ಕಟ್ಟಿಗೆ ಮನೆಗೆ ಬಿದ್ದ ಬೆಂಕಿ : ಸಿಲಿಂಡರ್ ಸ್ಪೋಟ…!
ಬೆಂಕಿಯ ಜ್ವಾಲೆಗೆ ಕಟ್ಟಿಗೆಯಿಂದ ನಿರ್ಮಿಸಲಾಗಿದ್ದ ಹಳೆಯ ಮನೆ ಸುಟ್ಟು ಹೋದ ಘಟನೆ ವಿಜಯಪುರ ನಗರದ ಕಾಬ್ರಾಜಿ ಬಜಾರನಲ್ಲಿ ನಡೆದಿದೆ.
ಬುಖಾರಿ ಮಸೀದಿ ಬಳಿ ಇರುವ ವಾಟರಕರ ಎಂಬುವರಿಗೆ ಸೇರಿದ ಎರಡಂತಸ್ಥಲತಿನ ಮನೆಗೆ ಬೆಂಕಿ ಬಿದ್ದು ಸುಟ್ಟು ಹೋಗಿದೆ. ಬೆಂಕಿಯ ಬಳಿಕ ಸಿಲಿಂಡರ ಸ್ಪೋಟಗೊಂಡಿದೆ. ಮನೆಯಲ್ಲಿದ್ದವರು ಅದೃಷ್ಠವಶಾತ್ ಬಚಾವ್ ಆಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಸ್ಥಳಕ್ಕೆ ದೌಡಾಯಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮನೆಗೆ ಬೆಂಕಿ ಬಿದ್ದ ನಿಖರ ಕಾರಣ ಮಾತ್ರ ತಿಳಿದು ಬಂದಿಲ್ಲ.