ಕೊರೊನಾ ನಂತರದ ಬದುಕು ಹೇಗಿರುತ್ತೆ..? ಇಲ್ಲಿದೆ ಆಶ್ಚರ್ಯಕರ ಬದಲಾವಣೆಗಳ ಮಾಹಿತಿ….
ಕೊರೊನಾ ಅರ್ಥಾತ್ ಕೋವಿಡ್-19 ಹೆಸರು ಕೇಳುತ್ತಿದ್ದಂತೆ ಕಣ್ಣು, ಕಿವಿ, ಉಸಿರಾಟ ಎಲ್ಲವೂ ಅಲರ್ಟ್ ಆಗಿಬಿಡುತ್ತವೆ. ಎದೆ ಬಡಿತ ಜೋರಾಗುತ್ತ. ಇದಕ್ಕೆ ಕಾರಣ ಕೊರೊನಾ ಸೃಷ್ಟಿದ ಅವಾಂತರ.
ಎಸ್… ಅತ್ಯುತ್ತಮ ವೈದ್ಯಕೀಯ ಸೇವೆ ಇರುವ ರಾಷ್ಟ್ರಗಳನ್ನೇ ಮಕಾಡೆ ಮಲಗಿಸಿದ್ದ ಕೊರೊನಾ ವೈದ್ಯಕೀಯದಲ್ಲಿ ಸಾಧನೆ ಮಾಡಿದ್ದರೂ ಒಂದು ವೈರಸ್ ವಿರುದ್ಧ ಹೋರಾಡದಂತ ಸ್ಥಿತಿಗೆ ತಂದೊಡ್ಡಿದೆ. ಈಗಾಗಲೇ ಜನ ಅಯ್ಯೋ ಅದೆಷ್ಟು ದಿನ ಈ ಬದುಕು..? ಎನ್ನುವಂತಾಗಿದೆ. ಆದರೆ ಕೊರೊನಾ ಬಳಿಕ ನಮ್ಮ ಜೀವನೇ ಎಥಾ ಸ್ಥಿತಿಗೆ ಬರುತ್ತೆ ಅನ್ನೋದು ಮಾತ್ರ ಸುಳ್ಳು. ಯಾಕಾದ್ರೆ ಈಗಾಗಲೇ ಕೊರೊನಾ ಸಾಕಷ್ಟು ಬದಲಾವಣೆಗಳನ್ನು ತಂದುಬಿಟ್ಟಿದೆ. ಕಾಸಿದ್ರು ಅಷ್ಟೇ ಇಲ್ಲದಿದ್ದರೂ ಅಷ್ಟೇ ಸೋಂಕು ಹರಡಿದ್ರೆ ಮುಗಿತು ಸಾಮಾನ್ಯ ಜನ ಹಾಗೂ ಶ್ರೀಮಂತರು ಅನ್ನೋ ಬೇಧಭಾವವೇ ಬರೋದಿಲ್ಲ. ಹೀಗಾಗಿ ಕೊರೊನಾ ನಂತರದ ಜೀವನ ಹೇಗಿರುತ್ತದೆ..? ಯಾವೆಲ್ಲಾ ಬದಲಾವಣೆಯಾಗಬಹುದು ಅನ್ನೋದರ ಸವಿಸ್ತಾರವಾದ ಮಾಹಿತಿ ಇಲ್ಲಿದೆ ನೋಡಿ.

ಸಾಮಾಜಿಕ ಅಂತರ
ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ನಮ್ಮ ಬಳಿ ಇರುವ ಏಕೈಕ ಅಸ್ತ್ರ ಅಂದರೆ ಅದು ಸಾಮಾಜಿಕ ಅಂತರ. ಲಾಕ್ ಡೌನ್ ಮುಕ್ತರಾದಮೇಲೆ ಜನ ಎಂದಿನಂತೆ ಸುಲಭವಾಗಿ ಓಡಾಡುವಂತಿಲ್ಲ. ಮೈಯೆಲ್ಲಾ ಎಚ್ಚರವಾಗಿರಬೇಕಾಗುತ್ತದೆ. ಇನ್ನು ಬಸ್ ನಲ್ಲಿ ಓಡಾಡುವುದಕ್ಕೂ ಈಗಾಗಲೇ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಈಗಾಗಲೇ ಲಾಕ್ ಡೌನ್ ನಿಂದಾಗಿ 900 ಕೋಟಿ ನಷ್ಟ ಅನುಭವಿಸಿದ ಸಾರಿಗೆ ಇಲಾಖೆ ಚೇತರಿಸಿಕೊಳ್ಳೊದಕ್ಕೆ ತಿಂಗಳುಗಳೇ ಬೇಕಾಗಬಹುದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸುಧಾರಿಸಿಕೊಳ್ಳಬೇಕು ಅಂದರೆ ಕನಿಷ್ಟ ಒಂದು ಬಸ್ ನಲ್ಲಿ ಶೇ.80 ರಷ್ಟು ಜನ ಇರಬೇಕು. ಆದರೆ ಇನ್ಮುಂದು ಒಂದು ಬಸ್ ನಲ್ಲಿ 30 ಜನ ಮಾತ್ರ ಇರಬೇಕು. ಇದು ಬಸ್ ಗಳು ಓಡಾಡಿದರೂ ಆರ್ಥಿಕ ವ್ಯವಸ್ಥೆ ಸುಧಾರಿಸಿಕೊಳ್ಳದ ಸ್ಥಿತಿಗೆ ತಂದೊಡ್ಡಿದೆ.

ಶಾಲೆಗಳು ಆರಂಭವಾಗುತ್ತಾ? ಆನ್ ಲೈನ್ ಪಾಠ ಹೆಚ್ಚುತ್ತಾ..?
ಸರ್ಕಾರ ಈ ಬಗ್ಗೆ ಅನಿಶ್ಚಿತತೆಯಲ್ಲೇ ಇದೆ. ಕೊರೊನಾ ಒಂದು ಹಂತಕ್ಕೆ ಬರುವ ವರೆಗೂ ಶಾಲೇ-ಕಾಲೇಜುಗಳನ್ನು ತೆರೆಯುವ ಮಾತೇ ಇಲ್ಲ. ಹೀಗಾಗಿ ಆನ್ ಲೈನ್ ಕ್ಲಾಸ್ ಗಳನ್ನು ಶುರು ಮಾಡಲಾಗಿದೆ. ಆದರೆ ಮಕ್ಕಳಿಗೆ ಈ ಆನ್ ಲೈನ್ ಪಾಠ ಅರ್ಥವಾಗದೇ ಪಜೀತಿಗೆ ತಂದೊಂಡ್ಡಿದೆ. ಈಗಾಗಲೇ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ನಡೆಸಲಾಗುತ್ತಿದೆ. ವಿಡಿಯೋಗಳನ್ನು ಶೇರ್ ಮಾಡಲಾಗುತ್ತಿದೆ. ಇನ್ಮಂದೆ ಮಕ್ಕಳಿಗೆ ಪಠ್ಯಗಳಲ್ಲಿಯೂ ಬದಲಾವಣೆಯಾಗುವ ಸಾಧ್ಯತೆಗಳಿವೆ.
ಉತ್ಪಾದನೆ ಹಳಿಗೆ ಬರುತ್ತದೆಯಾ?
ಭಾರತಾ ಸ್ವಾವಲಂಭನೆಯಿಂದ ಇರಲು ಸಾಧ್ಯವಿಲ್ಲ. ಕಚ್ಚಾ ವಸ್ತುಗಳಿಗಾಗಿ ಕೊಡು ತೆಗೆದುಕೊಳ್ಳುವಿಕೆ ಇದ್ದೇ ಇರುತ್ತದೆ. ಮೇ 1 ರ ನಂತರ ಫ್ಯಾಕ್ಟರ್ ಗಳು ಆರಂಭವಾಗಲಿವೆ. ಆದರೆ ಕಡಿಮೆ ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳಬೇಕಾದ್ದರಿಂದ ಉತ್ಪನ್ನಗಳ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಹೀಗಾಗಿ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಪ್ರವಾಸೋಧ್ಯಮದಲ್ಲಿ ಬದಲಾವಣೆ
ಕೊರೊನಾ ವೇಳೆ ಅದ್ಯಾರು ಆಚೆ ಹೋಗಬೇಕು ಅಂತ ಆಸೆ ಪಡ್ತಾರೆ ಅಂತ ನೀವು ಯೋಚನೆ ಮಾಡಬಹುದು. ಆದರೆ ಇದರ ಹಿಂದೆ ದುಡಿಯುವ ಪ್ರತಿಯೊಬ್ಬರ ದುಡಿಮೆಗೂ ಕಡಿವಾಣ ಬೀಳಲಿದೆ ಅನ್ನೋ ಸತ್ಯ ಅರಿತುಕೊಳ್ಳಬೇಕಿದೆ. ಪ್ರವಾಸೋಧ್ಯಕ್ಕೆ ಬಿದ್ದ ಪೆಟ್ಟಿನಿಂದ ಅದೆಷ್ಟೇ ಜನ ಬೀದಿ ಪಾಲಾಗಿದ್ದಾರೆ. ಟ್ಯಾಕ್ಸಿ, ರೆಸಾರ್ಟ್, ರೆಸ್ಟೊರೆಂಟ್ ನಷ್ಟದಲ್ಲಿವೆ. ಇದೆಲ್ಲಾ ಮುಗಿಯುವ ಹೊತ್ತಿಗೆ ಮಳೆಗಾಲ ಶುರುವಾಗುತ್ತದೆ. ಆಗಿನ್ನು ನಷ್ಟವಾಗುವ ಸಾಧ್ಯತೆ ಇದೆ.
ಸಿನಿಮಾ ಇಂಡಸ್ಟ್ರಿಗೆ ಟೆನ್ಶನ್ನೋ… ಟೆನ್ಶನ್ನು…
ಈಗಾಗಲೇ ಸಿನಿಮಾಗಳು ನಿರ್ಮಾಣವಾಗದೇ ಅರ್ಧದಲ್ಲೇ ನಿಲ್ಲಿಸಿ ಸಾವಿರಾರು ಕೋಟಿ ನಷ್ಟದಲ್ಲಿವೆ. ಕೊರೊನಾ ನಂತರದಲ್ಲಿ ಅಂತರ ಕಾಯ್ದುಕೊಂಡು ಸಿನಿಮಾ ಪೂರ್ಣಗೊಳಿಸಿ ತೆರೆಗೆ ತಂದರೂ ಥಿಯೇಟರ್ ತೆರೆಯಲಾಗುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಒಂದು ವೇಳೆ ಚಿತ್ರಂದಿರಗಳು ತೆರೆದರೂ ಜನ ಸಿನಿಮಾ ಮಂದಿರಕ್ಕೆ ಬಂದು ಸಿನಿಮಾ ನೋಡ್ತಾರಾ ಅನ್ನೋ ಅನುಮಾನ ಶುರುವಾಗಿದೆ. ಹೀಗಾಗಿ ಸಿನಿಮಾ ಇಂಡಸ್ಟ್ರಿಗೂ ಈಗಾಗಲೇ ದೊಡ್ಡ ಹೊಡೆತ ಬಿದ್ದಿದ್ದು ಇನ್ಮುಂದೆಯೂ ಇದು ಸಹಜ ಸ್ಥಿತಿಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಸಿನಿಮಾದಲ್ಲಿಯೂ ನಿರುದ್ಯೋಗ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳು ಇವೆ.

ಟ್ಯಾಕ್ಸಿ, ಕ್ಯಾಬ್ ಕಥೆ ಏನು..?
ಸಾಲ ಸೋಲ ಮಾಡಿದ ಚಾಲಕರು ತಲೆ ಮೇಲೆ ಕೈ ಹೊತ್ತು ಕುಂತಿದ್ದಾರೆ. ಸದ್ಯಕ್ಕಂತೂ ವಿಮಾನ ಹಾರಾಟವಾಗು ಲಕ್ಷಣಗಳಿಲ್ಲ. ಜನರ ಓಡಾಟವೂ ಅಷ್ಟಕಷ್ಟೇ. ಒಂದು ವೇಳೆ ಲಾಕ್ ಡೌನ್ ಸಡಿಲಿಕೆಯಾದರೂ ಜನ ಟ್ಯಾಕ್ಸಿ, ಕ್ಯಾಬ್ ಅವಲಂಬಿಸುವುದು ಕಷ್ಟ ಇದೆ. ಒಂದು ವೇಳೆ ಹತ್ತಿದರೂ ಹೆಚ್ಚು ಜನರನ್ನು ತುಂಬಿಸಿಕೊಳ್ಳುವಹಾಗಿಲ್ಲ. ಕೊರೊನಾ ನಂತರ ಈ ಜನರ ಬದುಕು ಎಥಾಸ್ಥಿತಿಗೆ ಬರುವುದು ಸಾಧ್ಯವಿಲ್ಲ.
ಕಂಪನಿ ಕೆಲಸದಲ್ಲಿ ಬದಲಾವಣೆ
ಲಾಕ್ ಡೌನ್ ನಿಂದಾಗಿ ಕೆಲಸದ ಅವಧಿ ಬದಲಾಗಬಹುದು. ಮನೆಯಿಂದಲೇ ಕೆಲಸ ಮಾಡಿಸಿಕೊಳ್ಳಬಹುದು. ಜೀವನ ಶೈಲಿ ಜೊತೆಗೆ ಕೆಲಸದ ಶೈಲಿ ಕೂಡ ಬದಲಾಗುವ ಸಾಧ್ಯತೆಗಳಿವೆ..

ಸಾರಿಗೆ ಕ್ಷೇತ್ರದಲ್ಲಿ ಬದಲಾವಣೆ
ವಾಯು, ಶಬ್ದ ಮಾಲಿನ್ಯ ಕಡಿಮೆ ಮಾಡಲು ಜನ ಮೆಟ್ರೋ, ರೈಲು, ಬಸ್ ಅವಲಂಬಿಸಿದ್ರು. ಆದರೆ ಇಲ್ಲಿ ಸದ್ಯ ಅಂತರ ಸಾಧ್ಯವಾಗದೇ ಖಾಸಗೀ ವಾಹನಗಳ ಮೊರೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ಕೊರೊನಾ ನಂತರದ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುವ ಸಾಧ್ಯತೆ ಇದೆ. ಆದರೆ ಇಂಥಹ ಬದಲಾವಣೆಗಳೇ ಆಗುತ್ತವೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ.
ಕೊರೊನಾದಿಂದಾಗಿ ಜಗತ್ತಿನ ಲೆಕ್ಕಾಚಾರವೇ ಬದಲಾಗಿದೆ. ನಾನು ಬದಲಾಗೋದಿಲ್ಲ ಅಂಥಿದ್ದ ಮನುಷ್ಯರನ್ನೇ ಬದಲಾಗಿದ್ದಾನೆ.ಕೊರೊನಾದಿಂದಾಗಿ ಸಾಕಷ್ಟು ಜನ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ದೇಶ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಕುಗ್ಗಿ ಹೋಗಲಿದೆ. ಶಿಕ್ಷಣ, ಸೈನ್ಯ, ಗಣಿ ಹೀಗೆ ಕೆಲ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಇಲ್ಲದೇ ಹೋದರೂ. ಹೊಸ ಮಾದರಿಯ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಪೇಟೆಯಲ್ಲಿದ್ದ ದೊಡ್ಡ ಮಟ್ಟದ ಕಾರ್ಮಿಕರು ಗ್ರಾಮೀಣದ ಕಡೆಗೆ ಮುಖ ಮಾಡಿದ್ದಾರೆ. ಕೃಷಿಯಲ್ಲೂ ಬದಲಾಗುವ ಸಾಧ್ಯತೆ ಇದೆ. ಆಚಾರ ವಿಚಾರದಲ್ಲೂ ಬದಲಾಗಿದೆ. ಕೈಕುಲುಕಿ ಅಪ್ಪಿಕೊಳ್ಳುವ ಬದಲು ಜನ ನಮಸ್ಕಾರ ಮಾಡುವುದನ್ನ ರೂಢಿಸಿಕೊಳ್ಲುತ್ತಿದ್ದಾರೆ. ಸಭೆ ಸಮಾರಂಭ, ಕಾರ್ಯಕ್ರಮಗಳು, ಧಾರ್ಮಿಕ ಆಚರಣೆಗಳು ಎಲ್ಲವೂ ವಿಡಿಯೋ ಮೂಲಕ ಆಗುವ ಸಾಧ್ಯತೆ ಇದೆ.

ಇನ್ನೂ ಚೀನಾ ಉದ್ದೇಶ ಪೂರ್ವಕವಾಗಿ ಕೊರೊನಾ ವೈರಸ್ ಹರಡಿದೆ ಎಂದು ವಿವಿಧ ದೇಶಗಳು ಅನುಮಾನಿಸುತ್ತಿವೆ. ಇದರಲ್ಲಿ ಅಮೆರಿಕಾ ಮುಂಚೂನಿಯಲ್ಲಿದ್ದು ಇದೆಕ್ಕೆಲ್ಲಾ ಚೀನಾವನ್ನೇ ಹೊಣೆ ಮಾಡಿದೆ. ಮಾತ್ರವಲ್ಲದೇ ಚೀನಾದ ನರಿ ಬುದ್ಧಿಗೆ ವಿಶ್ವಸಂಸ್ಥೆ ಸಾಥ್ ನೀಡಿದೆ ಎಂದು ವಿಶ್ವದ ದೊಡ್ಡಣ್ಣ ತೆರಿಗೆ ಕಟ್ಟುವುದನ್ನ ನಿಲ್ಲಿಸಿದೆ. ಈ ಮಧ್ಯೆ ಸಹಾಯದ ನೆಪದಲ್ಲಿ ಅಧಿಕ ಉತ್ಪನ್ನಗಳನ್ನ ಚೀನ ದೇಶವ್ಯಾಪಿ ಮಾರಾಟ ಮಾಡುತ್ತಿದೆ. ಕೊರೊನಾ ವಿಚಾರದಲ್ಲಿ ಅಮೆರಿಕಾ ಹಾಗೂ ಚೀನಾದ ನಡುವೆ ಯುದ್ಧ ತರುವ ಆತಂಕವಿದೆ.
ಒಟ್ಟಿನಲ್ಲಿ ಕೊರೊನೋತ್ತರ ಬದುಕು ಮೊದಲಿನಂತಿರೋದಿಲ್ಲ. ಏನಿರುತ್ತೆ? ಏನಿರಲ್ಲ ? ಇನ್ನು ಕೊಂಚ ದಿನಗಳ ವರಗೆಗೂ ನಾವು ಕಾದು ನೋಡಬೇಕಿದೆ. ಬದಲಾವಣೆಗಳು ಏನೇ ಆಗಲಿ ಅದಕ್ಕೆ ಹೊಂದಿಕ್ಕೊಳ್ಳುವುದಕ್ಕೆ ನೀವುಗಳು ತಯಾರಾಗಿರಿ.

