‘ಕನ್ನಡ ಧ್ವಜ ಅಧಿಕೃತವಲ್ಲ’ ಹೇಳಿಕೆ ವಿಚಾರ : ಸಚಿವರ ವಿರುದ್ಧ ಕರವೇ ಪ್ರತಿಭಟನೆ
ಕನ್ನಡ ಧ್ವಜ ಅಧಿಕೃತವಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವರ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ.
ಸಚಿವ ಸಿಟಿ ರವಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ ಮಾಡಲಾಗುತ್ತಿದೆ. ದಾವಣಗೆರೆಯ ಕೆಬಿ ಬಡಾವಣೆಯಲ್ಲಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಆಕ್ರೋಶ ಹೊರಹಾಕಿದ್ದಾರೆ ಕಾರ್ಯಕರ್ತರು.
ಜೊತೆಗೆ ರಾಜ್ಯೋತ್ಸವ ದಿನ ಕನ್ನಡ ಬಾವುಟ ಹಾರಿಸಬೇಕು ಸಚಿವ ಸಿಟಿ ರವಿ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.