‘ಇಬ್ಬರು ಗಾಜಿನ ಮನೆಯಲ್ಲಿ ಇದ್ದೇವೆ’ ಸಾ.ರಾ.ಮಹೇಶ್ ಗೆ ಹೆಚ್.ವಿಶ್ವನಾಥ್ ಸಮಾಧಾನದ ಮಾತು
ಮೈಸೂರಿನಲ್ಲಿ ನಿನ್ನೆಯಷ್ಟೆ ವಿಶ್ವನಾಥ್ ವಿರುದ್ಧವಾಗಿ ವಾಗ್ದಾಳಿ ನಡೆಸಿದ್ದ ಸಾ.ರಾ.ಮಹೇಶ್ ಗೆ ಹೆಚ್.ವಿಶ್ವನಾಥ್ ಸಮಾಧಾನವಾಗಿರಲು ತಿಳಿಸಿದ್ದಾರೆ. ವೈಯುಕ್ತಿಕ ವಿಚಾರಗಳನ್ನ ನಿಲ್ಲಿಸಿ. ಇಬ್ಬರು ಗಾಜಿನ ಮನೆಯಲ್ಲಿ ಇದ್ದೇವೆ ಎಂದು ಮೈಸೂರಿನಲ್ಲಿ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಜನರು ನಮನ್ನ ನೋಡುತ್ತಿದ್ದಿದ್ದಾರೆ. ಅವರ ಮುಂದೆ ನಾವು ಜಾರಿ ಬಿಳುವುದು ಬೇಡ. ಇಬ್ಬರು ತಪ್ಪು ಮಾಡುತ್ತಿದ್ದೇವೆ ಅಂತ ನನಗೆ ಅನಿಸಿದೆ. ನಾವಿಬ್ಬರು ಒಂದೆ ಊರಿನವರು ಪರಸ್ಪರ ಈ ರೀತಿ ಮಾತನಾಡಿವುದು ಬೇಡ. ನೀವೇನೋ ಮಾಡುತ್ತೀರ ಅಂತ ಹೆದರಿ ಈ ಮಾತುಗಳನ್ನ ಹೇಳುತ್ತಿಲ್ಲ. ನೀವು ಬೆಳೆಯಬೇಕಿರುವ ರಾಜಕಾರಣಿ. ನನ್ನದು ನಿವೃತ್ತಿಯ ರಾಜಕಾರಣ. ಇಂತಹ ಪರಸ್ಪರ ವೈಯುಕ್ತಿಕ ಮಾತುಗಳ ನಮಗೆ ಒಳ್ಳೆದಲ್ಲ. ಅಭಿವೃದ್ಧಿ ಹಾಗೂ ವಿಷಯಾಧಾರಿತವಾಗಿ ಮಾತನಾಡೋಣ.
ಇಬ್ಬರು ಮಂತ್ರಿಗಳಾಗಿದ್ದವರು ಈ ರೀತಿ ಮಾತನಾಡಿದ್ರೆ ಜನ ನೋಡ್ತಾರೆ. ಇಲ್ಲಿಗೆ ಎಲ್ಲವನ್ನು ನಿಲ್ಲಿಸೋಣ. ವೈಯುಕ್ತಿಕ ಟೀಕೆಗಳನ್ನ ನಿಲ್ಲಿಸೋಣ ಅಂತ ಸಾ.ರಾ.ಮಹೇಶ್ಗೆ ಹೆಚ್.ವಿಶ್ವನಾಥ್ ಮನವಿ ಮಾಡಿದ್ದಾರೆ.
15 ಕ್ಷೇತ್ರಗಳಿಗೆ ಉಪಚುನಾವಣೆ ವಿಚಾರವಾಗಿ ಮಾತನಾಡಿದ ಹೆಚ್.ವಿಶ್ವನಾಥ್, ಉಪಚುನಾವಣೆಯಲ್ಲಿ ಅನರ್ಹ ಶಾಸಕರ ಸ್ಪರ್ಧೆಗೆ ಅವಕಾಶ ನೀಡಿರುವ ಆಯೋಗದ ನಿರ್ಧಾರ ಸ್ವಾಗತ. ಆದ್ರೆ ಚುನಾವಣೆ ಮುಂದೂಡಿ ಅನ್ನೋದೇ ನಮ್ಮ ಮನವಿ ಎಂದಿದ್ದಾರೆ.
ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ಈಗ ನಡೆಯುತ್ತಿರುವ ಚುನಾವಣೆ ತರಾತುರಿಯಲ್ಲಿ ನಡೆಯುತ್ತಿದೆ. ಹಾಗಾಗಿ ಉಪಚುನಾವಣೆ ಈಗ ಬೇಡ ಅನ್ನೋದು ನಮ್ಮ ಅಭಿಪ್ರಾಯ. ಅದೇನೆ ಇದ್ದರೂ ಬುಧವಾರ ಹಾಗೂ ಶುಕ್ರವಾರದವರೆಗೆ ಕಾಯಬೇಕು. ಸುಪ್ರೀಂಕೋರ್ಟ್ ತೀರ್ಮಾನದ ನಂತರ ಎಲ್ಲವು ನಿರ್ಧಾರ ಆಗಲಿದೆ. ಉಪಚುನಾವಣೆಗೆ ನಾನು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಹುಣಸೂರಿನ ಹಿರಿಯರು, ಮುಖಂಡರ ಜೊತೆ ಚರ್ಚೆ ಮಾಡ್ತೇನೆ. ಅವರ ಅಭಿಪ್ರಾಯ ಪಡೆದು ಮುಂದುವರೆಯುತ್ತೇನೆ. ಉಪಚುನಾವಣೆಗೆ ಸಮಯ ಕಮ್ಮಿಇದೆ. ಹಾಗಾಗಿ ತಯಾರಿ ಮಾಡಿಕೊಳ್ಳಲೇಬೇಕು ಅಲ್ಲವೇ? ಎಂದು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಹೆಚ್.ವಿಶ್ವನಾಥ್ ಸುಳಿವು ನೀಡಿದ್ದಾರೆ.