ಪ್ರತಿಭಟನಾಕಾರರು, ಪತ್ರಕರ್ತರ ಮೇಲೆ ತಾಲಿಬಾನ್ ಹಿಂಸಾಚಾರವನ್ನು ಖಂಡಿಸಿದ ಯುಎನ್!

ಆಫ್ಘಾನಿಸ್ತಾನದ ಪ್ರತಿಭಟನಾಕಾರರು ಮತ್ತು ಪತ್ರಕರ್ತರ ಮೇಲೆ ತಾಲಿಬಾನ್ ಹಿಂಸಾಚಾರವನ್ನು ವಿಶ್ವಸಂಸ್ಥೆ ಖಂಡಿಸಿದೆ.

ತಾಲಿಬಾನಿಗಳಿಂದ ಅಫ್ಘಾನ್ ಪ್ರತಿಭಟನಾಕಾರರು ಮತ್ತು ಪತ್ರಕರ್ತರ ಮೇಲೆ ನಡೆದ ಹಿಂಸಾಚಾರದ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಜೊತೆಗೆ ಶಾಂತಿಯುತ ಹೋರಾಟ ಮಾಡಿ ಹಕ್ಕನ್ನು ಚಲಾಯಿಸುವವರ ಮೇಲೆ ಬಲಪ್ರಯೋಗ ಮತ್ತು ಬಂಧಿಸುವುದನ್ನು ನಿಲ್ಲಿಸುವಂತೆ ಉಗ್ರಗಾಮಿ ಸಂಘಟನೆಗೆ ಕರೆ ನೀಡಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮೀಶನರ್ ರವೀನಾ ಶಾಮದಾಸಾನಿ, “ಕಳೆದ ನಾಲ್ಕು ವಾರಗಳಲ್ಲಿ ಅಫ್ಘಾನಿಸ್ತಾನದ ವಿವಿಧ ಪ್ರಾಂತ್ಯಗಳಲ್ಲಿ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಲೈವ್ ಮದ್ದುಗುಂಡುಗಳು, ಲಾಠಿಗಳ ಬಳಕೆ ಸೇರಿದಂತೆ ತಾಲಿಬಾನ್ ನಿಂದ ಹೆಚ್ಚು ಹಿಂಸಾತ್ಮಕ ನಡೆಯುತ್ತಿದೆ. ಅಫ್ಘಾನಿಸ್ತಾನದ ಮಹಿಳೆಯರು ಮತ್ತು ಪುರುಷರು ತಮ್ಮ ದೇಶದಲ್ಲಿ ತಮ್ಮ ಹಕ್ಕುಗಳಿಗಾಗಿ ಶಾಂತಿಯುತ ಹೋರಾಟ ಮಾಡುತ್ತಿದ್ದಾರೆ. ಅದನ್ನು ಅಧಿಕಾರ ವಹಿಸಿಕೊಂಡ ತಾಲಿಬಾನ್ ಗೌರವಿಸಬೇಕು. ಪ್ರಜೆಗಳ ಬೇಡಿಕೆಗಳನ್ನು ಆಲಿಸಬೇಕು” ಎಂದು ಹೇಳಿದ್ದಾರೆ.

ಪ್ರತಿಭಟನೆಯನ್ನು ವರದಿ ಮಾಡುವ ಪತ್ರಕರ್ತರಿಗೆ ತಾವು ಮಾಡುವ ಕೆಲಸ ತಾಲಿಬಾನ್ ಕಾನೂನುಬಾಹಿರ ಎಂದು ಘೋಷಿಸಿದರೂ ಅಥವಾ ಚದುರಿದರೂ ಸಹ ಪ್ರತೀಕಾರ ಅಥವಾ ಇತರ ಕಿರುಕುಳಗಳನ್ನು ನೀಡಬಾರದು ಎಂದು ರವಿನಾ ಶಾಮದಸಾನಿ ಹೇಳಿದರು.

ಆಗಸ್ಟ್ 15 ರಂದು ತಾಲಿಬಾನ್ ಆಫ್ಘಾನಿಸ್ತಾನ್ ರಾಜಧಾನಿ ಕಾಬೂಲ್ ನ್ನು ವಶಪಡಿಸಿಕೊಂಡ ನಂತರ ಕಾಬೂಲ್‌ನಲ್ಲಿ ಹಲವಾರು ಪ್ರತಿಭಟನೆಗಳು ನಡೆದಿವೆ. ತಾಲಿಬಾನ್ ಎಲ್ಲಾ ಕಚೇರಿಗಳಲ್ಲಿ ಮಹಿಳೆಯರನ್ನು ಕೈಬಿಟ್ಟು ಪುರುಷರಿಗೆ ಮಾತ್ರ ಅವಕಾಶ ನೀಡುತ್ತಿರುವುದು ಸೆಪ್ಟೆಂಬರ್ 7 ರಂದು ಅಫಘಾನ್ ಮಹಿಳೆಯರು ಕಾಬೂಲ್ ಬೀದಿಗಿಳಿಯುವಂತೆ ಪ್ರೇರೇಪಿಸಿತು.

ಮಹಿಳಾ ಹಕ್ಕುಗಳನ್ನು ಸಂರಕ್ಷಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಮಹಿಳೆಯರು ತಮ್ಮ ಬದ್ಧತೆಯನ್ನು ಎತ್ತಿಹಿಡಿಯಬೇಕೆಂದು ತಾಲಿಬಾನ್‌ಗಳನ್ನು ಒತ್ತಾಯಿಸಿದರು ಮತ್ತು ಉನ್ನತ ಸರ್ಕಾರಿ ಸ್ಥಾನಗಳಲ್ಲಿ ಮಹಿಳೆಯರನ್ನು ನೇಮಿಸಲು ಒತ್ತಾಯಿಸಿದರು.

ಆದರೆ ತಾಲಿಬಾನ್‌ಗಳು ಪ್ರತಿಭಟನಾನಿರತ ಮಹಿಳೆಯರನ್ನು ಚದುರಿಸಲು ಲಾಠಿ ಮತ್ತು ಚಾವಟಿಯನ್ನು ಬಳಸಿದರು. ಪ್ರತಿಭಟನೆಯ ವೇಳೆ ಇಬ್ಬರು ಸ್ಥಳೀಯ ಪತ್ರಕರ್ತರಾದ ಟಾಗಿ ದರಿಯಾಬಿ ಮತ್ತು ನೇಮತುಲ್ಲಾ ನಖ್ದಿ ಅವರನ್ನು ಥಳಿಸಿದರು. ಅವರ ಗಾಯಗೊಂಡ ದೇಹದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಅಸೋಸಿಯೇಟೆಡ್ ಪ್ರೆಸ್‌ನ ವರದಿಯ ಪ್ರಕಾರ, ತಾಲಿಬಾನ್ ಹೋರಾಟಗಾರರು ಇಬ್ಬರು ಪತ್ರಕರ್ತರ ಕೈಗಳನ್ನು ಕಟ್ಟಿ ಕಾಬೂಲ್ ಜಿಲ್ಲೆಯ ಪೊಲೀಸ್ ಠಾಣೆಗೆ ಎಳೆದೊಯ್ದು 10 ನಿಮಿಷಗಳ ಕಾಲ ತಡೆರಹಿತವಾಗಿ ಥಳಿಸಿದ್ದಾರೆ. ಮಾಧ್ಯಮಗಳು ಮುಕ್ತವಾಗಿವೆ ಎಂದು ತಾಲಿಬಾನ್ ಹೇಳುತ್ತದೆ. ಆದರೆ ಅವರು ನನ್ನನ್ನು ಮತ್ತು ನನ್ನ ಸಹೋದ್ಯೋಗಿಗಳನ್ನು ಹೊಡೆಯುತ್ತಿರುವಾಗ ಈ ಹೇಳಿಕೆಯನ್ನು ಹೇಗೆ ನಂಬಲು ಸಾಧ್ಯ?

“ನನಗೆ ಯೋಚಿಸಲು ಸಾಧ್ಯವಾಗಲಿಲ್ಲ. ನಾನು ಸಾಯುತ್ತೇನೆಯೇ ಅಥವಾ ನಾನು ಬದುಕುತ್ತೇನೆಯೇ ಎಂದು ನನಗೆ ತಿಳಿದಿರಲಿಲ್ಲ. ನಾನು ಅವರ ಎದುರು ನಿಲ್ಲುವುದು ತುಂಬಾ ಅಪಾಯಕಾರಿ. ಆದರೂ ನಾವು ನಮ್ಮ ಕೆಲಸವನ್ನು ನಿಲ್ಲಿಸಲು ಸಾಧ್ಯವಿಲ್ಲ “ಎಂದು ಟಾಗಿ ದರ್ಯಬಿ ಘಟನೆ ಬಳಿಕ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights