ಈರುಳ್ಳಿ ಬೆಲೆಯಲ್ಲಿ ಇಳಿಕೆ : ಖರೀದಿಯಾಗದೇ ಮಂಕಾದ ಮಾರುಕಟ್ಟೆ….!

ಈರುಳ್ಳಿ ಬೆಲೆಯು ದಿನ ದಿನಕ್ಕೆ ಇಳಿಕೆಯಾಗುತ್ತಿದೆ. ಇದರಿಂದ ವ್ಯಾಪಾರಿಗಳು ಈರುಳ್ಳಿ ಖರೀದಿಸಲು ಮುಂದಾಗುತ್ತಿಲ್ಲ. ಭಾರಿ ದರ ಕಂಡಿದ್ದ ರೈತರು ಈಗ ದಿನೇ ದಿನೇ ದರ ಇಳಿಕೆಯಾಗುತ್ತಿರುವದರಿಂದ ಈರುಳ್ಳಿ ಖರೀದಿಸಿ ಎಂದು ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಹೀಗಾಗಿ ಈರುಳ್ಳಿ ಗಲಾಟೆ ಮುಂದುವರಿದಿದೆ.

ಹೌದು… ಈರುಳ್ಳಿಗೆ ಬಂಗಾರದ ಬೆಲೆ ಬಂದ ನಂತರ ರೈತರು ಫುಲ್ ಖುಷ್ ಆಗಿದ್ದರು. ಆದರೆ ವಿದೇಶ ಹಾಗು ಮಹಾರಾಷ್ಟ್ರದಿಂದ ಈರುಳ್ಳಿ ಮಾರುಕಟ್ಟೆಗೆ ಬರುತ್ತಿರುವದರಿಂದ ದರ ಇಳಿಕೆಯಾಗುತ್ತಿದೆ. ನವಂಬರ್ ತಿಂಗಳಲ್ಲಿ ಪ್ರತಿಕ್ವಿಂಟಾಲ್ ಗೆ ೪೦೦೦-೭೦೦೦ ರೂಪಾಯಿಯವರೆಗೂ ಇದ್ದ ದರವು ಡಿಸೆಂಬರ್ ೬ ರವರೆಗೆ ೧೫೦೦೦ ರೂಪಾಯಿಯವರೆಗೂ ಮಾರಾಟವಾಗಿದೆ. ಈ ಮಧ್ಯೆ ಭಾರಿ ದರ ಇರುವ ಹಿನ್ನೆಲೆಯಲ್ಲಿ ರೈತರು ಆಸೆ ಪಟ್ಟು ಈರುಳ್ಳಿಯನ್ನು ರಾಯಚೂರಿನ ರಾಜೇಂದ್ರ ಗಂಜ್ ಗೆ ತಂದರೆ ಮೂರು ದಿನವಾದರೂ ಈರುಳ್ಳಿ ಖರೀದಿಸುತ್ತಿಲ್ಲ. ಇದರಿಂದ ಮಾರಾಟ ಮಾಡಲು ಬಂದ ರೈತರಿಗೆ ನಿತ್ಯ ದರ ಇಳಿಕೆಯಿಂದಾಗಿ ನಿರಾಸೆ ರಾಗುತ್ತಿದ್ದಾರೆ. ಕೆಲವು ಕಡೆ ಇಂದೇ ತಂದ ಈರುಳ್ಳಿ ಖರೀಸಿದರೆ ಇನ್ನೂ ಕೆಲವು ಕಡೆ ಮೂರು ದಿನವಾದರೂ ಖರೀದಿಸಿಲ್ಲ ಇದರಿಂದಾಗಿ ಆಕ್ರೋಶಗೊಂಡ ರೈತರು ಮದ್ಯಾಹ್ನ ಗಂಜ್ ದಿಡೀರ ಪ್ರತಿಭಟನೆ ಮಾಡಿದರು. ಅಂದು ತಂದಿರುವ ಈರುಳ್ಳಿಯನ್ನು ಅಂದೇ ಖರೀದಿಸಬೇಕೆಂದು ‌ಆಗ್ರಹಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಎಪಿಎಂಸಿ ಕಾರ್ಯದರ್ಶಿ ಈಗ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗುತ್ತಿದೆ. ಇಂದು ರಾಯಚೂರು ಮಾರುಕಟ್ಟೆಗೆ ೧೨೦೦ ಕ್ವಿಂಟಾಲ್ ಈರುಳ್ಳಿ ಬಂದಿದ್ದ ಖರೀದಿಸಲಾಗುತ್ತಿದೆ. ಇಂದು ಮಾರುಕಟ್ಟೆಯಲ್ಲಿ ೨೨೦೦ ರೂಪಾಯಿಯಿಂದ ೭೦೦೦ ರೂಪಾಯಿ ಯವರೆಗೂ ದರ ಆಗಿದೆ. ನಾಳೆಯಿಂದ ಸರಿಯಾಗಿ ಖರೀದಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ. ದರ ಇಳಿಕೆಯಾಗುತ್ತಿದ್ದಂತೆ ವ್ಯಾಪಾರಿಗಳು ಖರೀದಿಸಲು ಮುಂದಾಗುತ್ತಿಲ್ಲ. ದಾಖಲೆ ದರ ನೋಡಿದ ರೈತರು ಈಗ ನಿರಾಸೆರಾಗಿ ಪ್ರತಿಭಟನೆ ಹಾದಿ ಹಿಡಿದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights