ಕೊರೊನ‌ ವೈರಸ್ ಗೆ ವ್ಯಾಕ್ಸಿನ್ ಕಂಡುಹಿಡಿಯೋ ತಂಡದಲ್ಲಿ‌ ಕನ್ನಡಿಗ…!

ಕೊರೊನ‌ ವೈರಸ್ ಗೆ ವ್ಯಾಕ್ಸಿನ್ ಕಂಡುಹಿಡಿಯೋ ತಂಡದಲ್ಲಿ‌ ಕನ್ನಡಿಗ ಆಯ್ಕೆಯಾಗಿದ್ದು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ತಾಲ್ಲೂಕಿನ ಮಹದೇಶ ಪ್ರಸಾದ್ ಯುರೋಪಿಯನ್ ಟಾಸ್ಕ್ ಫೋರ್ಸ್ ಫಾರ್ ಕೊರೊನ ವೈರಸ್ ತಂಡದಲ್ಲಿ ಸ್ಥಾನ ಪಡೆದವರು. ಜರ್ಮನಿಯಲ್ಲಿ ವಿಜ್ಞಾನಿಯಾಗಿದ್ದ ಮಹದೇಶ ಪ್ರಸಾದ್, ವಿದೇಶದಲ್ಲಿರೋ‌ ವಿಜ್ಞಾನಿಗಳು ‌ಹಿಂದಿರುಗಿ ಎಂಬ ಪ್ರಧಾನಿ ಕರೆ ಮೇರೆಗೆ ಭಾರತಕ್ಕೆ ಮರಳಿದ್ದರು.

ಸದ್ಯ ಯುರೋಪ್ ರಾಷ್ಟ್ರಗಳು ಒಗ್ಗೂಡಿ ವಿಶ್ವ ಸಂಸ್ಥೆ ಕೊರೋನ ವ್ಯಾಕ್ಸಿನ್ ಕಂಡು ಹಿಡಿಯಲು ಹತ್ತು ತಂಡ ರಚಿಸಿದ್ದು, ಈ ತಂಡದಲ್ಲಿ ಸ್ಥಾನ ಪಡೆದ ಹೆಮ್ಮೆಯ ಕನ್ನಡಿಗ ಮಹದೇಶ ಪ್ರಸಾದ್.  ಒಂದು ವರ್ಷದಿಂದ ಸಂಶೋಧನೆ ಸಂಬಂಧ ಬೆಲ್ಜಿಯಂನಲ್ಲಿ ನೆಲೆಸಿದ್ದಾರೆ. ಮಹದೇಶ ಪ್ರಸಾದ್ ಕುಟುಂಬಸ್ಥರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಅಷ್ಟಕ್ಕೂ ಮಹದೇಶ ಪ್ರಸಾದ್ ವಿದ್ಯಾಭ್ಯಾಸ ಎಲ್ಲಿ ಮಾಡಿದ್ರು..? ಅವರ ಹಿನ್ನೆಲೆ ತಿಳಿದುಕೊಳ್ಳೋಣ.

ಮೈಸೂರು ವಿಶ್ವ ವಿದ್ಯಾಲಯದ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಅವಧಿಯಲ್ಲಿ ಬಯೋಕೆಮಿಸ್ಟ್ರಿ ಪಿಹೆಚ್ ಡಿ ಸ್ನಾತಕ ಪದವಿ ಗಳಿಸಿದ ಮೊಟ್ಟ ಮೊದಲ ಕಿರಿಯ ಎಂಬ ಹೆಗ್ಗಳಿಕೆ ಡಾ ಮಹದೇಶ್ ಪ್ರಸಾದ್ ಅವರದ್ದು. ಕಿರಿಯ ವಯಸ್ಸಿನಲ್ಲಿಯೇ ಸಾಧನೆಗಾಗಿ ಸತತ 5 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪುರಸ್ಕಾರಗಳನ್ನು ಮತ್ತು ಗೌರವಗಳನ್ನು ಪಡೆದ ಮೊದಲ ಕಿರಿಯ ವಿಜ್ಞಾನಿ.

2019-ವಿಸಿಟಿಂಗ್ ವೈರಾಲಜಿ ಫೆಲೋಶಿಪ್, ಬೆಲ್ಜಿಯಂ
2016-ಸೈನ್ಸ್ ಅಂಡ್ ಇಂಜಿನಿಯರಿಂಗ್ ರೀಸರ್ಚ್ ಬೋರ್ಡ್ ನಿಂದ ಯಂಗ್ ಸೈಂಟಿಸ್ಟ್ ಅವಾರ್ಡ್
2012-ಪೋಸ್ಟ್ ಡಾಕ್ಟರಲ್ ಫೆಲೋಶಿಪ್, ಸ್ವೀಡನ್
2010-ಎನ್ ಐ ಹೆಚ್ ಪೋಸ್ಟ್ ಡಾಕ್ಟರಲ್ ಫೆಲೋಶಿಪ್, ಯುಎಸ್ಎ
2009- DAAD ಫೆಲೋಶಿಪ್, ಜರ್ಮನಿ

ಬಯೋಕೆಮಿಸ್ಟ್ರಿ, ವೈರಾಲಜಿ, ಸ್ಟೆಮ್ ಸೆಲ್ ಬಯಾಲಜಿ, ಟ್ಯೂಮರ್ ವೈರಾಲಜಿ, ಕ್ಯಾನ್ಸರ್ ಜೆನೆಟಿಕ್ಸ್, ಸಿಸ್ಟಂ ವ್ಯಾಕ್ಸಿನಾಲಜಿ ಸೇರಿದಂತೆ ಹಲವು ವಿಷಯಗಳ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ 16 ಪ್ರಬಂಧಗಳನ್ನು ಮಂಡಿಸಿದ್ದಾರೆ. ಸರ್ಟಿಫೈಡ್ ಲ್ಯಾಬ್ ಅನಿಮಲ್ ಎಕ್ಸ್ ಪರ್ಟ್ ಎಂದು ಯೂರೋಪಿಯನ್ ಕೌನ್ಸಿಲ್ ಮನ್ನಣೆ ನೀಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights