ಹ ಶಾಸಕರಿಗೆ ನಿರಾಸೆಯಾಗಿದೆ. ಇವತ್ತು ತೀರ್ಪು ಬರುತ್ತಿಲ್ಲ. ನಾಳೆ ತೀರ್ಪು ಪ್ರಕಟವಾಗುತ್ತದೋ ಇಲ್ಲವೋ ಖಾತ್ರಿ ಇಲ್ಲ. ನಾಳೆ ತೀರ್ಪು ಪ್ರಕಟವಾಗುವುದಿದ್ದರೆ ಇವತ್ತು ಸಂಜೆಯೊಳಗೆ ಲಿಸ್ಟ್ ಸಿದ್ಧವಾಗುತ್ತದೆ. ಸಂಜೆಯ ಬೆಳವಣಿಗೆ ನೋಡಿಕೊಂಡು ಅನರ್ಹ ಶಾಸಕರು ನಾಳೆ ಮುಂದಿನ ಹೆಜ್ಜೆ ಇಡಲಿದ್ದಾರೆ.

ಡಿಸೆಂಬರ್ 5ರಂದು ಉಪಚುನಾವಣೆ ನಿಗದಿಯಾಗಿದೆ. ನ. 11ರಿಂದ ನೀತಿ ಸಂಹಿತೆ ಜಾರಿ ಬರುತ್ತದೆ. ಉಪಚುನಾವಣೆ ಸಮೀಪಿಸುತ್ತಿದೆ. ನೀತಿ ಸಂಹಿತೆಗೆ ನಾಲ್ಕೇ ದಿನ ಬಾಕಿ ಉಳಿದಿದೆ. ಒಂದು ವೇಳೆ ನ. 11ರೊಳಗೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗದಿದ್ದರೆ ಅನರ್ಹ ಶಾಸಕರಿಗೆ ತ್ರಿಶಂಕು ಸ್ವರ್ಗವೇ ಗತಿ. ಇದು ಈ ಶಾಸಕರಿಗೆ ಚಿಂತೆಯ ವಿಷಯವಾಗಿದೆ.

ಒಂದು ವೇಳೆ ನಾಳೆ ತೀರ್ಪು ಪ್ರಕಟವಾಗುವ ಸಾಧ್ಯತೆ ಇಲ್ಲದೇ ಇದ್ದರೆ ಉಪಚುನಾವಣೆಯನ್ನೇ ಮುಂದೂಡುವಂತೆ ಅನರ್ಹ ಶಾಸಕರು ನಿರ್ಧರಿಸಿದ್ದಾರೆ. ಅನರ್ಹತೆಯ ಪ್ರಕರಣದಲ್ಲಿ ತೀರ್ಪು ಪ್ರಕಟವಾಗುವವರೆಗೂ ಉಪಚುನಾವಣೆಯನ್ನು ಮುಂದೂಡಿ ಎಂದು ಮನವಿ ಮಾಡಲಿದ್ದಾರೆ. ಆ ಅರ್ಜಿ ನಾಳೆಯೇ ಹಾಕಬೇಕು. ಒಂದು ವೇಳೆ, ನಾಳೆ ಅರ್ಜಿ ಹಾಕದಿದ್ದರೆ ಶನಿವಾರ ಮತ್ತು ಭಾನುವಾರ ಕೋರ್ಟ್ ರಜೆ ಇರುತ್ತದೆ. ಸೋಮವಾರ ನೀತಿ ಸಂಹಿತೆ ಅಸ್ತಿತ್ವಕ್ಕೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ಉಪಚುನಾವಣೆ ಮುಂದೂಡುವಂತೆ ಸುಪ್ರೀಂ ಕೋರ್ಟ್​​ನಲ್ಲಿ ನಾಳೆಯೇ ಆರ್ಜಿ ಹಾಕಿ, ಅದು ತುರ್ತಾಗಿ ವಿಚಾರಣೆಯಾಗಿ ನಾಳೆಯೇ ತೀರ್ಪು ಬರಬೇಕು. ಇಲ್ಲದಿದ್ದರೆ ಸಂಕಷ್ಟವೇ. ಇವತ್ತು ಸಂಜೆಯೊಳಗೆ ಅನರ್ಹ ಶಾಸಕರ ಮುಂದಿನ ಹೆಜ್ಜೆ ಏನು ಎಂಬುದು ಸ್ಪಷ್ಟವಾಗಲಿದೆ.

Categories
Breaking News District Political State

ಸುಪ್ರೀಂಕೋರ್ಟ್ ತೀರ್ಪುನ ಮೇಲೆ ಉಪ ಚುನಾವಣೆ ನಿಂತಿದೆ – ಸಿಟಿ ರವಿ

ಸುಪ್ರೀಂಕೋರ್ಟ್ ತೀರ್ಪುನ ಮೇಲೆ ಉಪ ಚುನಾವಣೆ ನಿಂತಿದೆ. ಉಪ ಚುನಾವಣೆಯ ಮೇಲೆ ಸುಪ್ರೀಂಕೋರ್ಟ್ ತೀರ್ಪು ಪರಿಣಾಮ ಬೀರಲಿದೆ ಎಂದು ಉಪಚುನಾಣೆ ನಡೆಯುವ ಬಗ್ಗೆ ಚಿಕ್ಕಮಗಳೂರಿನಲ್ಲಿ ಸಚಿವ ಸಿ.ಟಿ.ರವಿ ಅನುಮಾನ ಹೊರಹಾಕಿದ್ದಾರೆ.

ಚುನಾವಣಾ ಆಯೋಗ ಉಪ ಚುನಾವಣೆಯನ್ನು ಘೋಷಣೆ ಮಾಡಿದೆ. ಆದ್ರೆ, ಉಪ ಚುನಾವಣೆಗೆ ಕೆಲವೊಂದು ತಾಂತ್ರಿಕ ತೊಡಕುಗಳಿವೆ. ಹಿಂದಿನ ಸಭಾಧ್ಯಕ್ಷ ರಮೇಶ್ ಕುಮಾರ್ ಅವರ ತೀರ್ಪಿನ ಮೇಲೆ ಅನರ್ಹರು ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ.

ಅನರ್ಹ ಶಾಸಕರ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇದೆ. ಈಗಿರುವಾಗ, ಸುಪ್ರೀಂ ನೀಡುವ ತೀರ್ಪುನ ಮೇಲೆ ಈ ಚುನಾವಣೆ ನಡೆಯತ್ತೋ ಇಲ್ಲವೋ, ನಡೆದರೆ ಯಾವಾಗ ಎನ್ನುವುದರ ಬಗ್ಗೆ ನಿರ್ಧಾರವಾಗಲಿದೆ. ಬಿಜೆಪಿ ಚುನಾವಣೆಗಳಿಗೆ ಸದಾ ಸಿದ್ದ. ಉಪ ಚುನಾವಣೆಗೆ ಮಾತ್ರವಲ್ಲ ಸಂಘಟನೆಯಿಂದಲೂ ಎಲ್ಲಾ ಹಂತದಲ್ಲಿ ತಯಾರಿ ನಡೆದಿರುತ್ತೆ ಎಂದು ಸಿ.ಟಿ ರವಿ ಉಪಚುನಾವಣೆ ನಡೆಯುವ ಬಗ್ಗೆ ಅನುಮಾನ ಸೂಚಿಸಿದ್ದಾರೆ.