ಕರ್ನಾಟಕದಂತೆ ಮಧ್ಯಪ್ರದೇಶದಲ್ಲೂ ಆಪರೇಷನ್ ಕಮಲ : ರಾತ್ರೋರಾತ್ರಿ ಶಾಸಕರು ಶಿಫ್ಟ್!

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡದಿದ್ದು ಆಪರೇಷನ್ ಕಮಲದಿಂದ. ಇದೇ ರೀತಿ ಮಧ್ಯಪ್ರದೇಶದಲ್ಲೂ ಬಿಜೆಪಿ ಅಧಿಕಾರಕ್ಕೇರಲು ನಿರ್ಧರಿಸಿದೆ.

ಎಸ್… ಮಧ್ಯಪ್ರದೇಶದ 12 ಜನ ಶಾಸಕರು ಪಕ್ಷ ತೊರೆಯಲು ಪಟ್ಟು ಹಿಡಿದು ನಿಂತಿದ್ದಾರೆ. ಈಗಾಗಲೇ 8 ಮಂದಿ ದೆಹಲಿಗೆ ಪ್ರಯಾಣ ಬೆಳಸಿದ್ದು, ಇನ್ನೂ ನಾಲ್ಕು ಶಾಸಕರನ್ನು ಕರ್ನಾಟಕಕ್ಕೆ ಶಿಫ್ಟ್ ಮಾಡಲಾಗಿದೆ ಎನ್ನುವ ವಿಚಾರ ವಿಪಕ್ಷ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

ರಾತ್ರೋರಾತ್ರಿ 4 ಶಾಸಕರನ್ನು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಕರೆತಂದು ಚಿಕ್ಕಮಗಳೂರಿನ ರೆಸಾರ್ಟ್ ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.  ಮೂಲಗಳ ಪ್ರಕಾರ, ಕಾಂಗ್ರೆಸ್​ನ ನಾಲ್ವರು ಶಾಸಕರು ಹರಿಯಾಣದ ಬಳಿ ಇರುವ ಐಟಿಸಿ ಮೌರ್ಯ ಹೋಟೆಲ್​ನಲ್ಲಿದ್ದಾರೆ. ಒಬ್ಬ ಕಾಂಗ್ರೆಸ್ ಮತ್ತು ಇಬ್ಬರು ಪಕ್ಷೇತರ ಶಾಸಕರನ್ನು ಕರ್ನಾಟಕದ ರೆಸಾರ್ಟ್​ನಲ್ಲಿ ಇರಿಸಲಾಗಿದೆ. ಕರ್ನಾಟಕಕ್ಕೆ ಕರೆತಂದಿರುವ ಮೂವರು ಶಾಸಕರನ್ನು ಚಿಕ್ಕಮಗಳೂರಿನ ಬಳಿ ಇರುವ ರೆಸಾರ್ಟ್​ನಲ್ಲಿ ಇರಿಸಲಾಗಿದೆ ಎಂಬ ಮಾಹಿತಿಗಳು ಇದೀಗ ಲಭ್ಯವಾಗುತ್ತಿವೆ. ಆದರೆ, ಈ ಕುರಿತು ಇನ್ನೂ ಖಚಿತತೆ ಇಲ್ಲ.

ಈ ಬಗ್ಗೆ ಹೇಳಿಕೆ ನೀಡಿರುವ ಮಧ್ಯಪ್ರದೇಶ ಸಿಎಂ ಕಮಲನಾಥ್, “ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ. ನಮ್ಮ ಪಕ್ಷದ ಶಾಸಕರು ಎಂದಿಗೂ ನಮಗೆ ನಂಬಿಕೆದ್ರೋಹ ಮಾಡುವುದಿಲ್ಲ. ಅವರು ಕಾಂಗ್ರೆಸ್​ಗೆ ಮರಳುತ್ತಾರೆಂಬ ನಂಬಿಕೆಯಿದೆ” ಎಂದಿದ್ದಾರೆ.

ಮಧ್ಯಪ್ರದೇಶ ಸಿಎಂ ಕಮಲನಾಥ್ ಅಧಿಕಾರಕ್ಕೆ ಬರುವ ಮುನ್ನ ಅತ್ಯಂತ ಕಡಿಮೆ ಅಂತರದಿಂದ ಸೋಲು ಕಂಡಿದ್ದ ಬಿಜೆಪಿ ಕಾಂಗ್ರೆಸ್​ ಮತ್ತು ಇತರೆ ಪಕ್ಷದ ಶಾಸಕರನ್ನು ರೆಸಾರ್ಟ್​ ರಾಜಕಾರಣದ ಮೂಲಕ ತನ್ನತ್ತ ಸೆಳೆದು, ಸರ್ಕಾರ ರಚಿಸಲು ತಂತ್ರ ರೂಪಿಸಿತ್ತು. ಆದರೆ, ರೆಸಾರ್ಟ್​ ರಾಜಕೀಯದ ಪ್ಲಾನ್ ಯಶಸ್ಸು ಕಂಡಿರಲಿಲ್ಲ. ಸದ್ಯ ಅದೇ ದಾರಿಯನ್ನ ಹಿಡಿದಿದ್ದು 12 ಶಾಸಕರು ಪಕ್ಷಾಂತರಗೊಳ್ಳಲು ಬಿಜೆಪಿ ಯಾವೆಲ್ಲಾ ತಂತ್ರಗಳನ್ನ ಹೂಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights