ಕಪಾಲಿ ಬೆಟ್ಟದಲ್ಲಿ ಯೇಸುಕ್ರಿಸ್ತನ ಮೂರ್ತಿ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಅನಂತಕುಮಾರ್ ಟಾಂಗ್

ಕನಕಪುರದಲ್ಲಿ ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಂದ  ಶಿಲಾನ್ಯಾಸ ಹಿನ್ನಲೆ ಸಂಸದ ಅನಂತಕುಮಾರ್ ಹೆಗಡೆ ಡಿಕೆಶಿಗೆ ಟಾಂಗ್ ನೀಡಿದ್ದಾರೆ.
ಹೌದು… ಯೇಸುಕ್ರಿಸ್ತನ ಮೂರ್ತಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅವರಿಗೆ ಬಿಜೆಪಿ ನಾಯಕರು ಟ್ವೀಟ್​ ಮೂಲಕ ತಿರುಗೇಟು ನೀಡಿದ್ದಾರೆ.ಕನಕಪುರದ ಕಪಾಲಿ ಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಲಾಗ್ತಿರುವ ಯೇಸುಕ್ರಿಸ್ತನ ಪ್ರತಿಮೆ ಬಗ್ಗೆ ಸಂಸದ ಅನಂತಕುಮಾರ್​ ಹೆಗಡೆ ಅಪಸ್ವರ ಎತ್ತಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅನಂತಕುಮಾರ್ ಹೆಗಡೆ , “ಇಲ್ಲೊಬ್ಬ ತಿಹಾರಿ ರಿಟರ್ನ್  ಮಹನೀಯರೋಬ್ಬರು ಯಾವುದೋ ಹುದ್ದೆಯ ಆಸೆಯೊಂದಿಗೆ, ಅವರ ಇಟಲಿಯಮ್ಮನನ್ನು ಪ್ರಸನ್ನಗೊಳಿಸಲು ಅತಿ ದೊಡ್ಡ ಯೇಸುವಿನ ಪ್ರತಿಮೆ ಸ್ಥಾಪಿಸಿ ತಮ್ಮ ಪೌರುಷವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ಓಲೈಕೆಯ ರಾಜಕೀಯಕ್ಕೆ ಪೈಪೋಟಿ ನೀಡಲು ಕಾಂಗ್ರೆಸ್ ನಲ್ಲಿ ಇನ್ನು ಹೆಚ್ಚಿನ ಗುಲಾಮರು ಅಖಾಂಡಕ್ಕೆ ಇಳಿದರು ಅಚ್ಚರಿ ಇಲ್ಲ  ಎಂದು ಟೀಕಿಸಿದ್ದಾರೆ.

https://twitter.com/AnantkumarH

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights