ಅಸಾಧಾರಣ ನೆನಪಿನ ಶಕ್ತಿ ಇಂಡಿಯಾ ಬುಕ್ ಆಪ್ ರಿಕಾರ್ಡ್ ದಾಖಲು
ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ನೋಡು ಎಂಬಂತೆ ಕೇವಲ ಮೂರು ವರ್ಷದ ಬಾಲಕಿ ಇಂಡಿಯಾ ಬುಕ್ ಆಪ್ ರೆಕಾರ್ಡ್ ದಾಖಲಾಗಿ ಪ್ರಮಾಣ ಪತ್ರ ಪಡೆದಿದ್ದಾಳೆ, ಮಸ್ಕಿಯ ಕರ್ನಾಟಕ ಬ್ಯಾಂಕಿನ ಮ್ಯಾನೇಜರ್ ನರೇಶ ಹಾಗು ಚಂದನರ ಮೊದಲು ಪುತ್ರಿ ನಿಧಿಶ್ರೀ ಬುಕ್ ಆಪ್ ರಿಕಾರ್ಡಿನಲ್ಲಿ ದಾಖಲಾಗಿದ್ದಾಳೆ, ನಿಧಿಶ್ರೀ ಒಂದುವರೆ ವರ್ಷವಿದ್ದಾಗಲೇ ದೇಶದಲ್ಲಿ ರಾಜ್ಯಗಳ ರಾಜಧಾನಿ, ಮಗ್ಗಿ, ಸಂಸ್ಕೃತ ಶ್ಲೋಕಗಳು, ಮಹನೀಯರ ಹೆಸರನ್ನು ಹೇಳಿ ಅಚ್ಚರಿ ಮೂಡಿಸಿದ್ದಾಳೆ.
ನರೇಶ ಹಾಗು ಚಂದನರ ಮೂಲ ಆಂಧ್ರ ಪ್ರದೇಶದ ಹಿಂದಪುರವಾಗಿದ್ದು ಅವರ ಮಾತೃಭಾಷೆ ತೆಲುಗು ಆದರೂ ನಿಧಿಶ್ರೀ ಕನ್ನಡದಲ್ಲಿ ಮಾತನಾಡುವುದಲ್ಲದೆ ಕನ್ನಡದಲ್ಲಿ ಉತ್ತರ ಹೇಳುತ್ತಾಳೆ, ನರೇಶ ಕರ್ನಾಟಕ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ನಾಲ್ಕು ವರ್ಷದ ಹಿಂದೆ ವಿಜಯಪುರ ಜಿಲ್ಲೆಯ ಚಡಚಣದಲ್ಲಿ ಕೆಲಸ ಮಾಡುತ್ತಿದ್ದರು ಆಗಿನಿಂದ ಅವರಿಗೆ ಕನ್ನಡ ಭಾಷೆಯ ಸಂಪರ್ಕ, ನಿಧಿಶ್ರೀಯವರ ತಾಯಿ ಚಂದನ ಮಗಳಿಗೆ ಊಟ ಮಾಡಿಸುವಾಗ ರಾಜಧಾನಿ, ಜನೇವರಿ, ಫೇಬ್ರುವರಿ, ಮಗ್ಗಿ, ಸಂಸ್ಕೃತ ಶ್ಲೋಕಗಳನ್ನು ಹೇಳುತ್ತಾ ಬೆಳೆಸಿದ್ದಾಳೆ, ಈ ಮಧ್ಯೆ ನಿಧಿಶ್ರೀಯನ್ನು ಮಸ್ಕಿಯ ಅಕ್ಷರ ವಿದ್ಯಾ ನಿಕೇತನ ಎಂಬ ಶಾಲೆಯಲ್ಲಿ ನರ್ಸರಿ ಸೇರಿಸಲಾಗಿದೆ, ಅಲ್ಲಿ ಟೀಚರರ ಪಾಠವು ನಿಧಿಶ್ರೀಗೆ ಇನ್ನಷ್ಟು ನೆನಪಿನ ಶಕ್ತಿ ಹೆಚ್ಚಿಸಿದೆ.
ನಮ್ಮ ಪಕ್ಕದ ಊರಿನ ಹೆಸರನ್ನು ತಕ್ಷಣ ಹೇಳಲು ಪರದಾಡುವ ನಾವುಗಳು ಕೇವಲ ಮೂರು ವರ್ಷದ ಬಾಲಕಿ ಆಗಾಧವಾದ ಜ್ಞಾಪಕ ಶಕ್ತಿ ಹೊಂದಿರುವುದು ಅಚ್ಚರಿ ಮೂಡಿಸಿದೆ, ವಿವಿಧ ಸಾಧಕರನ್ನು ಗುರುತಿಸುವ ದೆಹಲಿ ಮೂಲದ ಸಂಸ್ಥೆ ಇಂಡಿಯಾ ಬುಕ್ ಆಪ್ ರಿಕಾರ್ಡ್ ಪ್ರಮಾಣ ಪತ್ರ ನೀಡುತ್ತಿದೆ, ಇಂಡಿಯಾದ ಸಾಧಕರನ್ನು ಪುಸ್ತಕದಲ್ಲಿ ದಾಖಲಿಸಿಕೊಳ್ಳುತ್ತಿದೆ, ಅದರಂತೆ ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಜ್ಞಾಪಕ ಶಕ್ತಿ ಹೊಂದಿರುವ ಬಾಲಕಿಯನ್ನು ಬುಕ್ ನಲ್ಲಿ ದಾಖಲಿಸಿಕೊಂಡಿದೆ.
ಅರಳು ಉರಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸುವ ನಿಧಿಶ್ರೀ ಈ ವಯಸ್ಸಿನಲ್ಲಿ ದಾಖಲೆ ಮಾಡಿರುವದಕ್ಕೆ ತಂದೆ ನರೇಶ ಖುಷಿ ವ್ಯಕ್ತಪಡಿಸಿದ್ದು, ಇದಕ್ಕೆಲ್ಲ ಕಾರಣ ಆಕೆ ಬೆಳೆಯುತ್ತಿತವ ಪರಿಸರ ಎಂದು ಹೇಳುತ್ತಾರೆ. ಅಸಾಧಾರಣ ಸಾಧಕರು ತಮ್ಮ ಸಾಧನೆಯ ಬಗ್ಗೆ ದಾಖಲಿಸಲು ಇಂಡಿಯಾ ಬುಕ್ ಆಪ್ ರಿಕಾರ್ಡ್ ಎಂಬುವುದಿದೆ, ನಿಧಿಶ್ರೀಯ ಜ್ಞಾಪಕಶಕ್ತಿಯ ಬಗ್ಗೆ ಆಕೆಯ ಪಾಲಕರು ವಿಡಿಯೋ ಮಾಡಿ ಕಳುಹಿಸಿದ್ದು, ಪರಿಶೀಲಿಸಿದ ಸಂಸ್ಥೆಯ ವರು ಇಪ್ಪತ್ತು ದಿನಗಳ ಹಿಂದೆ ಪ್ರಮಾಣ ಪತ್ರ ಕಳುಹಿಸಿದ್ದಾರೆ.

