ಶೇವಿಂಗ್ ಬ್ಲೇಡ್ ಬಳಸಿ ಹೆರಿಗೆ ಮಾಡಿದ ಕ್ಲಿನಿಕ್ ಉದ್ಯೋಗಿ : ತಾಯಿ ಮಗು ಸಾವು!

8 ನೇ ತರಗತಿ ಡ್ರಾಪ್ ಔಟ್ ಆದ ಸ್ಥಳೀಯ ಕ್ಲಿನಿಕ್ ಉದ್ಯೋಗಿ ಗರ್ಭಿಣಿಗೆ ಶೇವಿಂಗ್ ಬ್ಲೇಡ್  ನಿಂದ ಹೆರಿಗೆ ಮಾಡಿಸಿದ್ದು ತಾಯಿ-ಮಗು ಇಬ್ಬರು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಸುಲ್ತಾನಪುರ ಜಿಲ್ಲೆಯಲ್ಲಿ ನಡೆದಿದೆ.

30 ವರ್ಷದ ರಾಜೇಂದ್ರ ಶುಕ್ಲಾ ಶೇವಿಂಗ್ ಬ್ಲೇಡ್ ಬಳಸಿ ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಮಹಿಳೆ ಸಾವನ್ನಪ್ಪಿದ್ದಾಳೆ. ಮಗು ಜನಿಸಿದ ಕೆಲವೇ ನಿಮಿಷಗಳಲ್ಲಿ ಸತ್ತುಹೋಗಿದೆ.

8 ನೇ ತರಗತಿಯಲ್ಲಿ ಫೇಲ್ ಆದ ರಾಜೇಂದ್ರ ಶುಕ್ಲಾ ಅವರನ್ನು ಸೈನಿ ಗ್ರಾಮದ ಮಾ ಶಾರದಾ ಆಸ್ಪತ್ರೆಯಲ್ಲಿ ರಾಜೇಶ್ ಸಾಹ್ನಿ ಅವರು ಶಸ್ತ್ರಚಿಕಿತ್ಸೆ ನಡೆಸಲು ನೇಮಿಸಿಕೊಂಡಿದ್ದರು.

ರಾಜೇಶ್ ಸಾಹ್ನಿ ಅವರು ನೋಂದಾಯಿಸದೆ ಆಸ್ಪತ್ರೆ ನಡೆಸುತ್ತಿದ್ದರು ಎಂದು ದೂರಲಾಗಿದೆ. ಅಕ್ರಮ ಚಿಕಿತ್ಸಾಲಯಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರು ಮುಖ್ಯ ವೈದ್ಯಕೀಯ ಅಧಿಕಾರಿಗೆ ಪತ್ರ ಬರೆದಿದ್ದಾರೆ.

ಮಹಿಳಾ ಪತಿ ನೀಡಿದ ದೂರಿನ ಮೇರೆಗೆ ರಾಜೇಂದ್ರ ಶುಕ್ಲಾ ಮತ್ತು ರಾಜೇಶ್ ಸಾಹ್ನಿ ಇಬ್ಬರನ್ನೂ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಪತ್ನಿ ಮತ್ತು ನವಜಾತ ಮಗು ಮೃತಪಟ್ಟಿದ್ದಾರೆ ಎಂದು ಮಹಿಳೆಯ ಪತಿ ರಾಜಾರಾಮ್ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights