ಕಂಠಪೂರ್ತಿ ಗುಂಡು : ಟ್ರಾನ್ಸಫಾರ್ಮರ್ ತಳ್ಳಲು ಹೋದ ಭೂಪತಿ ಗಂಡು…!

ಲಾಕ್ ಡೌನ್ ನಿಂದಾಗಿ ಎಣ್ಣೆ ಸಿಗದೇ ಕಂಗಾಲಾಗಿದ್ದ ಮಂದಿಗೆ ಎಣ್ಣೆ ಸಿಕ್ಕ ಬಳಿಕ ಹೇಗೇಲ್ಲಾ ಆಡ್ತಾಯಿದ್ದಾರೆ ಅನ್ನೋದನ್ನ ಪ್ರತಿಯೊಂದು ಜಿಲ್ಲೆಯ ವರದಿಯನ್ನು ನಾವು ನೋಡುತ್ತಲೇ ಇದ್ದೇವೆ. ಆದರೆ ಇಲ್ಲೊಬ್ಬ ಭೂಪ ಕಂಠಪೂರ್ತಿ ಗುಂಡು ಹಾಕಿ ಜಗತ್ತನ್ನೇ ಗೆದ್ದ ಹಾಗೆ ಆಡೋದ ಮಾತ್ರವಲ್ಲದೇ ರಂಪಾಟ ಮಾಡಿದ ಘಟನೆ ತೆಲಂಗಾಣದ ಜಗತ್ಯಾಲ ಜಿಲ್ಲೆಯ ಕೊರ್ತುಲಾ ಪಟ್ಟಣದಲ್ಲಿ ನಡೆದಿದೆ.

ಹೌದು.. ಇಲ್ಲೊಬ್ಬ ಮದ್ಯವ್ಯಸನಿ ಮದ್ಯದ ಅಮಲಿನಲ್ಲಿ ರೋಡಿನಲ್ಲಿ ತೂರಾಡ್ತಾ, ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಕಲ್ಲನ್ನ ಎತ್ತಿ ನಡು ರಸ್ತೆಮದ್ಯ ಹಾಕಿದ್ದಾನೆ. ಜೊತೆಗೆ ವಾಹನಗಳಿಗೂ ಅಡ್ಡಗಟ್ಟುತ್ತಾ,   ಕಲ್ಲನ್ನ ಬಾಹುಬಲಿಯಂತೆ ಫೋಸ್ ಕೊಟ್ಟು ಎಸೆದಿದ್ದಾನೆ. ಅದ್ಯಾವ ಜನ್ಮದ ಪುಣ್ಯವೋ ಏನೋ. ಈ ವ್ಯಕ್ತಿ ಹೀಗೆ ರಸ್ತೆ ಮೇಲೆ ಆಡುವಾಗ ಯಾವುದೇ ವಾಹನಗಳು ಹತ್ತಿರದಲ್ಲಿ ಓಡಾಡಲಿಲ್ಲ. ಕಲ್ಲು ತನ್ನ ಮೈಮೇಲೆ ಬೀಳಲಿಲ್ಲ.

ಇದನ್ನೆಲ್ಲಾ ರಂಪಾಟ ಮಾಡ್ತಾಯಿದ್ದು ಸಮಾಧಾನವಾಗದೇ ಕೊನೆಗೆ ರಸ್ತೆಯಲ್ಲಿ ಮತ್ತೊಂದು ಬದಿಯಲ್ಲಿದ್ದ ಟ್ರಾನ್ಸಫಾರ್ಮರ್ ಬಳಿ ಹೋಗಿ ಅದನ್ನ ಎತ್ತಲು ಮುಂದಾಗಿದ್ದಾನೆ. ಅದರಲ್ಲಿ ವಿದ್ಯುತ್ ಪ್ರವೇಶಿಸುತ್ತದೇ ಅನ್ನೋ ಭಯವಿಲ್ಲದೇ, ಪ್ರಜ್ಞೆಯಿಲ್ಲದೇ ತಳ್ಳಲು ಪ್ರಯತ್ನಿಸಿದ್ದಾನೆ. ಎಷ್ಟು ಪ್ರಯತ್ನ ಪಟ್ಟರೂ ತಳ್ಳಲು ಸಾಧ್ಯವಾಗದೇ ಮತ್ತಷ್ಟು ಬಲ ಹಾಕಿ ತಳ್ಳಲು ಪ್ರಯತ್ನಿಸಿದ್ದಾನೆ.

ಈ ದೃಶ್ಯ ಸದ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 

https://twitter.com/PulseTelangana/status/1259833809446584320?s=20

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights