ಕ್ರೈಮ್ ಥ್ರಿಲ್ಲರ್ ಕತೆಯಲ್ಲಿ ರೋಚಕ ಅನುಭವ ಕೊಡಲಿರೋ ‘ಅಳಿದು ಉಳಿದವರು’….
ಅಶು ಬೆದ್ರ ನಿರ್ಮಿಸಿ,ನಾಯಕನಾಗಿ ನಟಿಸಿರೋ ಅಳಿದು ಉಳಿದವರು ಚಿತ್ರ ಕ್ರೈಮ್ ಥ್ರಿಲ್ಲರ್ ಕತೆ ಬಯಸುವವರಿಗೆ ಇಷ್ಟವಾಗಬಹುದಾದ ಸಿನಿಮಾಗಿದೆ. ಚಿತ್ರದಲ್ಲಿ ನಾಯಕ ಜನಪ್ರಿಯ ಪತ್ರಕರ್ತನಾಗಿ ದೆವ್ವ ಭೂತಗಳ ಬಗ್ಗೆ ಒಂದು ಕಾರ್ಯಕ್ರಮ ಮಾಡುತ್ತಾ ಹೋಗುತ್ತಾನೆ. ಆ ಜರ್ನಿಯಲ್ಲಿ ಆತನಿಗೆ ಆಗೋ ಅನುಭವಗಳು,ನ್ಯೂಸ್ ಚಾನೆಲ್ಗಳ ನಡುವಿನ ಸ್ಪರ್ಧೆ,ದೆವ್ವ ಭೂತಗಳ ನಡುವಿನ ಜಿಜ್ಞಾಸೆ,ಪ್ರೀತಿ ಮತ್ತು ವೃತ್ತಿಯ ನಡುವಿನ ಜಟಾಪಟಿಯ ನಡುವಿನ ರೋಚಕ ಟ್ವೀಸ್ಟ್ಗಳೇ ಸಿನಿಮಾದ ಹೈಲೈಟ್ಸ್..
ಅರವಿಂದ ಶಾಸ್ತ್ರಿ ನಿರ್ದೇಶಿಸಿರೋ ಈ ಚಿತ್ರದಲ್ಲಿ ಅಶು ಬೆದ್ರಾಗೆ ನಾಯಕಿಯಾಗಿ ಸಂಗೀತಾ ಭಟ್ ನಟಿಸಿದ್ರೆ,ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅತುಲ್ ಕುಲಕರ್ಣಿ ಮಿಂಚಿದ್ದಾರೆ.ಹಾಗೇ ಪವನ್ ಕುಮಾರ್,ದಿನೇಶ್ ಮಂಗಳೂರು ಸೇರಿ ಇನ್ನು ಹಲವು ನಟರುಗಳಿದ್ದು ಚಿತ್ರಕ್ಕೆ ಮೆರಗು ನೀಡಿದ್ದಾರೆ.
ಚಿತ್ರದಲ್ಲಿ ನಾಯಕನ ಇನ್ವೇಸ್ಟಿಗೇಶನ್ ಜರ್ನಿಯನ್ನು ಕ್ಯಾಮರಾಮ್ಯಾನ್ ಉತ್ತಮ ದೃಶ್ಯಾವಳಿಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಹಾಗೇ ಚಿತ್ರವು ಮೊದಲು ನಿಧಾನವಾಗಿ ಪಾತ್ರಗಳನ್ನು ಬಿಲ್ಡ್ ಮಾಡುತ್ತಾ ನಂತರ ವಿರಾಮದ ನಂತರ ವೇಗವನ್ನು ಪಡೆದುಕೊಳ್ಳುತ್ತದೆ. ಹಾಗೇ ಕ್ಲೈಮಾಕ್ಸ್ ಕೂಡ ರೋಚಕವಾಗಿದ್ದು,ಬಿಗ್ ಟ್ವಿಸ್ಟ್ ಮೂಲಕ ಪ್ರೇಕ್ಷಕರನ್ನ ಯೋಚನೆಗ ಹಚ್ಚಿ ಚಿತ್ರ ಮುಕ್ತಾಯವಾಗುತ್ತದೆ.