ಅನರ್ಹರು ಅಂತೀರಾ.. ಚುನಾವಣೆಗೆ ಸ್ಪರ್ಧಿಸಬಹುದು ಅಂತೀರಾ.. ಇದೊಂದಥರ ಸ್ವೇಚ್ಛಾಚಾರದ ಆಟ – ಹೆಚ್ಡಿಕೆ
ಒಂದು ಕಡೆ ಅನರ್ಹರು ಎಂದು ಹೇಳ್ತೀರಿ, ಮತ್ತೊಂದು ಕಡೆ ಚುನಾವಣೆಗೆ ಸ್ಪರ್ಧಿಸಬಹುದು ಅಂತೀರಿ. ಇದೊಂದಥರ ಸ್ವೇಚ್ಛಾಚಾರದ ಆಟ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಹಿನ್ನೆಲೆ ಮಾತಾಡಿದ ಅವರು, ಸುಪ್ರೀಂ ಕೋರ್ಟ್ ಅನರ್ಹತೆಯನ್ನ ಎತ್ತಿ ಹಿಡಿದಿದೆ. ಆದ್ರೆ ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿ ಏನಿದೆ? ಅದಕ್ಕೆ ಶಕ್ತಿಯನ್ನೇ ಕೊಟ್ಟಿಲ್ಲ. ಯಾರು ಯಾವಾಗ ಬೇಕಾದ್ರೂ ರಾಜೀನಾಮೆ ಕೊಡಬಹುದು. ಸ್ವೇಚ್ಛಾಚಾರದ ತೀರ್ಮಾನ ತೆಗೆದುಕೊಳ್ಳಲು ಪ್ರೋತ್ಸಾಹ ಕೊಡುತ್ತಿರುವುದಕ್ಕೆ ಅರ್ಥವೇ ಇಲ್ಲ ಎಂದು ಹೇಳಿದ್ರು.
ಮತದಾರರು ಶಾಸಕನಿಗೆ ವೋಟ್ ಕೊಟ್ಟಿರುತ್ತಾರೆ. ಆ ಮತದಾರನ ಗೌರವ ಉಳಿಸಬೇಕು. ಒಂದು ಕಡೆ ಅನರ್ಹರು ಎಂದು ಹೇಳ್ತೀರಿ, ಮತ್ತೊಂದು ಕಡೆ ಚುನಾವಣೆಗೆ ಸ್ಪರ್ಧಿಸಬಹುದು ಅಂತೀರಿ. ಇದೊಂದಥರ ಸ್ವೇಚ್ಛಾಚಾರದ ಅಟ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.
ಮರುಪರಿಶಿಲನೆ ಅರ್ಜಿ ಹಾಕುವುದರ ಒಳಗೆ ಚುನಾವಣೆ ಮುಗಿದು ಮತ್ತೊಂದು ಎಲೆಕ್ಷನ್ ಬರುತ್ತೆ, ಮರುಪರಿಶೀಲನೆ ಅರ್ಜಿ ಹಾಕೋದ್ರಲ್ಲಿ ಅರ್ಥ ಇಲ್ಲ ಎಂದು ಹೆಚ್ಡಿಕೆ ಹೇಳಿದ್ರು.