ಕೊರೊನಾ ಏಟಿಗೆ ನಲುಗಿದ ಅಮೆರಿಕಾ : ಉಳಿದ ದೇಶಗಳ ಸ್ಥಿತಿ ಹೇಗಿದೆ ಗೊತ್ತಾ?
ಕೊರೊನಾ ಹೊಡೆತಕ್ಕೆ ಇಡೀ ಜಗತ್ತೇ ಮೇಲೇಳಲು ಆಗದಂತಾ ಸ್ಥಿತಿ ನಿರ್ಮಾಣವಾಗಿದೆ. ಆರ್ಥಿಕ ವ್ಯವಸ್ಥೆ ಪಾತಾಳಕ್ಕಚ್ಚಿದ್ದು ಜನಜೀವನ ಅಲ್ಲೋಲಕಲ್ಲೋಲವಾಗಿದೆ. ವೇಗವಾಗಿ ಹರಡುತ್ತಿರುವ ಮನುಷ್ಯನ ಪ್ರಾಣಕ್ಕೂ ಕುತ್ತು ತರುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದಾರೆ. ವಿಶ್ವಾದ್ಯಂತ ಎರಡು ಲಕ್ಷ ತಲುಪಲು ಕೊರೊನಾ ಕಾದು ಕುಳಿತಿದೆ. ಈವರೆಗೆ ಒಂದು ಲಕ್ಷ 90 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ 27.08 ಲಕ್ಷಕ್ಕೂ ಹೆಚ್ಚು ಜನರು ಈವರೆಗೆ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದಾರೆ.
ಹೌದು…. ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರ (ಸಿಎಸ್ಎಸ್ಇ) ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ವಿಶ್ವದಾದ್ಯಂತ ಒಟ್ಟು 27,08,470 ಜನರು ಕರೋನಾ ವೈರಸ್ಗೆ ತುತ್ತಾಗಿದ್ದರೆ, ಸಾವಿನ ಸಂಖ್ಯೆ 19,07.88 ಕ್ಕೆ ಏರಿದ್ದು ಭಾರೀ ಆತಂಕವನ್ನು ಸೃಷ್ಟಿಸಿದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 57 ಮಂದಿ ಸಾವನ್ನಪ್ಪಿರುವ ಕಾರಣ ಮೃತರ ಸಂಖ್ಯೆ 775ಕ್ಕೇರಿರುವುದು ಆತಂಕಕಾರಿಯಾಗಿದೆ. ಮತ್ತೊಂದಡೆ 24,000ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಕೇಂದ್ರ ಆರೋಗ್ಯ ಸಚಿವಾಲಯದ ನಿನ್ನೆ ಮಧ್ಯರಾತ್ರಿವರೆಗಿನ ಅಧಿಕೃತ ವರದಿ ಪ್ರಕಾರ, ಡೆಡ್ಲಿ ವೈರಸ್ ಈವರೆಗೆ ದೇಶಾದ್ಯಂತ 775 ಜನರನ್ನು ಬಲಿ ಪಡೆದಿದ್ದು, ಸೋಂಕಿತರ ಸಂಖ್ಯೆ 24,504ಕ್ಕೇರಿದೆ. ಇದುವರೆಗೆ ದೇಶದಲ್ಲಿ 4749 ಜನರು ಇದರ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರ (ಸಿಎಸ್ಎಸ್ಇ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಅಮೆರಿಕಾದಲ್ಲಿನ 8.68,945 ಜನರು ಸೋಂಕಿಗೆ ಒಳಗಾಗಿದ್ದರೆ, 49,887 ಜನರು ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ ಈವರೆಗೆ 77 ಸಾವಿರಕ್ಕೂ ಹೆಚ್ಚು ಜನರು ಈ ಕಾಯಿಲೆಯಿಂದ ಗುಣಮುಖರಾಗಿದ್ದಾರೆ.
ಇಟಲಿಯಲ್ಲಿ ಈ ರೋಗವು 25,549 ಜನರನ್ನು ಬಲಿ ಪಡೆದಿದ್ದು, 1,89,973 ಜನರು ಸೋಂಕಿಗೆ ಒಳಗಾಗಿದ್ದಾರೆ. ಸ್ಪೇನ್ ನಲ್ಲಿ 2.13,024 ಜನರು ಈ ವೈರಸ್ ಗೆ ತುತ್ತಾಗಿದ್ದು, 22,157 ಜನರು ಸಾವನ್ನಪ್ಪಿದ್ದಾರೆ.
ಫ್ರಾನ್ಸ್ನಲ್ಲಿ ಈವರೆಗೆ 1,59,460 ಜನರು ಸೋಂಕಿಗೆ ಒಳಗಾಗಿದ್ದು, ಅದರಲ್ಲಿ 21,889 ಜನರು ಸಾವನ್ನಪ್ಪಿದ್ದಾರೆ. ಜರ್ಮನಿಯಲ್ಲಿ 1,53,129 ಜನರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದರೆ, 5.575 ಜನರು ಪ್ರಾಣಕಳೆದುಕೊಂಡಿದ್ದಾರೆ.
ಬ್ರಿಟನ್ ನಲ್ಲಿ 18,791, ಬೆಲ್ಜಿಯಂನಲ್ಲಿ 6490, ನೆದರ್ಲ್ಯಾಂಡ್ನಲ್ಲಿ 4192, ಬ್ರೆಜಿಲ್ನಲ್ಲಿ 3331, ಟರ್ಕಿಯಲ್ಲಿ 2491, ಸ್ವೀಡನ್ನಲ್ಲಿ 2021, ಕೆನಡಾದಲ್ಲಿ 2241, ಸ್ವಿಟ್ಜರ್ಲ್ಯಾಂಡ್ನಲ್ಲಿ 1549, ಪೋರ್ಚುಗಲ್ನಲ್ಲಿ 820, ಮೆಕ್ಸಿಕೊದಲ್ಲಿ 1069, ಇಂಡೋನೇಷ್ಯಾದಲ್ಲಿ 647, ಐರ್ಲೆಂಡ್ನಲ್ಲಿ 794, ಆಸ್ಟ್ರಿಯಾದಲ್ಲಿ 522, ರೊಮೇನಿಯಾದಲ್ಲಿ 560, ಫಿಲಿಪೈನ್ಸ್ನಲ್ಲಿ 545, ಪೋಲೆಂಡ್ನಲ್ಲಿ 462, ಪೋಲೆಂಡ್ನಲ್ಲಿ 454, ಡೆನ್ಮಾರ್ಕ್ನಲ್ಲಿ 394 ಮತ್ತು ದಕ್ಷಿಣ ಕೊರಿಯಾದಲ್ಲಿ 240 ಜನರು ಸಾವನ್ನಪ್ಪಿದ್ದಾರೆ.
ಪಾಕಿಸ್ತಾನದಲ್ಲಿ 11,057 ಕುರಾನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, 212 ಜನರು ಸಾವನ್ನಪ್ಪಿದ್ದಾರೆ.

