ಉಪಚುನಾವಣೆ ಬಳಿಕ ಕೋಳಿವಾಡ ರಾಜಕೀಯ ನಿವೃತ್ತಿ…..
ಉಪಚುನಾವಣೆ ಬಳಿಕ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ರಾಣೆ ಬೆನ್ನೂರು ಕಾಂಗ್ರೆಸ್ ಅಭ್ಯರ್ಥಿ ಕೆಜಿ ಕೋಳಿವಾಡ ಪ್ರಕಟಿಸಿದ್ದಾರೆ.
ಈ ಉಪಚುನಾವಣೆ ನನ್ನ ಕೊನೆಯ ಚುನಾವಣೆಯಾಗಿದ್ದು, ಇನ್ನು ಮುಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹೀಗಾಗಿ ಗೆಲುವಿನ ಮೂಲಕ ನನಗೆ ಬಿಳ್ಕೋಡಿ ಎಂದು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಳೆದ ಐವತ್ತು ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದು, ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಅದು ಕ್ಷೇತ್ರದ ಜನರಿಗೂ ತಿಳಿದಿದೆ. ಸದ್ಯ ರಾಜಕೀಯ ನಿವೃತ್ತಿ ಅಂಚಿನಲ್ಲಿದ್ದೇನೆ. ಇದೊಂದು ಬಾರಿ ನನ್ನ ಗೆಲ್ಲಿಸಿ, ಮತದಾರರು ನನ್ನ ಕೈ ಹಿಡಿಯಬೇಕು ಎಂದು ಮಾಜಿ ಸ್ಪೀಕರ್ ಮನವಿ ಮಾಡಿದರು.