ಕೊರೊನಾ ಲಕ್ಷಣಗಳಿವೆ ಎಂದು ಹೆದರಿ ಐಐಎಸ್‌ಸಿ ವಿದ್ಯಾರ್ಥಿ ಆತ್ಮಹತ್ಯೆ

ಕೊರೊನಾ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದಾಗಿ ಸೋಂಕು ತಗುಲಿರಬಹುದು ಎಂದು ಭಯಪಟ್ಟು ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಎಂ.ಟೆಕ್ ಓದುತ್ತಿದ್ದ 25 ವರ್ಷದ ವಿದ್ಯಾರ್ಥಿ ಸಂದೀಪ್‌ ಕುಮಾರ್‌ ಎಂಬಾತ ಕಾಲೇಜ್‌‌ ಕ್ಯಾಂಪಸ್‌ನಲ್ಲಿರುವ ತನ್ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆಲವು ದಿನಗಳಿಂದ ತನಗೆ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು, ಆ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಛತ್ತೀಸ್‌ಗಢದಲ್ಲಿರುವ ತನ್ನ ಸ್ನೇಹಿತನಿಗೆ ಎಸ್‌ಎಂಎಸ್‌ ಮಾಡಿ, ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಎಸ್‌ಎಂಎಸ್‌ ನೋಡಿದ ಆತನ ಸ್ನೇಹಿತ ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ರಿಪ್ಲೇ ಮಾಡಿ, ಹಲವು ಬಾರಿ ಕರೆ ಮಾಡಿದರೂ ಸಂದೀಪ್‌ ಸ್ವೀಕರಿಸಿಲ್ಲ. ನಂತರ, ಸಂದೀಪ್ ಸ್ನೇಹಿತ ಐಐಎಸ್ಸಿಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತಕ್ಷಣವೇ ಸಿಬ್ಬಂದಿಗಳು, ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಬಂದು ಕೋಣೆಯ ಬೀಗ ಒಡೆದು ಒಳಗೆ ಹೋಗಿ ನೋಡಿದಾಗ ಸಂದೀಪ್ ಜೀವ ಕಳೆದುಕೊಂಡಿದ್ದರು.

ಯುವಕನ ಶವವನ್ನು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಐಐಎಸ್ಸಿ ಆಡಳಿತಾಧಿಕಾರಿಗಳ ದೂರಿನ ಮೇಲೆ ಅಸಹಜ ಸಾವು ಎಂದು ಸದಾಶಿವನಗರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


ಇದನ್ನೂ ಓದಿ:  ಬ್ರಾಹ್ಮಣರ ಬಗ್ಗೆ ಪ್ರಶ್ನೆ ಕೇಳಿ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ ಬಿಜೆಪಿ ಶಾಸಕ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.