ಕಾಮ್ರಾಗೆ ಪ್ರಯಾಣ ನಿರ್ಬಂಧ- ಇನಾಮ್ ಗೆ ದೇಶದ್ರೋಹ ಪಟ್ಟ : ಕೇಂದ್ರ ಬಿಜೆಪಿ ಸಂಸದ-ಸಚಿವರಿಗೆ..?

ಕುನಾಲ್ ಕಮ್ರಾ ಅವರಿಗೆ ಕೆಲವು ವಿಮಾನ ಸಂಸ್ಥೆಗಳು ಪ್ರಯಾಣ ನಿಷೇಧಿಸಿದ್ದಕ್ಕೆ ಅಪಾರ ಬೆಂಬಲ ದೊರೆತಿದೆ. ಶಾರ್ಜೀಲ್ ಇನಾಮ್ ವಿರುದ್ಧ ದೇಶದ್ರೋಹದ ಆರೋಪ ಹೋರಿಸಲಾಗಿದ್ದು, ಅವರನ್ನು ಭಯೋತ್ಪಾದಕನಂತೆ ನಡೆಸಲಾಗುತ್ತಿದೆ.

ಕುನಾಲ್ ಕರ್ಮಾ-ಅರ್ನಾಬ್ ಗೋಸ್ವಾಮಿ ಎಪಿಸೋಡ್ ಮತ್ತು ಶಾರ್ಜೀಲ್ ಇನಾಮ್ ಅವರ ಬಂಧನ ಈ ಎರಡು ವಿಚಾರಗಳು ಸದ್ಯ ದೇಶದಲ್ಲಿ ಭಾರೀ ಪರ ವಿರೋಧಕ್ಕೆ ಕಾರಣವಾದ ಸುದ್ದಿಗಳು. ಇದರ ಜೊತೆಗೆ ಮತ್ತೊಂದು ಪ್ರಶ್ನೆ ಭಾರೀ ಸುದ್ದಿಯಾಗುತ್ತಿದೆ. ಅದುವೇ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹಾಗೂ ಸಂಸದ ಪರ್ವೇಶ್ ವರ್ಮಾ ಕೊಟ್ಟ ವಿವಾದಾತ್ಮಕ ಹೇಳಿಕೆಗಳು.

ಮೊನ್ನೆಯಷ್ಟೇ ಇಂಡಿಗೋ ವಿಮಾನದಲ್ಲಿ ಮುಂಬೈ ಟು ಲಕ್ನೋ ಗೆತೆರಳುತ್ತಿದ್ದ ಸಟ್ಯಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಪ್ರಯಾಣಿಸುವ ವೇಳೆ ಸಹ ಪ್ರಯಾಣಿಕರಾಗಿದ್ದ ಖಾಸಗಿ ಸುದ್ದಿ ವಾಹಿನಿಯ ಸಂಪಾದಕರಾದ ಅರ್ನಬ್ ಗೋಸ್ವಾಮಿ ಅವರಿಗೆ ಕಿರಿಕಿರಿ ಉಂಟು ಮಾಡುವ ರೀತಿಯಲ್ಲಿ ವರ್ತಿಸಿದ್ದರು ಎನ್ನುವ ಆರೋಪದ ಹಿನ್ನೆಲೆ ಏರ್ ಇಂಡಿಯಾ, ಇಂಡಿಗೋ ಹಾಗೂ ಸ್ಪೈಸ್ ಜೆಟ್ ವಿಮಾನ ಸಂಸ್ಥೆಗಳು ಈಗಾಗಲೇ ಕಮ್ರಾ ಪ್ರಯಾಣಕ್ಕೆ ನಿರ್ಬಂಧ ವಿಧಿಸಿವೆ.
ಕುನಾಲ್ ಕಮ್ರಾ ಅವರನ್ನು ಬೆಂಬಲಿಸುವುದು ಸುಲಭ, ಏಕೆಂದರೆ ಅವರ ವಿರುದ್ಧದ ರಾಜ್ಯ ಕ್ರಮವು ಅನಿಯಂತ್ರಿತ ಮತ್ತು ಹಾಸ್ಯಾಸ್ಪದವಾಗಿದೆ, ಯಾವುದೇ ಕಾನೂನು ಆಧಾರಗಳಿಲ್ಲದೆ, ಅದನ್ನು ವಿರೋಧಿಸಲು ಯಾವುದೇ ಧೈರ್ಯ ಬೇಕಾಗಿಲ್ಲ. ಆದರೆ ಶಾರ್ಜೀಲ್ ಇಮಾಮ್ ಉದಾರವಾದದ ನಿಜವಾದ ಪರೀಕ್ಷಾ ಪ್ರಕರಣವಾಗಿದೆ.

ದೇಶದಾದ್ಯಂತ ಹೆಸರುವಾಸಿಯಾಗಿರುವ ದಿಲ್ಲಿಯ ಶಾಹೀನ್ ಬಾಗ್ ಪ್ರತಿಭಟನೆಗಳ ಆಯೋಜಕರಲ್ಲಿ ಒಬ್ಬರು ಎನ್ನಲಾಗುತ್ತಿದ್ದ ಮತ್ತು ದಿಲ್ಲಿಯ ಪ್ರತಿಷ್ಠಿತ ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್ಯು) ದ ಸಂಶೋಧನಾ ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ದೇಶದ್ರೋಹದ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಪೊಲೀಸರು ಸೋಷಿಯಲ್ ವೀಡಿಯಾದ ವಿಡಿಯೋಗಳನ್ನು ಆಧರಿಸಿ ಅವರ ವಿರುದ್ಧ ಕೇಸು ದಾಖಲಿಸಿಕೊಂಡು ಬಂಧಿಸಿದ್ದಾರೆ.

ಆದರೆ ‘ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಬೇಕು’ ಎಂದು ಬಿಜೆಪಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ದಿಲ್ಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಒಂದು ಗಂಟೆಯೊಳಗೆ ಶಹೀನ್ ಬಾಗ್ನ್ನು ಮುಕ್ತಗೊಳಿಸುತ್ತೇವೆ. ಅಷ್ಟೇ ಅಲ್ಲ ಕಾಶ್ಮೀರ ಪಂಡಿತರಿಗೆ ಕಾಶ್ಮೀರದಲ್ಲಾದ ಗತಿ ದಿಲ್ಲಿಯಲ್ಲೂ ಆಗುತ್ತದೆ. ಲಕ್ಷಾಂತರ ಸಿಎಎ ವಿರೋಧಿ ಪ್ರತಿಭಟನಾಕಾರರು ಮನೆಗಳಿಗೆ ನುಗ್ಗಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡುತ್ತಾರೆ ಎಂದು ಬಿಜೆಪಿ ಸಂಸದ ಪರ್ವೇಶ್ ವರ್ಮಾ ಹೇಳಿಕೆ ನೀಡಿದ್ದರು.

ಇದರ ಜೊತೆಗೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ‘ದೇಶದ್ರೋಹಿಗಳಿಗೆ ಗುಂಡು ಹಾರಿಸು’ ಎಂದು ರ್ಯಾಲಿಯಲ್ಲಿ ಬೆಂಬಲಿಗರಿಗೆ ನೀಡಿದ ಪ್ರಚೋದನೆ ಯಶಸ್ವಿಯಾಯಿತು. ಇದಕ್ಕೆ ಸಾಕ್ಷಿ ದೆಹಲಿಯ ಜಾಮಿಯಾ ನಗರದಲ್ಲಿ ನಡೆದ ಗುಂಡಿನ ದಾಳಿ. ಈ ರೀತಿ ಹೇಳಿಕೆಗೆ ಕಾರಣ ಕೇಳಿ ಚುನಾವಣಾ ಆಯೋಗ ಶೋಖಾಸ್ ನೋಟೀಸ್ ನೀಡಿತ್ತು.

ಶೋಖಾಸ್ ನೋಟೀಸ್ ಗಳಿಗೆ ಬಿಜೆಪಿ ಮುಖಂಡರು ನೀಡಿರುವ ಉತ್ತರದಿಂದ ಚುನಾವಣಾ ಆಯೋಗಕ್ಕೆ ಸಮಾಧಾನವಾಗಿಲ್ಲದ ಕಾರಣ ಇಬ್ಬರಿಗೂ ನಾಲ್ಕು ದಿನ ಪ್ರಚಾರದಲ್ಲಿ ಭಾಗಿಯಾಗದಂತೆ ನಿರ್ಬಂಧ ಹೇರಲಾಗಿದೆ.

ಶಾರ್ಜೀಲ್ ಇಮಾಮ್ ಅವರ ಹೇಳಿಕೆ ದೇಶದ್ರೋಹದ ಹೇಳಿಕೆಯೇ ಆಗಿದ್ದರೆ, ಬಿಜೆಪಿ ಸಂಸದ ಅನುರಾಗ್ ಠಾಕೂರ್, ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಸಂಸದ ಪರ್ವೇಶ್ ವರ್ಮಾ ಹೇಳಿದ ಹೇಳಿಕೆ ಏನು..? ಅದು ದೇಶದ್ರೋಹದ ಹೇಳಿಕೆ ಅಲ್ಲವೇ…? ಸಚಿವ – ಸಂಸದರಿಗೆ ವಿಧಿಸಿದ್ದು ಚುನಾವನಾ ಪ್ರಚಾರದಲ್ಲಿ ಭಾಗಿಯಾಗದಂತೆ ನಿರ್ಬಂಧ ಆದರೆ ಶಾರ್ಜೀಲ್ ಇಮಾಮ್ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯ (ಯುಎಪಿಎ) ಅಡಿಯಲ್ಲಿ ಕಠಿಣ ದೇಶದ್ರೋಹದ ಆರೋಪಿಸಿ ಬಂಧಿಸಲಾಗಿದೆ.

ಪ್ರಶ್ನಿಸುವ ಹಾಗೂ ಮಾತನಾಡು ಹಕ್ಕು ದೆಶದ ಪ್ರತಿಯೊಬ್ಬ ಪ್ರಜೆಗಳಿಗಿದೆ. ಆದರೆ ಇದು ದೇಶದ್ರೋಹಕ್ಕೆ ಪ್ರಚೋದನೆ ನೀಡುವಂತಿರಬಾರದು. ಹಾಗೊಂದು ವೇಳೆ ಇಂತಹ ಹೇಳಿಕೆ ಕೊಟ್ಟು ಪ್ರಚೋದಿಸಿದರೆ ಅಂತವರು ರಾಜಕೀಯ ವ್ಯಕ್ತಿಗಳಾದರೇನು ವಿದ್ಯಾರ್ಥಿಗಳಾದರೇನು ಯಾವ ಸಮುದಾಯದವರಾದರೇನು..? ಕಾನೂನಿನ ಮುಂದೆ ಎಲ್ಲರಲೂ ಸಮಾನರೇ.. ಇಂತಹ ಹೇಳಿಕೆಗಳಿಂದ ಶಿಕ್ಷೆಗೆ ಅರ್ಹಹರಾಗಿದ್ದರೆ ದೇಶದ್ರೋಹಿಗಳೆಂದೇ ಅರ್ಥೈಸಿಕೊಳ್ಳಬೇಕಲ್ಲವೇ..?
ಆದರೆ ಕುನಾಲ್ ಕಮ್ರಾ, ಶರ್ಜೀಕಲ್ ಇನಾಮ್ ವಿಚಾರದಲ್ಲಿ ಇದು ಬೇರೆದ್ದೇ ರೂಪ ಪಡೆದುಕೊಂಡಿದೆ. ಇಂಥಹ ತಾರತಮ್ಯದಿಂದಲೇ ದೇಶದ ಗತಿ ಅದೋಗತಿಗೆ ತಲುಪುವ ಆತಂಕ ಎಲ್ಲೆಡೆ ಸೃಷ್ಟಿಯಾಗಿದ್ದು, ಭಾರೀ ಪ್ರಮಾಣದ ಪರ ವಿರೋಧದದ ಗೊಂದಲಗಳು ಸೃಷ್ಟಿಯಾಗಿದೆ. ಇದರಿಂದ ದೇಶದ ಸುಸ್ಥಿತಿಯನ್ನು ಕಾಪಾಡುವುದು ಹೇಗೆ ಎನ್ನುವ ಆತಂಕ ಶುರುವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights