ಗುಂಡಿಗೆ ಬಿದ್ದು ಯುವತಿ ಸಾವನ್ನಪ್ಪಿದ್ದ ಪ್ರಕರಣ : ಸಚಿವ ಸಿಟಿ ರವಿ ವಿರುದ್ಧ ಜನಸಾಮಾನ್ಯರ ಆಕ್ರೋಶ
ಚಿಕ್ಕಮಗಳೂರಿನಲ್ಲಿ ಗುಂಡಿಗೆ ಬಿದ್ದು ಯುವತಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಚಿವ ಸಿಟಿ ರವಿ ವಿರುದ್ಧ ಜನಸಾಮಾನ್ಯರ ಆಕ್ರೋಶ ವ್ಯಕ್ತಪಡಿಸಿದದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ವಿಡಿಯೋ ವೈರಲ್ ಆಗಿದೆ. ಸಚಿವರ ವಿರುದ್ಧ ಧ್ವನಿಯೆತ್ತಿ ಮಹಿಳೆಯೊಬ್ಬರು ಮಾಡಿರೋ ವಿಡಿಯೋ ವೈರಲ್ ಆಗಿದೆ. 2 ದಿನದ ಹಿಂದ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದ ಸಿಂಧೂಜ(23) ಬಗ್ಗೆ ಸಚಿವರು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಈ ವಿಡಿಯೋದಲ್ಲಿ ಸಚಿವರ ಬೇಜವಾಬ್ದಾರಿತನವನ್ನು ಪ್ರಶ್ನೆ ಮಾಡಿರೋ ಮಹಿಳೆ, ನಿಮಗೆ ಜೀವದ ಬೆಲೆ ಗೊತ್ತಿದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ. ನೀವು ನಿಮ್ಮ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡಿದ್ದರೆ, ಈ ರೀತಿಯ ದುರದೃಷ್ಟಕರ ಘಟನೆ ನಡೆಯುತ್ತಿರಲಿಲ್ಲ ವೆಂದು ತರಾಟೆ ತೆಗೆದುಕೊಂಡಿದ್ದಾರೆ.