“ಎಲ್ಲದಕ್ಕೂ ಬೆಂಕಿ ಹಚ್ಚಲು ಪೆಟ್ರೋಲ್‌ ಸಿದ್ಧಪಡಿಸಿಟ್ಟುಕೊಂಡಿರಿ” ಕಾಂಗ್ರೆಸ್‌ ಮಾಜಿ ಸಂಸದ

“ಎಲ್ಲದಕ್ಕೂ ಬೆಂಕಿ ಹಚ್ಚಲು ಪೆಟ್ರೋಲ್‌ ಸಿದ್ಧಪಡಿಸಿಟ್ಟುಕೊಂಡಿರಿ” ಎಂದು ಪ್ರತಿಭಟನಾನಿರತ ದಂಗೆಕೋರರಿಗೆ ಕಾಂಗ್ರೆಸ್‌ ನ ಹಿರಿಯ ನಾಯಕರೊಬ್ಬರು ನೀಡಿದ ಮಾರ್ಗಸೂಚಿ ಈಗ ದೊಡ್ಡ ವಿವಾದವೆಬ್ಬಿಸಿದೆ.

ಒಡಿಶಾದ ಸಭರಂಗ್ಪುರ ಜಿಲ್ಲೆಯಲ್ಲಿ ಕರೆಯಲಾಗಿದ್ದ 12 ಗಂಟೆಗಳ ಪ್ರತಿಭಟನೆ ವೇಳೆ, “ಆದೇಶಗಳು ಸಿಗುತ್ತಿದ್ದಂತೆ ಎಲ್ಲವನ್ನೂ ಬೆಂಕಿ ಹಚ್ಚಿ ಸುಟ್ಟುಬಿಡಿ. ಮುಂದೇನಾಗುತ್ತೋ ನೋಡೋಣ” ಎಂದು ಪ್ರದೀಪ್‌ ಮಜ್ಹಿ ಎಂಬ ಕಾಂಗ್ರೆಸ್‌ ಮಾಜಿ ಸಂಸದನೊಬ್ಬ ತನ್ನ ಚೇಲಾಗಳಿಗೆ ತಿಳಿಸಿದ್ದಾನೆ.

ನಭರಂಗ್ಪುರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವಾದ ಬಳಿಕ ಪೊಲೀಸರು ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂಬ ಕಾರಣದಿಂದ ಸಾರ್ವಜನಿಕರಲ್ಲಿ ಆಕ್ರೊಶ ಮೂಡಿತ್ತು. ಈ ಸಂಬಂಧ 12 ಗಂಟೆಗಳ ಕಾಲ ನಭರಂಗ್ಪುರ ಬಂದ್‌ ಗೆ ಕಾಂಗ್ರೆಸ್ ಕರೆ ನೀಡಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights