ಎಲ್ಲೆಡೆ ಇಂದು ದಾನ ಮತ್ತು ನಿಷ್ಠೆಯ ಪವಿತ್ರ ಹಬ್ಬ ರಂಜಾನ್ ಆಚರಣೆ….
ಎಲ್ಲೆಡೆ ಇಂದು ದಾನ ಮತ್ತು ನಿಷ್ಠೆಯ ಪವಿತ್ರ ಹಬ್ಬ ರಂಜಾನ್ ಆಚರಣೆಯ ಸುದಿನ. ಈ ಹಬ್ಬವನ್ನು ಮುಸ್ಲೀಂ ಬಾಂಧವರು ಅತ್ಯಂತ ಸಡಗರದಿಂದ ಆಚರಿಸುತ್ತಾರೆ. ಪವಿತ್ರ ರಂಜಾನ್ ಹಬ್ಬವನ್ನು ಸೌದಿ ಪ್ರದೇಶಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮಸ್ಕಾಟ್ ನಲ್ಲಿ ಮತ್ತು ಭಾರತದಲ್ಲಿಯೂ ಅದೇ ಉತ್ಸಾಹದಿಂದ ರಂಜಾನ್ ಆಚರಿಸಲಾಗುತ್ತದೆ.
ಬಿದಿಗೆಯ ಚಂದ್ರ ದರ್ಶನದಿಂದ ಆರಂಭವಾಗುವ ಮೂವತ್ತು ದಿನಗಳ ರಂಜಾನ್, ಬಿದಿಗೆಯ ಚಂದ್ರ ದರ್ಶನದೊಂದಿಗೆ ಮುಕ್ತಾಯವಾಗುವುದು ನಿಯಮ. ಸೂರ್ಯ ಉದಯಿಸುವ ಮೊದಲು ಸೂರ್ಯಾಸ್ತವಾಗುವ ನಂತರದವರೆಗೂ ಯಾವುದೇ ರೀತಿಯ ಆಹಾರವನ್ನಾಗಲಿ ಸೇವಿಸದೆ ಮನಸ್ಸಿನಲ್ಲಿ ಕೆಟ್ಟ ಯೋಚನೆಗಳನ್ನು ಮಾಡಿದೆ ಒಂದು ತಿಂಗಳನ್ನು ಹೀಗೆ ಪೂರೈಸುತ್ತಾರೆ. ಉಪವಾಸ ಕೈಗೊಂಡ ಒಂದು ತಿಂಗಳ ಬಳಿಕ ಚಂದ್ರ ದರ್ಶನವಾದ ಮರುದಿನ ರಂಜಾನ್ ಆಚರಣೆ ಮಾಡಲಾಗುತ್ತದೆ. ಆ ಪ್ರಕಾರ ಇಂದು ಪವಿತ್ರ ರಂಜಾನ್ ಆಚರಣೆಯಲ್ಲಿ ಮುಸ್ಲೀಂ ಬಾಂಧವರು ಸಂಭ್ರಮಿಸುತ್ತಾರೆ.
ರಂಜಾನ್ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕ್ಕೆ ,ಐಕತ್ಯೆಯನ್ನು ಸಾರುವ ಹಬ್ಬ. ತನು ಮನ ಧನ ಧಾನ್ಯ ದೇವರಿಗೆ ಅರ್ಪಿಸುವ ಮೂಲಕ ಪಾಪವನ್ಮು ದೂರಮಾಡುವ ಮುಸ್ಲಿಂ ಧರ್ಮದ ಶ್ರೇಷ್ಠ ಹಬ್ಬ. ಪವಿತ್ರ ಶ್ರದ್ಧಾ ಭಕ್ತಿಯ ಅಲ್ಲಾನ ನಾಮ ಸ್ಮರಣೆಯ ಹಬ್ಬ ಈ ರಂಜಾನ್. ಇಡೀ ದಿನ ಉಪವಾಸ ಇರುವುದರಿಂದ ಮುಸಲ್ಮಾನರ ಮಾನಸಿಕ ಸ್ಥೈರ್ಯ ಬಲಗೊಂಡು ಅವರ ನಂಬಿಕೆಯ ಮೇಲೆ ಕಾರ್ಯೋನ್ಮುಖವಾಗುವಂತಹ ಶಕ್ತಿಯನ್ನು ದೇವರು ನಮಗೆ ದಯಪಾಲಿಸುತ್ತಾನೆ ಎಂಬ ನಂಬಿಕೆಯಿದೆ. ಜಕಾತ್ ಎಂಬ ಅನೇಕ ನಿಯಮಗಳನ್ನು ಪಾಲಿಸುವ ಮೂಲಕ ಒಳ್ಳೆಯ ಮಾರ್ಗದಲ್ಲಿ ಸಾಗಲು ದೇಹವನ್ನು ಶುದ್ಧವಾಗಿ ಇಟ್ಟುಕೊಳ್ಳಲು ಸಂಪ್ರಾದಯಿಕವಾಗಿ ಆಚರಿಸುವ ಹಬ್ಬವೇ ಈ ರಂಜಾನ್.
ಉಪವಾಸದ ಸಮಯದಲ್ಲಿ ಎಲ್ಲಾ ಮುಸ್ಲಿಮರು ಅಲ್ಲಾಹ್ ಸ್ಮರಿಸುತ್ತಾರೆ ಈ ಸಮಯದಲ್ಲಿ ದೇವರ ಪ್ರಾರ್ಥನೆ, ಕುರಾನ್ ಓದುವುದು ಮತ್ತು ದಾನ ಧರ್ಮ ಮಾಡುವುದು ಪ್ರಮುಖ ಕಾರ್ಯಗಳಾಗಿರುತ್ತವೆ. ಈ ಸಮಯದಲ್ಲಿ ಬಡವರ ಬಗ್ಗೆ ಕಾಳಜಿ ವಹಿಸಿ ಶ್ರೀಮಂತರು ಅವರಿಗೆ ಅಗತ್ಯವಿರುವ ವಸ್ತ್ರಗಳು, ಆಹಾರ ಸಾಮಗ್ರಿಗಳನ್ನು ದಾನ ಮಾಡುತ್ತಾರೆ.
ಸಿಹಿ ಖಾದ್ಯಗಳು ಸೇರಿದಂತೆ, ವಿಧವಾದ ಮಾಂಸದ ಅಡುಗೆ ತಯಾರಿಸಿ ಬಂಧುಬಳಗ, ಮಕ್ಕಳು, ಸ್ನೇಹಿತರೊಂದಿಗೆ ಹಬ್ಬದ ಊಟ ಮಾಡುತ್ತಾರೆ.
ಇದು ಮುಸಲ್ಮಾನರಿಗೆಂದೇ ಮೀಸಲಾದ ಅತ್ಯಂತ ಪವಿತ್ರ ಆಚರಣೆ. ಪ್ರತಿ ಮುಸಲ್ಮಾನರು ಈ ಸಂದರ್ಭದಲ್ಲಿ ತಮ್ಮ ಇತರ ಕಾರ್ಯ ಚಟುವಟಿಕೆಗಳನ್ನು ಬದಿಗೂತ್ತಿ ಈ ಒಂದು ತಿಂಗಳ ಕಾಲ ಹಬ್ಬದ ಆಚರಣೆಯ ಮತ್ತು ಅದಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಿಗೆ ಮಾತ್ರ ಮನಸ್ಸು ಮಾಡುತ್ತಾರೆ. ಜೊತೆಗೆ ಮುಸ್ಲಿಮರು ತಮ್ಮ ನಂಬಿಕೆಯಲ್ಲಿ 5 ತತ್ವಗಳನ್ನು ಹೊಂದಿದ್ದಾರೆ. ಇದರಲ್ಲಿ ಉಪವಾಸವಿರುವುದು ಸಹ ಒಂದು. ಇತರ 4 ತತ್ವಗಳನ್ನು ಗಮನಿಸುವುದಾದರೆ.. 1.ಪ್ರತಿ ದಿನ ಐದು ಬಾರಿ ಪ್ರಾರ್ಥನೆ ಮಾಡುವುದು. 2.ದಾನ – ಧರ್ಮ ಮಾಡುವುದು.3. ಪರಸ್ಪರ ನಂಬಿಕೆಯನ್ನು ಬೆಳೆಸಿಕೊಳ್ಳುವುದು. 4.ತಮ್ಮ ಜೀವನದಲ್ಲಿ ಒಂದು ಬಾರಿಯಾದರೂ ಮೆಕ್ಕಾ ಗೆ ಹಜ್ಜ್ ಯಾತ್ರೆ ಕೈಗೊಳ್ಳುವುದು.