ಈ ಮಟ್ಟಕ್ಕೆ ದೇಶದಲ್ಲಿ ಕಾಂಗ್ರೆಸ್ ಕುಸಿದಿದೆ : ಮಹಾರಾಷ್ಟ್ರ, ಹರ್ಯಾಣದಲ್ಲೂ ಗೆಲುವು ನಮ್ಮದೇ – ಕಾರಜೋಳ

ಮಹಾರಾಷ್ಟ್ರ, ಹರ್ಯಾಣ ಫಲಿತಾಂಶ ವಿಚಾರವಾಗಿ ಬಾಗಲಕೋಟೆಯ ಒಂಟಗೋಡಿ ಗ್ರಾಮದಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಎರಡು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತ ವಿಶ್ವಾಸವಿತ್ತು ಎಂದಿದ್ದಾರೆ.

ಈ ಹಿಂದೆ ಐದು ವರ್ಷದ ಸಿಎಂ ಪಡ್ನವೀಸ್ ಆಡಳಿತ ನೋಡಿ ಯಾವ ರೀತಿ ಮೋದಿಜಿಗೆ ಬೆಂಬಲಿಸಿದ್ರು‌. ಹಾಗೆಯೇ ಮಹಾರಾಷ್ಟ್ರದಲ್ಲೂ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಗೆ ಸ್ವಾತಂತ್ರ್ಯ ನಂತರ ಪ್ರಚಾರಕ್ಕೂ ಹೋಗದ ಸ್ಥಿತಿ ಬಂದಿದೆ. ಸೋನಿಯಾ, ರಾಹುಲ್ ಗಾಂಧಿ ಮಹಾರಾಷ್ಟ್ರ ಪ್ರಚಾರಕ್ಕೆ ಹೋಗಲಿಲ್ಲ. ಆ ಮಟ್ಟಕ್ಕೆ ದೇಶದಲ್ಲಿ ಕಾಂಗ್ರೆಸ್ ಕುಸಿದು ಹೋಗಿದೆ.

ಇನ್ಮುಂದೆ ದೇಶದಲ್ಲಿ ಬಿಜೆಪಿಯದ್ದೆ, ನರೇಂದ್ರ ಮೋದಿಯವರದೆ ಆಡಳಿತ. ವಿಪಕ್ಷವೂ ಇರಲೇಬೇಕು. ಸರ್ಕಾರ ತಪ್ಪು ಹೆಜ್ಜೆಯಿಟ್ಟಾಗ ಸಲಹೆ ಸೂಚನೆ ಕೊಡೋಕೆ ಬೇಕು. ಅದನ್ನು ಉಳಿಸಿಕೊಳ್ಳೋದು ಬಿಡೋದು ಅವ್ರಿಗೆ ಬಿಟ್ಟಿದ್ದು ಎಂದು ವ್ಯಂಗ್ಯ ಮಾಡಿದ್ದಾರೆ.

ಮಹಾದಾಯಿ ನದಿ ವಿಚಾರವಾಗಿ ಕೇಂದ್ರ ಪರಿಸರ ಇಲಾಖೆ ಸಮ್ಮತಿ ಪತ್ರ ಪಡೆಯಲು  ಈಗಾಗಲೇ ಮೋದಿಯವರಿಗೆ ಮನವಿ ಮಾಡಿದ್ದೇವು. ಆದಷ್ಟು ಬೇಗ ನೀರು ಹಂಚಿಕೆ ನೋಟಿಫಿಕೇಶನ್ ಆಗ್ಬೇಕೆಂದು ಮೋದಿಗೆ ಮನವಿ ಮಾಡಲಾಗಿದೆ. ಮತ್ತೆ ಗೋವಾ, ಕರ್ನಾಟಕ ಕೋರ್ಟ್ ಮೆಟ್ಟಿಲೇರಿದ್ರಿಂದ ನೋಟಿಫಿಕೇಶನ್ ವಿಳಂಬವಾಗಿದೆ.

ಸಿಎಂ ಬಿಎಸ್ವೈ ಮಹಾರಾಷ್ಟ್ರ,ಗೋವಾ ಸಿಎಂ ಯೊಂದಿಗೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ. ಈ ಎಲೆಕ್ಷನ್ ನಲ್ಲಿ ಬ್ಯೂಸಿಯಾಗಿದ್ರಿಂದ ಆಗಲಿಲ್ಲ. ಆದಷ್ಟು ಬೇಗ ಮುಗಿಸ್ತೇವೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ತಿಂಗಳೊಳಗೆ ಪೂರ್ಣವಾಗುತ್ತದೆ ಎಂದು ಗೋವಿಂದ ಕಾರಜೋಳ ವಿಶ್ವಾಸದ ಮಾತನಾಡಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights