ಕುಡಿದ ಮತ್ತಿನಲ್ಲಿ ಗ್ರಾಮದೊಳಗೆ ನುಗ್ಗಿದ ವಿದೇಶಿಗನ ಪುಂಡಾಟಿಕೆಗೆ ಬಿತ್ತು ಗೂಸಾ…

ಕುಡಿದ ಮತ್ತಿನಲ್ಲಿ ಗ್ರಾಮದೊಳಗೆ ನುಗ್ಗಿ ವಿದೇಶಿಗನ ಪುಂಡಾಟಿಕೆಗೆ ಗ್ರಾಮಸ್ಥರು ಗೂಸಾ ಕೊಟ್ಟ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೊಂಕಣಕೊಪ್ಪ ಗ್ರಾಮದಲ್ಲಿ ನಡೆದಿದೆ.

ಹೌದು… ಗಡ್ಡ ಬಿಟ್ಟಿರೋ ವಿಲಿಯಮ್ಸ್ ಜೇಮ್ಸ್ ಆಸ್ಟ್ರೇಲಿಯಾ ಮೂಲದ ವಿದೇಶಿಗನ ಮೇಲೆ ಗ್ರಾಮಸ್ಥರಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಕುಡಿದ ಮತ್ತಿನಲ್ಲಿ ರಾತ್ರಿ ಅಪರಿಚಿತರ ಮನೆಯೊಳಗೆ ವಿದೇಶಿ ಪ್ರವಾಸಿಗನೊಬ್ಬ ನುಗ್ಗಿದ್ದಾನೆ. ಈತನ ವಿಚಿತ್ರ ವರ್ತನೆ ಕಂಡು ಮಹಿಳೆ ಚೀರಿಕೊಂಡಿದ್ದಾಳೆ. ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆಂದು ಶಂಕಿಸಿ ಗ್ರಾಮಸ್ಥರು ಹಿಗ್ಗಾಮೊಗ್ಗಾ ಥಳಿಸಿದ್ದಾರೆ.

ವಿದೇಶಿಗನ ತಲೆಗೆ ಬಾರೀ ಹೊಡೆತಕ್ಕೆ ರಕ್ತಸ್ರಾವವಾಗಿದ್ದು. ಕಣ್ಣುಗಳು ಉಬ್ಬಿಕೊಂಡಿವೆ. ದೇಹದ ಮೇಲೆ ಎಲ್ಲಂದರಲ್ಲಿ ಗಾಯಗಳಾಗಿವೆ. ಐತಿಹಾಸಿಕ ಬಾದಾಮಿ ವೀಕ್ಷಣೆಗೆ ಬಂದಿರೋ ಆಸ್ಟ್ರೇಲಿಯಾ ಪ್ರವಾಸಿಗ, ಕುಡಿದ ಮತ್ತಿನಲ್ಲಿ ದಾರಿ ಮಧ್ಯೆ ಕೊಂಕಣಕೊಪ್ಪ ಗ್ರಾಮಕ್ಕೆ ಬಂದಿದ್ದಾನೆ. ಮನೆಯೊಳಗೆ ನುಗ್ಗಿ ವಿಚಿತ್ರವಾಗಿ ವರ್ತಿಸಿದ್ದಾನೆ. ಇದರಿಂದ ರಾತ್ರಿ ವೇಳೆ ವಿದೇಶಿಗನೆನ್ನದೇ ಗ್ರಾಮಸ್ಥರು ಹಗ್ಗದಿಂದ ಕಟ್ಟಿ ಥಳಿಸಿದ್ದಾರೆ. ಥಳಿಸಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹಗ್ಗದಿಂದ ಕಟ್ಟಿದ ದೇಹ ಸಮೇತ ಆಸ್ಪತ್ರೆಗೆ ೧೦೮ ಆಂಬುಲೆನ್ಸ್ ವಾಹನ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದೇಶಿಗನ ಸ್ಥಿತಿ ಗಂಭೀರವಾಗಿದ್ದು, ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.ಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.