ಗುಣಮುಖರಾದ 97 ವರ್ಷದ ವ್ಯಕ್ತಿ; ಕೊರೊನ ಚಿಕಿತ್ಸೆ ಬಗ್ಗೆ ಭರವಸೆಯ ಬೆಳಕು

97 ವರ್ಷದ ಅಜ್ಜ ಒಬ್ಬರು ಆಗ್ರಾದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ನೆನ್ನೆ ತಿಳಿಸಿದ್ದಾರೆ. ಸಾಂಕ್ರಮಿಕದ ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ಈ ಸುದ್ದಿ ರೋಗಿಗಳಿಗೆ ‘ಭರವಸೆಯ ಕಿರಣ’ ದಂತೆ ಗೋಚರಿಸಿದೆ.

1923 ರಲ್ಲಿ ಜನಿಸಿದ್ದ ಈ ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆಯಿಂದ ಬುಧವಾರ ಮನೆಗೆ ಕಳುಹಿಸಲಾಗಿದ್ದು, ಕೊರೊನಾ ವಿರುದ್ದದ ಸಮರದಲ್ಲಿ ಯಶಸ್ವಿಯಾಗಿ ಚೇತರಿಸಿಕೊಂಡ ದೇಶದ ಅತ್ಯಂತ ಹಿರಿಯ ರೋಗಿಗಳಲ್ಲಿ ಇವರೂ ಒಬ್ಬರಾಗಿದ್ದಾರೆ.

ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಭು ಎನ್ ಸಿಂಗ್ ಪಿಟಿಐ ಜೊತೆ ಮಾತನಾಡುತ್ತಾ, ಐತಿಹಾಸಿಕ ನಗರಕ್ಕೆ ಇದು “ಹೆಮ್ಮೆಯ ವಿಷಯ” ಎಂದು ಶ್ಲಾಘಿಸಿದರು.

“ನಮ್ಮ ತಂಡವು ಪ್ರತಿದಿನ ಅವರ ಸ್ಥಿತಿಯ ಮೇಲೆ ನಿಗಾ ವಹಿಸಿತ್ತು. ಚೇತರಿಸಿಕೊಂಡ ನಂತರ ಅವರ ಕೊರೊನಾ ವೈರಸ್ ಪರೀಕ್ಷೆಯು ನೆಗೆಟಿವ್ ಬಂದ ದಿನ, ನಾವು ತುಂಬಾ ಖುಷಿಪಟ್ಟಿದ್ದೇವೆ. ಅವರ ಚೇತರಿಕೆ ಕೊರೊನಾ ಸೋಂಕಿತ ರೋಗಿಗಳಿಗೆ ಭರವಸೆಯ ಕಿರಣ ಆಗಿದೆ ” ಎಂದು ಅವರು ಹೇಳಿದರು.

ವೃದ್ಧರ ಚೇತರಿಕೆಯ ಬಗ್ಗೆ ಗುರುವಾರ ಅವರು ಟ್ವೀಟ್ ಮಾಡಿದ್ದು, ಇದು ವಿಶೇಷವಾಗಿ ವಯಸ್ಸಾದ ಜನರಿಗೆ ಭರವಸೆಯನ್ನು ನೀಡುತ್ತದೆ ಮತ್ತು “#ಕೊರೋನಾ ವಾರಿಯರ್ಸ್ ಗೆ ಸೆಲ್ಯೂಟ್” ಎಂದು ಬರೆದಿದ್ದಾರೆ.

ಏಪ್ರಿಲ್ 29 ರಂದು ಆಗ್ರಾದಲ್ಲಿನ ನಯತಿ ಆಸ್ಪತ್ರೆಯ ಕೊರೊನಾ ಆರೈಕೆಯ 2 ನೇ ಹಂತದ ಆಸ್ಪತ್ರೆಗೆ ಈ ವೃದ್ಧರನ್ನು ದಾಖಲಿಸಲಾಗಿತ್ತು. ಅವರಿಗೆ ಅಧಿಕ ರಕ್ತದೊತ್ತಡವಿದ್ದು ಆರಂಭದಲ್ಲಿ ಸ್ವಲ್ಪ ಆಮ್ಲಜನಕದ ಪೂರೈಕೆಯ ಅಗತ್ಯವಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights