ಕೆಜಿಎಫ್ 2 : ಸಂಜಯ್ ದತ್ ಲುಕ್ ಲೀಕ್ : ಎಲ್ಲೆಡೆ ರಿವೀಲ್ ಫೋಟೋದ್ದೇ ಸದ್ದು..

ಬೇರೆ ಭಾಷೆಯ ಚಿತ್ರರಂಗದವರು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಕೆಜಿಎಪ್ ಚಿತ್ರದ ಮೂಲಕವೇ ಯಶ್ ಅವರು ನ್ಯಾಶನಲ್ ಸ್ಟಾರ್ ಆಗಿ ಹೊರಹೊಮ್ಮಿದರು. ಈ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿಯೂ ಕೂಡ ಸಾಕಷ್ಟು ಪ್ರಶ್ನೆಯನ್ನು ವೀಕ್ಷಕರ ತಲೆಯೊಳಗೆ ಬಿಟ್ಟು ಈ ಸಿನಿಮಾದ ಭಾಗ-1ಕ್ಕೆ ಮುಕ್ತಾಯ ಹಾಡಲಾಗಿತ್ತು. ‘ಕೆಜಿಎಫ್-2’ ಸಿನಿಮಾ ಮಾಡುತ್ತೇವೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಾಗಿನಿಂದ ‘ಕೆಜಿಎಫ್’ ಪ್ರಿಯರು ‘ಕೆಜಿಎಫ್-2’ ಯಾವಾಗ ರಿಲೀಸ್ ಆಗಲಿದೆ ಎಂಬ ಕುತೂಹಲದಿಂದ ಕಾಯುತ್ತಿದ್ದರು. ಇದರ ನಡುವೆ ಕೆಜಿಎಫ್ 2 ಸಿನಿಮಾದ ಬಾಲಿವುಡ್ ಸ್ಟಾರ್ ಲುಕ್ ರಿವೀಲ್ ಆಗಿದೆ.

ಹೌದು… ಕೆಜಿಎಫ್ ಸಿನಿಮಾದ ಎರಡನೇ ಭಾಗದಲ್ಲಿ ಬಾಲಿವುಡ್ ಸ್ಟಾರ್ ಸಂಜಯ್ ದತ್ ಅಭಿನಯಿಸುತ್ತಿರುವ ಲುಕ್ ರಿವೀಲ್ ಆಗಿದ್ದು ಇದೀಗ ಎಲ್ಲರ ಕುತೂಹಲಕ್ಕೆ ತೆರೆ ಬಿದ್ದಿದೆ. ಕೆಜಿಎಫ್ ಚಾಪ್ಟರ್ -2 ನಲ್ಲಿ ನಟಿಸ್ತಿರೋ ಸಂಜಯ್ ದತ್ ರಿವೀಲ್ ಆಗಿದೆ. ಹೈ ಕಾನ್ಫಿಡೆನ್ಶಿಯಲ್ ಆಗಿದ್ದ ಫೋಟೋ ಲೀಕ್ ಆಗಿ ಸದ್ದು ಮಾಡ್ತಿದೆ.

ಆದರೆ ಯಶ್ ಜನ್ಮದಿನಕ್ಕೆ  ಕೆಜಿಎಫ್-2 ಟೀಸರ್ ಉಡುಗೊರೆಯಾಗಿ ಸಿಗಲಿದೆ ಎನ್ನಲಾಗಿತ್ತು. ಆದರೆ, ಟೀಸರ್ ರಿಲೀಸ್ ಆಗಲೇ ಇಲ್ಲ. ಈಗ ಕೊರೋನಾದಿಂದ ಲಾಕ್ಡೌನ್ ಉಂಟಾಗಿದ್ದು, ಈ ವೇಳೆಯಾದರೂ ಏನಾದರು ಅಪ್ಡೇಟ್ ಸಿಗಬಹುದು ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಅದು ಆಗಲೇ ಇಲ್ಲ. ಯಾವುದು ಆಗಬಾರದು ಎಂದು ಚಿತ್ರತಂಡ ಅಂದುಕೊಂಡಿತ್ತೋ ಆ ಲುಕ್ ಲೀಕ್ ಆಗಿದೆ.

ಹೌದು…  ಸಂಜು ಭಾಯ್ ಲುಕ್ ರಿವೀಲ್ ಆಗಬಾರದು ಅಂತಾ ಕೆಜಿಎಫ್ ಟೀಂ ಹರಸಾಹಸ ಪಟ್ಟಿತ್ತು. ಆದರೆ ಈಗ ಲೀಕ್ ಫೋಟೊವನ್ನು ಅಧೀರ ಲುಕ್ ಎನ್ನಲಾಗಿದೆ. ಕೆಜಿಎಫ್ ಶೂಟಿಂಗ್ ಆರಂಭವಾಗಿದ್ದ ಟೈಂನಲ್ಲಿ ಸಂಜಯ್ ದತ್, ಇದೇ ಹೇರ್ ಸ್ಟೈಲ್, ಬಿಯರ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಲೀಕ್ ಆಗಿರೋ ಫೋಟೊ ಅಧೀರನದ್ದೇ ಅನ್ನೋ ಸುದ್ದಿ ಹರಿದಾಡ್ತಿದೆ.

ರಿವೀಲ್ ಆಗಿರುವ ಫೋಟೋ ಬಗ್ಗೆ ಚಿತ್ರರಂಗ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ಇದೇ ಲುಕ್ ನಿಜವಾಗಿದ್ದರೆ ಭಾರೀ ಸೀಕ್ರೇಟ್ ಕಾಪಾಡಿಕೊಂಡಿದ್ದ ಸಿನಿಮಾ ತಂಡಕ್ಕೆ ನಿರಾಸೆಯಾಗುವ ಸಾಧ್ಯತೆ ಇದೆ.

Spread the love

Leave a Reply

Your email address will not be published. Required fields are marked *