ಕ್ರಿಸ್ಮಸ್ ಹಾಲಿಡೇ ಸವಿಯಲು ಕೈ ಬೀಸಿ ಕರೆಯುತ್ತಿದೆ ಬನ್ನೇರುಘಟ್ಟ ಪಾರ್ಕ್

ವಿಕೇಂಡ್ ಜೊತೆಗೆ ಕ್ರಿಸ್ಮಸ್ ಹಾಲಿಡೇಗೆ ಸಾಲು ಸಾಲು ರಜೆಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಕೈ ಬೀಸಿ ಕರೆಯುತ್ತಿದೆ. ಪ್ರತಿ ಕ್ರಿಸ್ಮಸ್ ರಜೆಯನ್ನು ಸ್ಮರಣೀಯವಾಗಿಸಿಕೊಳ್ಳಲು ಪಡ್ಡೆ ಹೈಕಳು, ಪ್ರೇಮಿಗಳು, ಶಾಲಾ ಮಕ್ಕಳು, ಸ್ನೇಹಿತರು ಮನೆ ಮಕ್ಕಳೊಂದಿಗೆ ಪ್ರವಾಸಿಗರು ಭೇಟಿ ನೀಡುವುದು ವಾಡಿಕೆಯಾಗಿದೆ. ಈ ಬಾರಿಯು ಸಹ ಪ್ರವಾಸಿಗರ ಪಟಾಲಂ ಬನ್ನೇರುಘಟ್ಟ ಜೈವಿಕ ಉದ್ಯಾನವನದಕ್ಕೆ ಇಂದು ದಾಂಗುಡಿಯಿಟ್ಟಿದೆ.

ಸಾಲು ಸಾಲು ರಜೆ ಸಿಗುವುದೇ ಅಪರೂಪ. ಅದ್ರಲ್ಲು ವಿಕೇಂಡ್ ಜೊತೆ ಸಿಕ್ಕ ರಜೆಯನ್ನು ಸವಿಯಲು ಪ್ರಾಣಿ ಪ್ರಿಯರಂತು ತುದಿಗಾಲಲ್ಲಿ ನಿಂತಿರುತ್ತಾರೆ. ವೈವಿದ್ಯಮಯ ಪ್ರಾಣಿ ಸಂಕುಲವನ್ನು ಕಂಡು ಮನರಂಜನೆ ಪಡೆಯಲು ಬನ್ನೇರುಘಟ್ಟ ಜೈವಿಕ ಉದ್ಯಾನವನ ಸಕಲ ರೀತಿ ಸಜ್ಜಾಗಿದ್ದು, ಕೈ ಬೀಸಿ ಕರೆಯುತ್ತಿದೆ. ಹಾಗಾಗಿತಂಡೋಪ ತಂಡವಾಗಿ ವನ್ಯಜೀವಿಗಳ ಸ್ವರ್ಗ ಖ್ಯಾತಿಯ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಪ್ರವಾಸಿಗರು ಆಗಮಿಸಿದ್ದಾರೆ. ಬೇರೆ ಉದ್ಯಾನವನಗಳಿಗೆ ಹೋಲಿಕೆ ಮಾಡಿದ್ರೆ ಬನ್ನೇರುಘಟ್ಟ ಉದ್ಯಾನವನ ಸುಂದರವಾಗಿದೆ. ಬನ್ನೇರುಘಟ್ಟ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವುದರಿಂದ ಹಚ್ಚ ಹಸಿರಿನ ನಡುವೆ ವನ್ಯ ಜೀವಿಗಳನ್ನು ಕಣ್ತುಂಬಿಕೊಳ್ಳುವುದು ಅದ್ಬುತ ಅನುಭವ. ಆನೆ, ಜಿರಾಫೆ, ಹುಲಿ, ಸಿಂಹ, ಜಿಂಕೆಯಂತಹ ಅಪರೂಪದ ಪ್ರಾಣಿಗಳನ್ನ ಕಂಡು ಖುಷಿಯಾಯಿತು. ತುಂಬಾ ಚೆನ್ನಾಗಿ ಉದ್ಯಾನವನ ನಿರ್ವಹಣೆ ಮಾಡಿದ್ದಾರೆ ಎಂದು ಪ್ರವಾಸಿ ವೈಷ್ಣವಿ ಹರ್ಷ ವ್ಯಕ್ತಪಡಿಸಿದ್ದಾರೆ.

ಬನ್ನೇರುಘಟ್ಟ ಉದ್ಯಾನವನ ಬೆಂಗಳೂರಿಗೆ ತೀರ ಹತ್ತಿರದಲ್ಲಿರುವ ಪ್ರಮುಖ ಪ್ರವಾಸಿ ತಾಣವಾಗಿದೆ. ಜೊತೆಗೆ ಬೇರೆ ಮೃಗಾಲಯಕ್ಕಿಂತ ಹೆಚ್ಚು ಪ್ರಾಣಿ ಪಕ್ಷಿಗಳನ್ನು ಕಾಣಬಹುದಾಗಿದೆ‌. ಕ್ರಿಸ್ಮಸ್ ಹಾಲಿಡೇ ನಿಮಿತ್ತ ಕುಟುಂಬ ಸಮೇತ ಉದ್ಯಾನವನಕ್ಕೆ ಭೇಟಿ ನೀಡಿದ್ದೆವೆ. ಸಫಾರಿ, ಜೂನಲ್ಲಿ ವನ್ಯ ಜೀವಿಗಳನ್ನು ಕಂಡು ತುಂಬಾ ಸಂತೋಷವಾಗಿದೆ. ಪ್ರವಾಸಿಗರ ಸಂಖ್ಯೆಯು ಅಧಿಕವಾಗಿದೆ. ಹಾಗಾಗಿ ಇಲ್ಲಿಗೆ ಬಂದು ಪ್ರಾಣಿಗಳನ್ನು ನೋಡುವುದು ಒಂದು ಸುಂದರ ಅನುಭವ ಮತ್ತೊಮ್ಮೆ ರಜೆ ಸಮಯದಲ್ಲಿ ಕುಟುಂಬದವರೊಂದಿಗೆ ಇಲ್ಲಿಗೆ ಭೇಟಿ ನೀಡುತ್ತೆವೆ. ಒಂಡೇ ಪಿಕ್ನಿಕ್ ಬರುವಂತಹರು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬೇಟಿ ನೀಡಬಹುದು ಎಂದು ಪ್ರವಾಸಿಗ ವರುಣ್ ಹರ್ಷ ವ್ಯಕ್ತಪಡಿಸಿದ್ದಾರೆ.

ಕ್ರಿಸ್ಮಸ್ ಹಾಲಿಡೇ ಅಂಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬನ್ನೇರುಘಟ್ಟ ಜೈವಿಕ ಉದ್ಯಾನವನದತ್ತ ಆಗಮಿಸುತ್ತಿದ್ದು, ಅಪರೂಪದ ಪ್ರಾಣಿ ಸಂಕುಲವನ್ನು ಕಂಡು ಖುಷಿಪಡಲು ಬಯಸುವವರು ಒಮ್ಮೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ಕೋಡಿ ಎಂಜಾಯ್ ಮಾಡಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights