FACT CHECK | ಸದನಕ್ಕೆ ಟಿ-ಶರ್ಟ್ ಧರಿಸಿ ಬಂದ ರಾಹುಲ್ ಗಾಂಧಿಗೆ ವಾರ್ನಿಂಗ್ ಕೊಟ್ರಾ ಸ್ಪೀಕರ್ ಓಂ ಬಿರ್ಲಾ
ರಾಹುಲ್ ಗಾಂಧಿ ಲೋಕಸಭೆಗೆ ಟಿ-ಶರ್ಟ್ ಧರಿಸಿ ಬಂದಿದ್ದಕ್ಕೆ ಸ್ಪೀಕರ್ ಓಂ ಬಿರ್ಲಾ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಮಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಈ ಮನುಷ್ಯನಿಗೆ ಎಷ್ಟು ಕ್ಯಾಕರಿಸಿ ಉಗಿದ್ದರು ಅಷ್ಟೇ ಸದನದಲ್ಲಿ ಹೇಗೆ ಡ್ರೆಸ್ ಹಾಕಿಬರಬೇಕೆನ್ನುವ ಸಾಮಾನ್ಯ ಜ್ಞಾನ ವಿಲ್ಲದ ಮನುಷ್ಯ ಇವನು pic.twitter.com/TTk3KBKSVT
— Shubha.B. Naik (@AdvocateShubha) August 9, 2025
ಎಕ್ಸ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ, “ಈ ಮನುಷ್ಯನಿಗೆ ಎಷ್ಟು ಕ್ಯಾಕರಿಸಿ ಉಗಿದ್ದರು ಅಷ್ಟೇ ಸದನದಲ್ಲಿ ಹೇಗೆ ಡ್ರೆಸ್ ಹಾಕಿ ಬರಬೇಕೆನ್ನುವ ಸಾಮಾನ್ಯ ಜ್ಞಾನ ವಿಲ್ಲದ ಮನುಷ್ಯ ಇವನು” ಎಂದು 0.32 ಸೆಕೆಂಡ್ ಗಳ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
![]()
ಈ ವೀಡಿಯೋದಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ನೀವು “ಟಿ-ಶರ್ಟ್ ಧರಿಸಿ ಬಂದರೆ, ಘೋಷಣೆ ಕೂಗಿ ಬಂದರೆ, ಸದನ ನಡೆಯುವುದಿಲ್ಲ. ನೀವು ಟಿ-ಶರ್ಟ್ ತೆಗೆದು ಬಂದರೆ, ಸದನ ನಡೆಯುತ್ತದೆ… ಯಾವುದೇ ಲೀಡರ್ ಅಗಿರಲಿ, ನೇತಾರ ಅಗಿರಲಿ, ಸದನದ ಘನತೆ ಗೌರವಗಳನ್ನು ಉಲ್ಲಂಘಿಸುವಂತಿಲ್ಲ” ಎಂದು ಹೇಳುವುದು ಕೇಳಿಸುತ್ತದೆ. ಓಂ ಬಿರ್ಲಾ ಅವರ ಈ ಹೇಳಿಕೆಯ ಮಧ್ಯೆ ರಾಹುಲ್ ಗಾಂಧಿ ಅವರು ಟಿ-ಶರ್ಟ್ ಹಾಕಿಕೊಂಡಿದ್ದು ಮಾತನಾಡಲು ಯತ್ನಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದೇ ರೀತಿಯ ಹೇಳಿಕೆಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮಾರ್ಚ್ 20, 2025ರ ದಿ ಹಿಂದೂಸ್ತಾನ್ ಟೈಮ್ಸ್ ಮಾಡಿದ ವರದಿ ಲಭ್ಯವಾಗಿದೆ.
![]()
ವರದಿಯ ಪ್ರಕಾರ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಹೊಂದಿರುವ ಟೀ ಶರ್ಟ್‌ಗಳನ್ನು ಧರಿಸದಂತೆ ಕೇಳಿಕೊಂಡರು ಮತ್ತು ಮಧ್ಯಾಹ್ನ 2 ಗಂಟೆಯವರೆಗೆ ಸದನವನ್ನು ಮುಂದೂಡಿದರು ಎಂದು ಪಿಟಿಐ ವರದಿ ಮಾಡಿದೆ. ಡಿಎಂಕೆ ಸದಸ್ಯರು ನ್ಯಾಯಯುತ ಕ್ಷೇತ್ರ ಪುನರ್ವಿಂಗಡಣೆಗೆ ಕರೆ ನೀಡುವ ಹ್ಯಾಶ್‌ಟ್ಯಾಗ್‌ಗಳು ಮತ್ತು “ತಮಿಳುನಾಡು ಹೋರಾಡುತ್ತದೆ, ತಮಿಳುನಾಡು ಗೆಲ್ಲುತ್ತದೆ” ಎಂಬ ಘೋಷಣೆಗಳನ್ನು ಹೊಂದಿರುವ ಬಿಳಿ ಟಿ-ಶರ್ಟ್‌ಗಳನ್ನು ಧರಿಸಿದ್ದರು. ಅಂತಹ ಬಟ್ಟೆಗಳನ್ನು ಧರಿಸಿದ ಸದಸ್ಯರು ಸದನದ ಹೊರಗೆ ಹೋಗಿ ಸಂಸದೀಯ ನಿಯಮಗಳ ಪ್ರಕಾರ ಸರಿಯಾದ ಬಟ್ಟೆಗಳನ್ನು ಧರಿಸಿ ಹಿಂತಿರುಗಬೇಕೆಂದು ಓಂ ಬಿರ್ಲಾ ಆದೇಶಿಸಿದರು.” ಎಂದಿದೆ.
STORY | Lok Sabha adjourned till 12 noon as Speaker Om Birla asks opposition members not to come with T-shirts with slogans written on them
READ: https://t.co/m6QVHR12Ya
VIDEO:
(Source: Third Party)
(Full video available on PTI Videos – https://t.co/n147TvqRQz) pic.twitter.com/vy4DAHjM6o
— Press Trust of India (@PTI_News) March 20, 2025
ಇದೇ ವಿಚಾರಕ್ಕೆ ಸಂಬಂಧಿಸಿ ಮಾರ್ಚ್ 20, 2025ರಂದು ಪಿಟಿಐ ಎಕ್ಸ್ ನಲ್ಲಿ ಮಾಡಿರುವ ಪೋಸ್ಟ್ ಅನ್ನು ಗಮನಿಸಿದ್ದೇವೆ. ಈ ಪೋಸ್ಟ್ ನಲ್ಲಿ “ಲೋಕಸಭೆಯನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದ ಸ್ಪೀಕರ್ ಓಂ ಬಿರ್ಲಾ, ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಬರೆದ ಟಿ-ಶರ್ಟ್‌ಗಳೊಂದಿಗೆ ಬರದಂತೆ ಕೇಳಿಕೊಂಡರು.” ಎಂಬ ಶೀರ್ಷಿಕೆಯಿದ್ದು, ವೈರಲ್ ವೀಡಿಯೋವನ್ನು ಹೋಲುವ ವೀಡಿಯೋವನ್ನು ಇಲ್ಲಿ ನೋಡಬಹುದು. ಇಲ್ಲಿ ಸ್ಪೀಕರ್ ಅವರು “ಒಂದು ವೇಳೆ ನೀವು ಟಿ-ಶರ್ಟ್ ನಲ್ಲಿ ಬರೆದುಕೊಂಡು ಬಂದಿದ್ದರೆ, ಈ ಸದನವು ನಡೆಯುವುದಿಲ್ಲ, ಟಿ-ಶರ್ಟ್ ಅನ್ನು ನೀವು ತೆಗೆದು ಬರಬೇಕು. ಈ ರೀತಿ ಸದನವು ನಡೆಯುವುದಿಲ್ಲ. ಯಾವುದೇ ಲೀಡರ್ ಅಗಿರಲಿ, ನೇತಾರ ಅಗಿರಲಿ, ಸದನದ ಘನತೆ ಗೌರವಗಳನ್ನು ಉಲ್ಲಂಘಿಸುವಂತಿಲ್ಲ” ಎಂದು ಹೇಳುತ್ತಾರೆ.
ಮಾರ್ಚ್ 20, 2025ರಂದು ದಿ ಹಿಂದೂ ಯೂಟ್ಯೂಬ್ ನಲ್ಲಿ ಪ್ರಕಟಿಸಿದ ಶಾರ್ಟ್ ಅನ್ನೂ ನೋಡಿದ್ದೇವೆ. ಇದರಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ವಿಪಕ್ಷದ ಸಂಸದರಿಂಗೆ ಸ್ಲೋಗನ್ ಬರೆದ ಟೀಶರ್ಟ್ ಹಾಕಿ ಬಾರದಂತೆ ಹೇಳುತ್ತಿರುವುದು ಕಂಡುಬಂದಿದೆ. ಜೊತೆಗೆ ಇಲ್ಲೂ ಇದು ರಾಹುಲ್ ಗಾಂಧಿಯವರಿಗೆ ಹೇಳಿದ ಬಗ್ಗೆ ಯಾವುದೇ ಪೂರಕ ಸಾಕ್ಷ್ಯಗಳು ಕಂಡುಬಂದಿಲ್ಲ.
![]()
ಮಾರ್ಚ್ 20, 2019ರ ಇಂಡಿಯಾ ಟುಡೇ ವರದಿಯಲ್ಲೂ, ಗುರುವಾರ ಲೋಕಸಭೆಯು ಹಲವಾರು ಬಾರಿ ಮುಂದೂಡಿಕೆಗೆ ಸಾಕ್ಷಿಯಾಯಿತು, ಏಕೆಂದರೆ ಅನೇಕ ವಿರೋಧ ಪಕ್ಷದ ಸದಸ್ಯರು ಕೇಂದ್ರ ಸರ್ಕಾರವನ್ನು ಟೀಕಿಸುವ ಘೋಷಣೆಗಳನ್ನು ಬರೆದ ಟಿ-ಶರ್ಟ್‌ಗಳನ್ನು ಧರಿಸಿ ಸದನಕ್ಕೆ ಪ್ರವೇಶಿಸಿದರು. ಸ್ಪೀಕರ್ ಓಂ ಬಿರ್ಲಾ ಪ್ರತಿಭಟನಾ ನಿರತ ಸಂಸದರನ್ನು ಖಂಡಿಸಿದರು, ಸದನವು ಸರಿಯಾಗಿ ಕಾರ್ಯನಿರ್ವಹಿಸಲು ನೀವು ಸಿದ್ಧರಿದ್ದರೆ ಟಿ-ಶರ್ಟ್‌ಗಳನ್ನು ತೆಗೆದುಹಾಕುವಂತೆ ಕೇಳಿದರು.” ಇದೇ ವರದಿಯಲ್ಲಿ, ವಿರೋಧ ಪಕ್ಷದ ಹೆಚ್ಚಿನ ಸಂಸದರು ಡಿಎಂಕೆಯವರಾಗಿದ್ದು, ಅವರ ಟಿ-ಶರ್ಟ್‌ಗಳಲ್ಲಿ ಮುದ್ರಿಸಲಾದ ಘೋಷಣೆಗಳು ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳ ವಿಂಗಡಣೆಯ ವಿಷಯದ ಕುರಿತಾಗಿದ್ದವು.” ಎಂದಿದೆ. ಇದೇ ರೀತಿಯ ವರದಿಗಳನ್ನು ಇಲ್ಲಿ ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿ ಲೋಕಸಭೆಗೆ ಟಿ-ಶರ್ಟ್ ಧರಿಸಿ ಬಂದಿದ್ದಕ್ಕೆ ಸ್ಪೀಕರ್ ಓಂ ಬಿರ್ಲಾ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನುವುದು ಸುಳ್ಳಾಗಿದೆ. ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳ ವಿಂಗಡಣೆಯ ವಿರುದ್ಧ ಘೋಷಣೆಯುಳ್ಳ ಟಿ-ಶರ್ಟ್ ಗಳನ್ನು ಧರಿಸಿ ಡಿಎಂಕೆ ಸದಸ್ಯರು ಸದನಕ್ಕೆ ಬಂದಿದ್ದು, ಇದರ ವಿರುದ್ಧ ಸ್ಪೀಕರ್ ಓಂ ಬಿರ್ಲಾ ಅವರು ಮಾತನಾಡಿದ ವಿಡಿಯೋವನ್ನು ಎಡಿಟ್ ಮಾಡಿ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬುಂದು ಸ್ಪಷ್ಟವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರವಾಗಿ ಪರಿವರ್ತಿಸುವುದು ಹೇಗೆ ಎಂಬ ಪುಸ್ತಕ ಸೋನಿಯಾ ಗಾಂಧಿ ಬಳಿ ಇರುವುದು ನಿಜವೇ?

