ಕೊರೊನಾ ವೈರಸ್‍ಗೆ ಬಲಿಯಾದ ಅತ್ಯಂತ ಕಿರಿಯ ವಯಸ್ಸಿನ ಮಗು ಇದು…!

ಕೊರೊನಾ ಇಡೀ ಜಗತ್ತಿಗೆ ಕರಿ ಕಾರ್ಮೋಡ ಆವರಿಸುವಂತೆ ಮಾಡಿದೆ. ವಿಶ್ವವನ್ನೇ ಸ್ಮಶನ ಮೌನಕ್ಕೆ ದೂಡಿರುವ ಈ ಮಹಾಮಾರಿ ವಯಸ್ಸಿನಲ್ಲಿ ಹಿರಿಯರಿಗೆ ಹಾಗೂ ಅತ್ಯಂತ ಕಿರಿಯ ಮಕ್ಕಳಿಗೆ ಹೆಚ್ಚಾಗಿ ಹರಡುತ್ತದೆ. ಇದರಿಂದ ಅಪಾಯ ಕೂಡ ಇರುವುದು ಕೂಡ ಕಿರಿಯ ಹಾಗೂ ಹಿರಿಯರಿಗೆನೇ. ಅದೆಷ್ಟೋ ಹಿರಿ ಜೀವಗಳು ವಿಶ್ವದಾದ್ಯಂತ ಕೊರೊನಾದಿಂದ ಪ್ರಾಣಬಿಟ್ಟಿದ್ದಾರೆ. ಇನ್ನೂ ಮಕ್ಕಳು ಕೂಡ ಈ ಲಿಸ್ಟ್ ನಲ್ಲಿದ್ದಾರೆ. ಇತ್ತೇಚೆಗೆ ಅಮೆರಿಕಾದ ಪುಟ್ಟಕಂದಮ್ಮ ಕೊರೊನಾಗೆ ಬಲಿಯಾಗಿದೆ.

ಹೌದು… ಅಮೆರಿಕಾದ ರಾಜ್ಯಪಾಲ ನೆಡ್ ಲ್ಯಾಮಂಟ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಪುಟ್ಟ ಮಗು ಕಳೆದ ವಾರವಷ್ಟೇ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ಇಂತಹ ಅರಗಿಸಿಕೊಳ್ಳಲಾಗದ ಹೇದಯವಿದ್ರಾವಕ ಸುದ್ದಿ ಕೇಳಿ ಪಾಪಿ ಕೊರೊನಾಗೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಯಾಕಂದ್ರೆ ಕೊರೊನಾ ವೈರಸ್‍ಗೆ ಬಲಿಯಾದ ಅತ್ಯಂತ ಕಿರಿಯ ವಯಸ್ಸಿನ ಪ್ರಕರಣ ಇದಾಗಿದೆ. ಈ ಹಿಂದೆ ಚಿಕ್ಯಾಗೋದಲ್ಲಿ ನಿಧನವಾದ ಮಗು ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನದ್ದಾಗಿದೆ. ಕೊರೊನಾ ಪರೀಕ್ಷೆಯಲ್ಲಿ ಮಗುವಿಗೆ ಸೋಂಕು ತಗುಲಿರುವುದು ದೃಢಪಟ್ಟಿರುವುದಾಗಿ ಇಲಿಯಾನ್ಸ್ ರಾಜ್ಯದ ರಾಜ್ಯಪಾಲ ಜೆಬಿ ಪ್ರಿಟ್ ಜ್ಕೆರ್ ಮಾಹಿತಿ ನೀಡಿದ್ದರು.

ಇದುವರೆಗೆ ಅಮೆರಿಕದಲ್ಲಿ ಕೊರೊನಾ ವೈರಸ್ ಗೆ 4,476 ಮಂದಿ ಬಲಿಯಾಗಿದ್ದಾರೆ ಎಂಬುದಾಗಿ ವರದಿಯಾಗಿದೆ. ಸಾಮಾನ್ಯವಾಗಿ ಕೊರೊನಾ ವೈರಸ್ ವಯಸ್ಕರ ಮೇಲೆ ಹೆಚ್ಚು ಪರಿಣಾಮ ಬೀರುತ್ತೆ ಎಂದು ನಂಬಲಾಗಿತ್ತು. ಆದರೆ ಇದೀಗ ಪುಟ್ಟ ಪುಟ್ಟ ಕಂದಮ್ಮಗಳು ಕೂಡ ಈ ಅಪಾಯಕಾರಿ ವೈರಸ್‍ಗೆ ಬಲಿಯಾಗುತ್ತಿದ್ದು, ಆತಂಕ ಹುಟ್ಟಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights