ಕೆ.ಆರ್.ಪೇಟೆಯಲ್ಲಿ ರಂಗೇರಿದ ಉಪಚುನಾವಣಾ ಅಖಾಡ : ಅನರ್ಹ ಶಾಸಕನ ಬಾಡೂಟದ ಅಬ್ಬರ
ಸಕ್ಕರೆನಾಡು ಮಂಡ್ಯದ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಉಪ ಚುನಾವಣೆಯ ಕಾವು ರಂಗೇರ್ತಿದೆ.ಈಗಾಗಲೇ ಅನರ್ಹ ಶಾಸಕ ಚುನಾವಣೆಗೂ ಮುನ್ನವೇ ಕ್ಚೇತ್ರದಲ್ಲಿ ಮತದಾರರಿಗೆ ಭರ್ಜರಿ ಬಾಡೂಟ ಹಾಕಿಸಿರೋದಕ್ಕೆ ಎದುರಾಳಿಗಳು ಕೆಂಗೆಟ್ಟು ಹೋಗಿದ್ದಾರೆ. ಜೆಡಿಎಸ್ ಪಕ್ಷದ ಅಕಾಂಕ್ಷಿಗಳು ಅನರ್ಹ ಶಾಸಕನ ಬಾಡೂಟಕ್ಕೆ ಕಕ್ಕಾಬಿಕ್ಕಿಯಾಗಿದ್ರೆ, ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಚುನಾವಣೆಯಿಂದ ಹಿಂದೆ ಸರಿಯುವ ಸೂಚನೆ ನೀಡಿದ್ದಾರೆ.
ಹೌದು ! ಮಂಡ್ಯದ ಕೆ.ಆರ್.ಪೇಟೆಯಲ್ಲಿ ಉಪಚುನಾವಣೆಯ ಕಾವು ಚುನಾವಣೆ ರಂಗೇರ್ತಿದೆ. ಅನರ್ಹ ಶಾಸಕ ನಾರಾಯಣಗೌಡ ಈಗಾಗಲೇ ಕ್ಷೇತ್ರದಲ್ಲಿ ಮತದಾರರಿಗೆ ಭರ್ಜರಿ ಬಾಡೂಟದ ಮೂಲಕ ಜನರನ್ನು ಈಗಾಗಲೇ ಒಂದು ಸುತ್ತು ಹತ್ತಿರವಾಗಿದ್ರೆ, ಇತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿಗಳು ನಾರಾಯಣಗೌಡನ ಅಬ್ಬರಕ್ಕೆ ಕಂಗಾಲಾಗಿದ್ದಾರೆ. ಜನ್ರಿಗೆ ಬಾಟೂಟ ಹಾಕಿಸದೆ ಹೇಗೆ ಮತ ಕೇಳೋದು ಅನ್ನೋ ಚಿಂತೆಗೆ ಬಿದ್ದಿದ್ದಾರೆ. ಕೆ.ಆರ್.ಪೇಟೆ ಕ್ಷೇತ್ರದ ಎಂಟು ಹೋಬಳಿಯಲ್ಲಿ ನಾರಾಯಣಗೌಡ ಭರ್ಜರಿ ಬಾಡೂಟ ಹಾಕಿಸಿದ್ದು ಕ್ಷೇತ್ರದ ಜನ್ರನ್ನು ಮರಳು ಮಾಡಿದ್ದಾರೆ. ಅಲ್ದೆ ತಾನು ತಾಲೂಕಿನ ಅಭಿವೃದ್ದಿಗೆ ರಾಜೀನಾಮೆ ಕೊಟ್ಟಿದ್ದಾಗಿ ಹೇಳ್ತಾ ಮತದಾರಿಗೆ ಹತ್ತಿರವಾಗಲು ಬರ್ತಿದ್ದಾನೆ. ಇತ್ತ ಅನರ್ಹ ಶಾಸಕ ಭರ್ಜರಿ ಖರ್ಚಿ ಗೆ ಸರಿಸಮಾನವಾಗಿ ನಿಲ್ಲಲು ಸಾಧ್ಯವಾಗದೆ ಕೈ ಟಿಕೇಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಕೈ ಮುಖಂಡ ಕೆ.ಬಿ ಚಂದ್ರಶೇಖರ್ ತಾನು ಹಿಂದಿನ ಎರಡು ಚುನಾವಣೆ ಸೋತಿದ್ದೇನೆ.ಪಕ್ಷ ಶಕ್ತಿ ತುಂಬುದ್ರೆ ನಿಲ್ತಿನಿ ಇಲ್ದಿದ್ರೆ ಬೇರೆಯವರಿಗೆ ಅವಕಾಶ ಕೊಡಿ ಅಂತಾ ಹಿಂದೆ ಸರಿಯುವ ಹೇಳಿಕೆ ನೀಡಿದ್ರೆ, ಕಾಂಗ್ರೆಸ್ ಯುವ ಮುಖಂಡ ಜಿ.ಪಂ.ಮಾಜಿ ಸದಸ್ಯ ನಾಗೇಂದ್ರ ಕುಮಾರ್ ತಮಗೆ ಅವಕಾಶ ಮಾಡಿ ಕೊಡಿ ಅಂತಾ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.
ಇನ್ನು ಜೆಡಿಎಸ್ ಪಕ್ಷದಲ್ಲಿ ಟಿಕೇಟ್ ಆಕಾಂಕ್ಷಿಯಾಗಿರೋ ಜಿ.ಪಂ.ಸದಸ್ಯ ಎಚ್.ಟಿ .ಮಂಜು ಹೊರತು ಪಡಿಸಿದ್ರೆ ಉಳಿದವರು ನಾರಾಯಣಗೌಡ ಅಬ್ಬರಕ್ಕೆ ದಂಗಾಗಿ ಹೋಗಿದ್ದಾರೆ.ಎಚ್. ಮಂಜು ತನ್ನ ಶೀಳನೆರೆ ಹೋಬಳಿ ಕ್ಷೇತ್ರದ ಮತದಾರರಿಗೆ ಒಮ್ಮೆ ಬಾಡೂಟ ಹಾಕಿಸಿದ್ರೆ, ತಾಲೂಕಿನ ಜನ್ರಿಗೆ ಬಾಡೂಟ ಹಾಕಿಸಲು ಹಿಂದೇಟು ಹಾಕ್ತಿದ್ದಾರೆ. ಇನ್ನುಳಿದಂತೆ ಜೆಡಿಎಸ್ ಟಿಕೇ್ ಆಕಾಂಕ್ಷಿಯಾಗಿರೋ ಬಸ್ ಕೃಷ್ಣೇಗೌಡ ಆಗಲಿ, ಜಿ.ಪಂ.ದೇವರಾಜು ಮತದಾರರನ್ನು ಸೌಜನ್ಯ ಮಾತಿನಲ್ಲಿ ಮಾತನಾಡಿಸ್ತಿದ್ದಾರೆ.ನಮ್ಮಲ್ಲಿ ಯಾರಿಗೆ ಟಿಕೇಟ್ ಕೊಟ್ರು ನಾವು ಒಗ್ಗಟ್ಟಾಗಿ ಕೆಲಸ ಮಾಡ್ತಿವಿ ಅಂತಿದ್ದು ಜೆಡಿಎಸ್ ಗೆ ಮತ್ತೆ ಈ ಕ್ಷೇತ್ರ. ಸಿಗಲಿದೆ ಅನ್ನೋ ವಿಶ್ವಾಸದಲ್ಲಿದ್ದಾರೆ.ಇನ್ನು
ಅನರ್ಹ ಶಾಸಕ ಬಾಡೂಟ ಹಾಕಿಸ್ತಿರೋದ್ರ ಎರಡು ಪಕ್ಷದ ನಾಯರು ಹರಿಹಾಯ್ದು ಯಾರದೋ ದುಡ್ಡಲ್ಲಿ ಬಾಡೂಟ ಹಾಕಿಸ್ತಿರೋದಾಗಿ ಆರೋಪಿಸಿದ್ದಾರೆ
ಒಟ್ಟಾರೆ! ಕೆ.ಆರ್.ಪೇಟೆಯ ಉಪ ಚುನಾವಣೆಯಲ್ಲಿ ಅನರ್ಹ ಶಾಸಕ ನಾರಾಯಣಗೌಡನ ಅಬ್ಬರದ ಮುಂದೆ ಎರಡು ಪಕ್ಷದ ಸ್ಥಳೀಯ ನಾಯಕರು ಕಂಗಾಲಾಗಿದ್ದು ನಾರಾಯಣಗೌಡ ರೇ ಅಭ್ಯರ್ಥಿಯಾದರಂತೂ ಕ್ಷೇತ್ರದಲ್ಲಿ ಮತ್ತಷ್ಟು ಅಬ್ವರ ಹೆಚ್ಚಾಗಲಿದ್ದು, ಕ್ಷೇತ್ರದಲ್ಲಿ ಹಣದ ಹೊಳೆಯ ಹರಿಯುವುದು ಖಚಿತವಾಗಿದ್ದು ನಾರಾಯಣಗೌಡರ ಅಬ್ಬರಕ್ಕೆ ಎರಡು ಪಕ್ಷದವರು ಯಾವ ರೀತಿ ಕಡಿವಾಣ ಹಾಕ್ತಾರೆ ಅನ್ನೋದ್ನ ಕಾದು ನೋಡಬೇಕಿದೆ.