ಗುಡ್ ನ್ಯೂಸ್ : ಕೊರೊನಾ ವೈರಸ್ಗೆ ಔಷಧಿ ಶೋಧ ಕಾರ್ಯ ಬಹುತೇಕ ಅಂತಿಮ!
ಇಡೀ ವಿಶ್ವವನ್ನೇ ಬೆಂಬಿಡದೇ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಗೆ ಔಷಧಿ ಶೋಧ ಕಾರ್ಯ ಬಹುತೇಕ ಮುಕ್ತಾಯಗೊಳ್ಳುತ್ತಿದೆ.
ಹೌದು… ಗಿಲೀಡ್ಸ್ ಸೈನ್ಸ್ ಐಎನ್ಸಿ ಕಂಪನಿ ಕಂಡು ಹಿಡಿದಿರುವ ಆ್ಯಂಟಿವೈರಲ್ ರಿಮೆಡೆಸಿವಿರ್ ಔಷಧವನ್ನು ಕೋವಿಡ್ -19 ರೋಗಿಗಳಲ್ಲಿ ಪ್ರಯೋಗಿಸಲಾಗಿದ್ದು, ಔಷಧಿಯೂ ಬಹುತೇಕ ರೋಗಲಕ್ಷಣಗಳನ್ನು ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿ ಸಹಕಾರಿಯಾಗಿದೆ ಎಂದು ಕಂಪನಿ ತಿಳಿಸಿದೆ.
ರಾಷ್ಟ್ರೀಯ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ಸಂಸ್ಥೆ (ಎನ್ಐಎಐಡಿ) ಈ ಪ್ರಯೋಗ ನಡೆಸಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಮತ್ತು ದತ್ತಾಂಶಗಳನ್ನು ಎನ್ಐಎಐಡಿ ಶೀಘ್ರದಲ್ಲಿ ನೀಡಲಿದೆ ಎಂದು ಗಿಲೀಡ್ಸ್ ತಿಳಿಸಿದೆ.
ತಡವಾಗಿ ಚಿಕಿತ್ಸೆ ಪಡೆದ ಶೇ.49 ರೋಗಿಗಳಿಗೆ ಹೋಲಿಸಿದರೆ, ಆರಂಭದಲ್ಲಿ ಚಿಕಿತ್ಸೆ ಪಡೆದ ಶೇ.62 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ ಎಂದು ಕಂಪನಿ ಹೇಳಿದೆ.ಕೋವಿಡ್-19 ಗೆ ಪ್ರಸ್ತುತ ಯಾವುದೇ ಅನುಮೋದಿತ ಚಿಕಿತ್ಸೆಗಳು ಅಥವಾ ತಡೆಗಟ್ಟುವ ಲಸಿಕೆಗಳು ಇಲ್ಲದಿರುವುದರಿಂದ ಗಿಲೀಡ್ ಶೋಧನೆಯ ಔಷಧಿಯ ಬಗ್ಗೆ ಆಸಕ್ತಿ ಹೆಚ್ಚಾಗಿದೆ.

