ಕೃಷ್ಣಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಮೂರು ಸೂತ್ರಗಳ ಸಲಹೆ ನೀಡಿದ ಎಂ. ಬಿ ಪಾಟೀಲ
ರಾಜ್ಯದ ಶೇ. 60 ಪ್ರದೇಶದ ವ್ಯಾಪ್ತಿಗೊಳಪಡುವ ಕೃಷ್ಣಾ ಮೇಲ್ಡಂಡೆ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಎಂ. ಬಿ. ಪಾಟೀಲ ಮೂರು ಸೂತ್ರಗಳನ್ನು ಸೂಚಿಸಿದ್ದಾರೆ.
ವಿಜಯಪುದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿಯೇ ಕೃಷ್ಣಾ ನ್ಯಾಯಾಧೀಕರಣ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶಕ್ಕೆ ಕೃಷ್ಣಾ ನದಿ ನೀರನ್ನು ಹಂಚಿಕೆ ಮಾಡಿ ಆದೇಶ ಮಾಡಿದೆ. ಆದರೆ, ಆಂಧ್ಪ ಮತ್ತು ತೆಲಂಗಾಣ ಸರಕಾರಗಳು ಸುಪ್ರೀಂ ಕೋರ್ಟಿಗೆ ಮೊರೆ ಹೋಗಿದ್ದರಿಂದ ಈ ಕುರಿತು ಕೇಂದ್ರ ಸರಕಾರ ಇನ್ನೂ ನೊಟಿಫೀಕೇಶ್ ಹೊರಡಿಸಿಲ್ಲ. ಆದರೆ, ಮಹಾರಾಷ್ಟ್ರ ಸಲ್ಲಿಸಿರುವ ಅರ್ಜಿಗೆ ಪೂರಕವಾಗಿ ಕರ್ನಾಟಕ ಅಫಿಡೆವಿಟ್ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ ನಲ್ಲಿ ನಡೆಯಲಿರುವ ವಿಚಾರಣೆ ಸಂದರ್ಭದಲ್ಲಿ ರಾಜ್ಯ ಸರಕಾರ ಮತ್ತು ನಾವು ತುರ್ತಾಗಿ ಟೆಕ್ನಿಕಲ್, ಲೀಗಲ್ ಟೀಂ ನ್ನು ಸನ್ನದ್ಧಗೊಳಿಸಿ ವಿಚಾರಣೆಗೆ ಸಿದ್ಧಪಡಿಸಬೇಕು. ಆ ಮೂಲಕ ಎಲ್ಲ ಮಾಹಿತಿಯನ್ನು ಸುಪ್ರೀಂ ಕೋರ್ಟ್ ಮುಂದಿಡುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಕಾವೇರಿ ಪ್ರಕರಣದಲ್ಲಿ ಕೈಗೊಂಡ ನಿರ್ಣಯದಂತೆ ಕೃಷ್ಣಾ ಮೇಲ್ಡಂಡೆ ಯೋಜನೆಗಳಿಗೂ ನೋಟೀಫಿಕೇಶನ್ ಮಾಡಿಸಬೇಕು ಎಂದು ಹೇಳಿದ ಅವರು, ಇದರಿಂದ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದ್ದರೂ ನ್ಯಾಯಾಲಯದ ಆಶಯಕ್ಕೆ ಧಕ್ಕೆ ಬಾರದಂತೆ ನೀರು ಬಳಬಹುದಾಗಿದೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.
ಯುಕೆಪಿ 3ನೇ ಹಂತದ ಯೋಜನೆಯ ಹೆಡ್ ವರ್ಕ್ ಕಾಮಗಾರಿ ಶೇ. 80ರಷ್ಟು ಪೂರ್ಣಗೊಂಡಿದೆ. ಇನ್ನು ರೂ. 50 ಸಾವಿರ ಕೋಟಿ ಖರ್ಚು ಮಾಡಿದರೆ ಇಡೀ ಯೋಜನೆ ಮುಗಿಯಲಿದೆ. ಈ ಯೋಜನೆ ಸಂಪೂರ್ಣವಾಗಿ ಸಾಕಾರಗೊಳ್ಳಲು ರಾಜ್ಯ ಸರಕಾರ ಮುಂದಿನ 5 ವರ್ಷಗಳಲ್ಲಿ ಹಂತಹಂತವಾಗಿ ಯುಕೆಪಿ ಯೋಜನೆ ಪೂರ್ಣಗೊಲ್ಳಲು ಹಣ ಮೀಸಲಿಡಬೇಗು ಎಂದು ಮಾಜಿ ಜಲಸಂಪನ್ಮೂಲ ಸಚಿವರೂ ಆಗಿರುವ ಎಂ. ಬಿ. ಪಾಟೀಲ ಆಗ್ರಹಸಿದರು. ಅಲ್ಲದೇ, ಈ ಕುರಿತು ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆಯುವೆ ಮತ್ತು ಮುಖ್ಯಮಂತ್ರಿಗಳನ್ನು ಖುದ್ದಾಗ ಭೇಟಿ ಮಾಡಿ ಒತ್ತಾಯಿಸುವುದಾಗಿ ತಿಳಿಸಿದರು.