ಇಡಿ ಸಮನ್ಸ್ : ಮತ್ತೆ ಕಾನೂನು ಹೋರಾಟ ಮಾಡುತ್ತೇನೆಂದ ಡಿಕೆಶಿ…!

ಬೆಂಗಳೂರಿನಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಟಿ. ಮಾಧ್ಯಮಗಳು ವಿಚಿತ್ರವಾಗಿ ಕಲ್ಪನೆ ಮಾಡಿಕೊಂಡು ನನ್ನ ಬಗ್ಗೆ ವ್ಯಾಖ್ಯಾನ ಮಾಡಿವೆ. ನಾನು ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಕಾರ್ಯಕರ್ತನಾಗಿ ಜವಾಬ್ದಾರಿ ನಿರ್ವಹಿಸಿದ್ದೇನೆ. ಗುಜರಾತ್, ಮಹಾರಾಷ್ಟ್ರ ಹಾಗೂ ನಮ್ಮ ಶಾಸಕರನ್ನು‌ ಕಾಪಾಡುವ ಜವಾಬ್ದಾರಿ ವಹಿಸಿದ್ದೆ. ಪಕ್ಷದ ಸೂಚನೆ ಪ್ರಕಾರ ಕೆಲಸ ಮಾಡಿದ್ದೇನೆ. ನನ್ನ ಮೇಲೆ ಐಟಿ ಅಧಿಕಾರಿಗಳು ‌ಕೇಂದ್ರ ಪೊಲೀಸ್ ‌ಪಡೆ‌ ತಂದು ದಾಳಿ ಮಾಡಿದ್ದರು. ನಾನು ಕಾನೂನಿಗೆ ಗೌರವ ಕೊಡುವ ಶಾಸಕ.

ನನಗೆ ಬಂದಿರುವ ಎಲ್ಲ ‌ನೋಟೀಸ್ಗೆ ಉತ್ತರ ನೀಡಿದ್ದೇನೆ. ನಾನು ಮಧ್ಯಮ ಕುಟುಂಬದವನು. ನನ್ನ ತಾಯಿ ಆಸ್ತಿಯನ್ನು ಬೇನಾಮಿ‌ ಆಸ್ತಿ ಎಂದು ತೀರ್ಮಾನಿಸಿ ಐಟಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ.‌ ನಾನು ಕೋರ್ಟ್ ಮೊರೆ ಹೋಗಿದ್ದು ‌ಕಾನೂನು ಹೋರಾಟ ಮಾಡುತ್ತೇನೆ.

ನಮ್ಮ ನಿವಾಸದಲ್ಲಿ ದೊರೆತ ಹಣ ನಮ್ಮದು ಎಂದು ಐಟಿ ಇಲಾಖೆಗೆ ಸ್ಪಷ್ಟಪಡಿಸಿದ್ದೇವೆ.‌ ಇಡಿ ಸಮನ್ಸ್ ನೀಡಿದೆ. ‌ಆದರೆ ಇಡಿಗೂ ನನ್ನ ವ್ಯವಹಾರಕ್ಕೂ ಸಂಬಂಧವಿಲ್ಲ.‌ ಹೀಗಾಗಿ ನಾನು ಕೋರ್ಟ್ ‌ಮೊರೆ ಹೋಗಿದ್ದೆ. ಕೋರ್ಟ್ ನನ್ನ ಮನವಿ ವಜಾ ಮಾಡಿದೆ. ಇದೀಗ ಮತ್ತೆ ಕಾನೂನು ಹೋರಾಟ ಮಾಡುತ್ತೇನೆ.

ಇಡಿ ಸಮನ್ಸ್ ನೀಡಿದೆ. ವಿಚಾರಣೆಗೆ ಹಾಜರಾಗಲು ಸಿದ್ದ. ಆದರೆ ಕಾನೂನಿನಲ್ಲಿರುವ ರಕ್ಷಣೆ ಉಪಯೋಗಿಸಲು ನನಗೆ ಅವಕಾಶವಿದೆ. ‌ಆ ಪ್ರಯತ್ನ ಮಾಡಿದ್ದೇನೆ. ನಾನು ಯಾವ ತಪ್ಪು ಮಾಡಿಲ್ಲ. ಲಂಚ ತಿಂದಿಲ್ಲ ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ. ಅದನ್ನು ಕಾನೂನಿನ ಮೂಲಕ ಎದುರಿಸಲು ಸಿದ್ದ.

ಡಿಕೆಶಿ. ನಾನು ಯಾವುದಕ್ಕೂ ‌ಹೆದರುವವನಲ್ಲ. ಎಲ್ಲೂ‌ಓಡಿ ಹೋಗಲ್ಲ. ‌ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತೇನೆ. ಆಪರೇಷನ್ ಕಮಲದಲ್ಲಿ ಕೋಟ್ಯಂತರ ‌ರೂ ವ್ಯವಹಾರ ನಡೆದಿದೆ. ವಿಧಾನಸಭೆಯಲ್ಲಿ ಶಾಸಕ ಶ್ರೀನಿವಾಸ ಗೌಡ ಬಹಿರಂಗವಾಗಿ ಆಮಿಷದ ಬಗ್ಗೆ ಹೇಳಿದ್ದರು. ಇಡಿ ಅಧಿಕಾರಿಗಳು ಏಕೆ ಸುಮ್ಮನಿದ್ದಾರೆ. ಅಧಿಕಾರ ಬಂದರೆ ಮಾತ್ರ ಪ್ರೀತಿ ನೀತಿ ಎಲ್ಲವು ಬೇಗ ಊಕ್ಕಿಹರಿಯುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights