ಎರಡು ಜಿಲ್ಲೆಗಳಲ್ಲಿ ಮಕಾಡೆ ಮಲಗಿದ ಬಿಜೆಪಿ : ಬಿಎಸ್ ವೈ ಪ್ರಚಾರ ನಡೆಸಿದ್ದಲೆಲ್ಲ ಸೋಲು

ಕರ್ನಾಟಕದ ಗಡಿಯಲ್ಲಿರುವ ಮಹಾರಾಷ್ಟ್ರದ ಎರಡು ಜಿಲ್ಲೆಗಳಲ್ಲಿ ಬಿಜೆಪಿ ಮಕಾಡೆ ಮಲಗಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಡಿಸಿಎಂ ಲಕ್ಷ್ಮಣ ಸವದಿ ಪ್ರಚಾರ ನಡೆಸಿದ್ದ ಸಾಂಗ್ಲಿ ಹಾಗೂ ಕೋಲ್ಹಾಪುರ ಜಿಲ್ಲೆಗಳಲ್ಲಿ ಬಿಜೆಪಿಗೆ ಮತದಾರರು ಶಾಕ್ ನೀಡಿದ್ದಾರೆ.

ದಕ್ಷಿಣ ಮಹಾರಾಷ್ಟ್ರದ ಕೋಲ್ಹಾಪುರ ಮತ್ತು ಸಾಂಗ್ಲಿ ಜಿಲ್ಲೆಯ ಜನ ಈ ಬಾರಿ ಪ್ರವಾಹಕ್ಕೆ ತುತ್ತಾಗಿದ್ದರು. ಇನ್ನು ಕರ್ನಾಟಕದ ಗಡಿ ಹೊಂದಿಕೊಂಡಿದ್ದರಿಂದ ಕನ್ನಡದ ಜನತೆ ಸಹ ಅಲ್ಲಿ ವಾಸವಾಗಿದ್ದಾರೆ. ಈ ಹಿನ್ನೆಲೆ ಬಿಜೆಪಿಯಿಂದ ಯಡಿಯೂರಪ್ಪ, ಲಕ್ಷ್ಮಣ ಸವದಿ ನಾಯಕತ್ವದಲ್ಲಿ ಚುನಾವಣೆ ಪ್ರಚಾರ ನಡೆಸಲಾಗಿತ್ತು. ಇತ್ತ ಕಾಂಗ್ರೆಸ್ ನಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಚುನಾವಣೆ ಪ್ರಚಾರ ನಡೆದಿತ್ತು. ಇದೀಗ ಎರಡು ಜಿಲ್ಲೆಗಳ 18 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಹೊರ ಬಿದ್ದಿದೆ. 18ರಲ್ಲಿ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಜನ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ.

ಸಾಂಗ್ಲಿ ಜಿಲ್ಲೆ: ಜಿಲ್ಲೆ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, 3 ಎನ್‍ಸಿಪಿ, 2 ಬಿಜೆಪಿ, 2 ಕಾಂಗ್ರೆಸ್ ಮತ್ತು ಒಂದರಲ್ಲಿ ಶಿವಸೇನೆ ಗೆಲುವು ಕಂಡಿದೆ. ಸಾಂಗ್ಲಿ ಮತ್ತು ಮಿರಜ್ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸುಧೀರ್ ಗಾಡಗಲಿ, ಸುರೇಶ್ ಖಾಡೆ ಗೆಲುವು ದಾಖಲಿಸಿದ್ದಾರೆ.

1. ಸಾಂಗ್ಲಿ:
ಬಿಜೆಪಿ – ಸುಧೀರ ಗಾಡಗಲಿ (ಗೆಲುವು)
ಕಾಂಗ್ರೆಸ್ – ಪ್ರಥ್ವಿರಾಜ್ ಪಾಟೀಲ್.

2. ಮಿರಜ್ :
ಬಿಜೆಪಿ – ಸುರೇಶ ಖಾಡೆ (ಗೆಲುವು)
ಸ್ವಾಭಿಮಾನಿ ಶೇತಕರಿ. – ಬಾಳಾಸಾಹೇಬ ವಾಹನಮೋರೆ.

3. ತಾಸಗಾಂವ:
ಎನ್‍ಸಿಪಿ – ಸುಮನತಾಯಿ ಪಾಟೀಲ್ (ಗೆಲುವು)
ಬಿಜೆಪಿ – ಅಜೀತರಾವ್ ಘೋರ್ಪಡೆ.

4. ಜತ್ :
ಕಾಂಗ್ರೆಸ್ – ವಿಕ್ರಮ ಸಾವಂತ್ (ಗೆಲುವು)
ಪಕ್ಷೇತರ – ರವೀಂದ್ರ ಅರಳಿ.
ಬಿಜೆಪಿ : ವಿಲಾಸರಾವ್ ಜಗತಾಪ್.

5. ಖಾನಾಪೂರ:
ಶಿವಸೇನೆ : ಅನೀಲ ಬಾಬರ್ (ಗೆಲುವು)
ಪಕ್ಷೇತರ : ಸದಾಶಿವರಾವ್ ಪಾಟೀಲ್.

6.ಫಲೂಸ್ ಖಡೆಗಾಂಗ್:
ಕಾಂಗ್ರೆಸ್ : ವಿಶ್ವಜೀತ ಕದಂ (ಗೆಲುವು)
ಶಿವಸೇನೆ : ಸಂಜಯ ವಿಭೂತೆ.

7. ಇಸ್ಲಾಂಪೂರ:
ಎನ್‍ಸಿಪಿ : ಜಯಂತರಾವ್ ಪಾಟೀಲ್ (ಗೆಲುವು)
ಶಿವಸೇನೆ : ಗೌರವ ನಾಯಿಕವಾಡಿ.

8. ಶಿರಾಳ :
ಎನ್‍ಸಿಪಿ – ಮಾನಸಿಂಗ್ ನಾಯಿಕ್ (ಗೆಲುವು)
ಬಿಜೆಪಿ ಶಿವಾಜಿರಾವ್ ನಾಯಿಕ್.

ಕೋಲ್ಹಾಪುರ ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸಂಪೂರ್ಣ ಮಕಾಡೆ ಮಲಗಿದೆ. ಶಿವಸೇನೆ-1, ಎನ್‍ಸಿಪಿ-2, ಕಾಂಗ್ರೆಸ್-4 ಮತ್ತು ಪಕ್ಷೇತರ ಮೂವರು ಗೆಲುವು ದಾಖಲಿಸಿದ್ದಾರೆ.

1. ಇಚಲಕರಂಜಿ:
ಪಕ್ಷೇತರ : ಪ್ರಕಾಶ ಅವಾಡೆ (ಗೆಲುವು)
ಬಿಜೆಪಿ : ಸುರೇಶ್ ಹಳವನಕರ್

2.ಕೋಲ್ಹಾಪುರ ದಕ್ಷಿಣ:
ಕಾಂಗ್ರೆಸ್ : ರುತುರಾಜ ಪಾಟೀಲ್ (ಗೆಲುವು)
ಬಿಜೆಪಿ : ಅಮೋಲ್ ಮಾಹಾಡಿಕ್

3. ಕೊಲ್ಹಾಪುರ ಉತ್ತರ:
ಕಾಂಗ್ರೆಸ್ : ಚಂದ್ರಕಾಂತ ಜಾಧವ. (ಗೆಲುವು)
ಶಿವಸೇನೆ : ರಾಜೇಶ ಕ್ಷೀರಸಾಗರ

4. ರಾಧಾನಗರಿ:
ಶಿವಸೇನೆ : ಪ್ರಕಾಶ ಅಬಿಟಕರ್(ಗೆಲುವು)
ಎನ್ ಸಿಬ ಪಿ : ಕೆಪಿ ಪಾಟೀಲ್

5. ಶಾಹುವಾಡಿ:
ಜನಸ್ವರಾಜ್ ಪಕ್ಷ. : ವಿನಯ ಕೋರೆ (ಗೆಲುವು)
ಶಿವಸೇನೆ : ಸತ್ಯಜಿತ್ ಪಾಟೀಲ್

6. ಕರವೀರ:
ಕಾಂಗ್ರೆಸ್ : ಪಿ ಎನ್ ಪಾಟೀಲ್ (ಗೆಲುವು)
ಪಕ್ಷೇತರ : ಚಂದ್ರದೀಪ ನರಕೆ

7. ಹಾತ್ ಕಣಗಲಾ:
ಕಾಂಗ್ರೆಸ್ : ರಾಜು ಅವಳೆ (ಗೆಲುವು)
ಶಿವಸೇನೆ: ಸುಜೀತ ಮಿನಚೇಕರ್

8. ಶಿರೋಳ .
ಪಕ್ಷೇತರ : ರಾಜೇಂದ್ರ ಪಾಟೀಲ್ (ಗೆಲುವು)
ಶಿವಸೇನೆ : ಉಲ್ಲಾಸ್ ಪಾಟೀಲ್

9. ಕಾಗಲ್:
ಎನ್ ಸಿ ಪಿ : ಹಸನ್ ಮುಷರಫ್ (ಗೆಲುವು)
ಶಿವಸೇನೆ : ಸಂಜಯ ಘಾಟಗೆ

10. ಚಂದಗಡ್.
ಎನ್ ಸಿ ಪಿ: ರಾಜೇಶ ಪಾಟೀಲ್ (ಗೆಲುವು)
ಪಕ್ಷೇತರ : ಶಿವಾಜಿ ಪಾಟೀಲ್

Spread the love

Leave a Reply

Your email address will not be published. Required fields are marked *