ಒಬ್ಬ ಕಾರ್ಮಿಕನೂ ಸಾವು, ನೋವಿಗೆ ತುತ್ತಾಗದಂತೆ ಸರ್ಕಾರ ನೋಡಿಕೊಳ್ಳಬೇಕು: ಸಿದ್ದರಾಮಯ್ಯ ಆಗ್ರಹ

ಬೆವರು, ರಕ್ತ ಹರಿಸಿ ನಾಡು ಕಟ್ಟಿರುವ ಕಾರ್ಮಿಕರು ಬದುಕಿಗಾಗಿ ಪರದಾಡುತ್ತಿದ್ದಾರೆ. ದೇಶ ಕಟ್ಟುತ್ತಿರುವ ಕಾರ್ಮಿಕರ ಮೇಲಿನ ಸರ್ಕಾರದ ನಿರ್ಲಕ್ಷ್ಯ ಧೋರಣೆ ಸರಿಯಲ್ಲ. ಒಬ್ಬ ಕಾರ್ಮಿಕನೂ ಸಾವು, ನೋವಿಗೆ ತುತ್ತಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಸರ್ಕಾರವನ್ನು ರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಆಗ್ರಹಿಸಿದ್ದಾರೆ.

ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯನವರು, ಊರುಗಳಿಗೆ ನಡೆದು ಹೋಗುತ್ತಿದ್ದ ಕಾರ್ಮಿಕರು ರೈಲು ಹಳಿ ಮೇಲೆ ಮಲಗಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಕೆಲವೆಡೆ ಹಲವಾರು ಜನರು ಹಸಿವಿನಿಂದ ಸತ್ತಿದ್ದಾರೆ. ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮನಸ್ಸು ಕರಗಿದಂತೆಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಸಿಲುಕಿಕೊಂಡಿರುವ ಹೊರ ರಾಜ್ಯಗಳ ವಲಸೆ ಕಾರ್ಮಿಕರು ಹಾಗೂ ಹೊರ ರಾಜ್ಯಗಳಲ್ಲಿ ಸಿಕ್ಕಿಕೊಂಡಿಎರುವ ರಾಜ್ಯದ ಕಾರ್ಮಿಕರು ಅವರ ಊರುಗಳಿಗೆ ಹೋಗಲು ಪರದಾಡುತ್ತಿದ್ದಾರೆ. ಅವರನ್ನು ಅವರ ಊರುಗಳಿಗೆ ತಲುಪಿಸಲು ರೈಲುಗಳು ವ್ಯವಸ್ಥೆ ಮಾಡಬೇಕು.

ಬೆಂಗಳೂರಿನಿಂದ ಹೋಗುವ ಕಾರ್ಮಿಕರಿಗೆ ಅಕ್ಕಪಕ್ಕದ ಜಿಲ್ಲೆಗಳ ರೈಲು ನಿಲ್ದಾಣಗಳಿಗೆ ಹೋಗಲು ಸೂಚಿಸಿದ್ದೀರಿ. ಅವರು ಅಲ್ಲಿಗೆ ತಲುಪಲು ಉಚಿತ  ಬಸ್‌ಗಳ ವ್ಯವಸ್ಥೆ ಮಾಡಬೇಕು. ಅಲ್ಲದೆ, ಕಾರ್ಮಿಕರು ತಮ್ಮೂರು ತಲುಪುವವರೆಗೂ ಆಹಾರದ ವ್ಯವಸ್ಥೆಯನ್ನೂ ಸರ್ಕಾರವೇ ಮಾಡಬೇಕು ಎಂದು ಸಿದ್ದರಾಮಯ್ಯನವರು ಆಗ್ರಹಿಸಿದ್ದಾರೆ.

 

Spread the love

Leave a Reply

Your email address will not be published. Required fields are marked *