ಗೂಡಿನಿಂದ ಗೂಡಿಗೆ ಹಾರಿದ ಅನರ್ಹರ ಪರ ಕಾರ್ಯಕರ್ತರ ಗೂಡು ಯಾವುದು..?
ಒಂದಡೆ ಪ್ರವಾಹದಿಂದ ಮನೆಮಠ ಕಳೆದುಕೊಂಡಿರುವ ಸಂತ್ರಸ್ತರು ಮತ್ತೆ ತಮ್ಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದಡೆ ದೊರೆತ ಜನಾದೇಶವನ್ನು ಮೂರು ಕಾಸಿಗೆ ಹರಾಜಿಗಿಟ್ಟು, ಇದ್ದ ಸರಕಾರವನ್ನು ಉರುಳಿಸಿ ಬಿ.ಎಸ್ ಯಡ್ಯೂರಪ್ಪ ನೇತೃತ್ವದ ಹೊಸ ಸರಕಾರ ಸ್ಥಾಪನೆ ಮಾಡಲು ಕಾರಣರದ ಅನರ್ಹರೇಂಬ ಬೀರುದಾಂಕಿತ ಜನಪ್ರತಿನಿಧಿಗಳು ಮತ್ತೆ ಮತ ಬೀಕ್ಷೆಗೆ ಇಳಿದಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷದ ವಿರುದ್ದ ಸಮರ ಸಾರಿ ಗೆದ್ದು ಬಂದಿದ್ದೊರು ಅವರೇ ಇಂದು ಅ ಪಕ್ಷದ ಟಿಕೇಟ್ನಿಂದ ಸ್ಪರ್ದಿಸಿ ತಮ್ಮ ಹಳೆಯ ಪಕ್ಷದ ಮೇಲೆ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ನಾಯಕರ ಪರ ಹಗಲಿರುಳು ದುಡಿದು ವಿಧಾಸಭೆಗೆ ಕಳಿಸಿದ ಬೆಂಬಲಿಗರು ಈ ಎಲ್ಲ ಬೆಳವಣಿಗೆಯಿಂದ ಗೊಂದಲಕ್ಕಿಡಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ, ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಮತ್ತು ಹಾವೇರಿಯ ಹಿರೇಕೆರೂರಿನ ಕ್ಷೇತ್ರದಲ್ಲಿನ ಎಲ್ಲ ಕಾರ್ಯಕರ್ತರ ಗೋಳು ಇದೇ ಆಗಿದೆ. ಗೂಡಿನಿಂದ ಹಾರಿದ ಹಕ್ಕಿಯ ಜೊತೆಗೂಡಬೇಕೊ ಇಲ್ಲ ಹೊಸ ಹಕ್ಕಿಯ ಗೂಡಿನಲ್ಲಿ ಭದ್ರವಾಗಬೇಕೊ ಎನ್ನುವ ಸಂದಿಗ್ಧದಲ್ಲಿರುವ ಮತದಾರರು ಇನ್ನು ತಮ್ಮ ಗುಟ್ಟು ಬಿಟ್ಟುಕೊಟ್ಟಿಲ್ಲ.
ಅಥಣಿ:- ಕಳೆದ ಬಾರಿ ಸೋತರು ಹೈಕಮಾಂಡ್ ಕೃಪೆಯಿಂದ ಉಪಮುಖ್ಯಮಂತ್ರಿಯಾಗಿ ಎಲ್ಲರ ಕಣ್ಣುಕುಕ್ಕುತ್ತಿರುವ ಲಕ್ಷ್ಮಣ ಸವದಿಗೆ ಈ ಚುನಾವಣೆ ಬಿಸಿತುಪ್ಪವಾಗಿದೆ. ಯಾರ ಕೈಯಲ್ಲಿ ಸೊಲನ್ನಭವಿಸಿದ್ದರೊ ಅವರನ್ನೆ ಗೆಲ್ಲಿಸುವ ಜವಾಬ್ದಾರಿ ಇಗ ಸವದಿ ಮೇಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ಮಹೇಶ್ ಕುಮಟಳ್ಳಿ ಹೆಸರಿಗೆ ಅಭ್ಯರ್ಥಿ ಚುನಾವಣೆ ಮಾಡುತ್ತಿರುವವರು ಇನ್ನಾರೊ, ಹೀಗಾಗಿ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿರುವ ಕಾಂಗ್ರೆಸ್ನ ಗಜಾನನ ಮಂಗಗಳಿಗೆ ಗೊಂದಲದ ಲಾಭವಾದರೆ ಅಶ್ಚರ್ಯವಿಲ್ಲ. ಇಲ್ಲಿ ಯಾರೇ ಗೆದ್ದರು ಸೋಲುವುದು ಲಕ್ಷ್ಮಣ ಸವದಿಯೇ ಯಾಕೆಂದರೆ ಕುಮಟಳ್ಳಿ ಗೆಲ್ಲಿಸಿದರೆ ಕ್ಷೇತ್ರ ಕೈತಪ್ಪುತ್ತದೆ ಸೋಲಿಸಿದರೆ ಉಪ ಮುಖ್ಯಮಂತ್ರಿ ಪಟ್ಟ ಇವುಗಳ ಮಧ್ಯ ಆಯ್ಕೆ ಬಲು ಕಷ್ಟ.
ಕಾಗವಾಡ:- ಕಳೆದ ಬಾರಿಯ ಎದುರಾಳಿಗಳು ಈ ಬಾರಿಯೂ ಮುಖಾಮುಖಿಯಾಗಿದ್ದಾರೆ ಒಂದೇ ವ್ಯತ್ಯಾಸ ಪಕ್ಷ ಮತ್ತು ಚಿನ್ನ್ಹೆ ಅದಲು ಬದಲು. ಕಾಂಗ್ರೆಸ್ನ ಶ್ರೀಮಂತ ಪಾಟೀಲ್ ಈ ಬಾರಿ ಅನರ್ಹವೆಂಬ ಹಣೆಪಟ್ಟಿಯೊಂದಿಗೆ ಬಿಜೆಪಿ ಅಭ್ಯರ್ಥಿ, ಜನರ ತಿರಸ್ಕಾರಕ್ಕೆ ಗುರಿಯಾಗಿದ್ದ ರಾಜು ಕಾಗೆ ಇಗ ಕಾಂಗ್ರೆಸ್ನ ಹುರಿಯಾಳು. ಇಲ್ಲಿ ಯಾರೇ ಗೆದ್ದರು ಅಂತರ ಬಲು ಕಡಿಮೆ ಈ ಕ್ಷೇತ್ರದ ಉಸ್ತುವಾರಿಯು ಲಕ್ಷ್ಮಣ ಸವದಿಯಾದ್ರು ಅವರಿಗೆ ಜಿಲ್ಲೆಯ ಪ್ರಭಾವಿ ನಾಯಕರುಗಳಾದ ಉಮೇಶ್ ಕತ್ತಿ ಮತ್ತು ಜಾರಕಿಹೊಳಿ ಸಹೋದರರ ಸಹಕಾರವಿಲ್ಲ ಎನ್ನುವುದು ಮತ್ತೆ ಹೇಳಬೇಕಾಗಿಲ್ಲ.
ಹಿರೇಕೆರೂರು:- ಅಪರೇಷನ್ ಕಮಲಕ್ಕೆ ನಾನು ಬಿಳುವುದಿಲ್ಲವೆನ್ನುತ್ತಲೆ ಕಮಲದ ಗಾಳಕ್ಕೆ ಬಿದ್ದ ಮಾಜಿ ಪೊಲೀಸ್ ಹಾಲಿ ರಾಜಕೀಯ ನಟ ಬಿ.ಸಿ ಪಾಟೀಲ್ರ ಮಂತ್ರಿ ಪದವಿ ಅಸೆಗಾಗಿ ಹಿರೇಕೆರೂರಿನಲ್ಲಿ ಮತ್ತೆ ಚುನಾವಣೆ ಬಂದೊದಗಿದೆ. ಖಾಕಿ ಬಿಟ್ಟು ಖಾದಿ ಹಾಕಿದ್ದ ಪಾಟೀಲರು ಈ ಬಾರಿ ಅದರ ಮೇಲೆ ಕೇಸರಿ ಶಾಲು ಹೊದ್ದಿದ್ದಾರೆ ಅವರ ಎದುರಾಳಿ ಇನ್ನೊಬ್ಬ ಲಿಂಗಾಯತ ಬನ್ನಿಕೂಡ್ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ 555 ಮತಗಳಿಂದ ಸೋತಿದ್ದ ಬಿಜೆಪಿಯ ವಿ.ಬಿ ಬಣಕಾರ ಈ ಬಾರಿ ಬಿನ್ನಮತವನ್ನು ಹೊರಗಡೆ ತೊರಿಲ್ಲವಾದರು ಒಳಗೆ ಗುಧ ಕೊರೆಯಲ್ಲ ಅಂತ ಹೇಳೊಕಾಗಲ್ಲ. ಮುಖ್ಯಮಂತ್ರಿ ಃSಙ ಬಿಟ್ಟು ಬೇರೆ ನಾಯಕರ ಬೆಂಬಲವಿಲ್ಲದೆ ಏಂಕಾಗಿ ಹೋರಾಟ ಮಾಡುತ್ತಿರುವ ಪಾಟೀಲರು ತಮ್ಮ ಅನರ್ಹತೆಯನ್ನ ಅರ್ಹತೆಯನ್ನಾಗಿ ಮಆಡಿಕೊಳ್ಳುತ್ತಾರೆಯೇ ನೋಡಬೇಕು.
ರಾಣಿಬೆನ್ನೂರ:– ಅದೃಷ್ಟ ಒಲೆದರೆ ಒದಕೊಂಡು ಬರುತ್ತದೆ ಅಂತಾರೆ, ಇದು ರಾಣಿಬೆನ್ನೂರ ಕ್ಷೇತ್ರಕ್ಕೆ ಅನ್ವಹಿಸಿದರೆ ಇದು ಅಕ್ಷರ ಸಹ ನಿಜ. ಯಾಕೆಂದರೆ ಮೊದಲು ಅದೃಷ್ಟ ಕೈ ಹಿಡಿದಿದ್ದು ಅರ್. ಶಂಕರ್ಗೆ ಸಮ್ಮಿಶ್ರ ಸರಕಾರದಲ್ಲಿ ಎರಡೆರಡು ಬಾರಿ ಸಚಿವರಾಗಿ ಅಧಿಕಾರ ಸ್ವಿಕರಿಸಿ ನಂತರ ಆಪರೇಷನ್ ಕಮಲಕ್ಕೆ ಒಳಗಾಗಿ ಅನರ್ಹತೆ ಪಟ್ಟಕಟ್ಟಿಕೊಂಡು ಶಂಕರ ಜೊತೆಗೆ ಹೆಸರು ಕೆಡಿಸಿಕೊಂಡು ಟಿಕೆಟ್ ಪಡೆಯಲು ವಿಫಲರಾಗಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ಜೀವನಕ್ಕೆ ತಾವೇ ಬೆಂಕಿ ಇಟ್ಟುಕೊಂಡಿದ್ದಾರೆ. ಹಿಗಾಗಿ ಶಂಕರ ಬದಲು ಃಎP ಇಲ್ಲಿಂದ ಪೂಜಾರಿ ಎಂಬ ಹೊಸಬರಿಗೆ ಟಿಕೆಟ್ ನೀಡಿದೆ. ಇದು ಹಳೆಹುಲಿ ಏ.ಃ ಕೋಳಿವಾಡರನ್ನು ಮತ್ತೊಮ್ಮೆ ಅದೃಷ್ಟದ ಬಾಗಿಲ ಬಳಿ ತಂದು ನಿಲ್ಲಿಸಿದೆ. ಆದರೆ ಅವರಿಗೆ ಅವರ ಮನೆಯಲ್ಲೆ ಭಿನ್ನಮತ ಸ್ಪೊಟಗೊಂಡಿದೆ ಇನ್ನು ನಿನು ಸಾಕು ನಾನು ಚುನಾವಣೆಗೆ ನಿಲ್ಲುತ್ತೆನೆ ಎಂದು ಸವಾಲೊಡ್ಡಿದ್ದ ಮಗನನ್ನು ಶಾಂತ ಮಾಡಿರುವ ಕೋಳಿವಾಡರು ಮತ್ತೊಮ್ಮೆ ವಿಧಾನಸೌದದ ಮೆಟ್ಟಿಲು ಹತ್ತಿದರೆ ಆಶ್ಚರ್ಯ ಪಡುವಂತದೆನಿಲ್ಲ.
“ನಾನು ಅಭಿವೃದ್ಧಿಗಾಗಿ ಬಿಜೆಪಿ ಸೇರಿದ್ದೇನೆ… ಕಾಂಗ್ರೆಸಲ್ಲಿ ದೇಶಪಾಂಡೆ ಕಾಟ ತಾಳಲಾಗದೆ ಹೊರಬರಬೇಕಾಯ್ತು…” ಎಂದು ಯಲ್ಲಾಪುರ ಮುಂಡಗೋಡ-ಬನವಾಸಿ ಕ್ಷೇತ್ರದಾದ್ಯಂತ ಗೋಳಾಡುತ್ತ ಅಂಡಲೆಯುತ್ತಿರುವ ಬಿಜೆಪಿ ಅಭ್ಯರ್ಥಿ “ಅನರ್ಹ” ಶಿವರಾಮ ಹೆಬ್ಬಾರ್ನ ಭೋಂಗು ಯಾರೆಂದರೆ ಯಾರೂ ನಂಬುತ್ತಿಲ್ಲ. 2018ರ ಅಸೆಂಬ್ಲಿ ಇಲೆಕ್ಷನ್ ರಿಸಲ್ಟ್ ಬಂದ ಮರುಘಳಿಗೆಯೇ ಹೆಬ್ಬಾರನ ವ್ಯವಹಾರ ಚತುರೆ ಹೆಂಡತಿ ಗಂಡನ ಬಿಜೆಪಿಗೆ ಸೇರಿಸಲು ಯಡ್ಡಿ ಮಗ ವಿಜಯೇಂದ್ರ ಜತೆ ಡೀಲ್ ನಡೆಸಿದ್ದು ಆಡಿಯೋ ಕೇಳಿದವರ್ಯಾರೂ ಮರೆತಿಲ್ಲ! ಹೆಬ್ಬಾರ್ ಮಂತ್ರಿಗಿರಿ ದುರಾಸೆಗೆ ಬಿದ್ದೇ ಪಕ್ಷಾಂತರ ಮಾಡಿ ಅನವಶ್ಯಕ ಇಲೆಕ್ಷನ್ ಜನರ ಮೇಲೆ ಹೇರಿದ್ದಾನೆಂಬ ಅಸಹ್ಯ ಇಡೀ ಕ್ಷೇತ್ರದಲ್ಲಿದೆ. ಮೂಲ ಬಿಜೆಪಿಗರಂತೂ ಹೆಬ್ಬಾರನ ಮುಸುಡಿ ಕಂಡರೆ ಮೂಗು ಮುರಿಯುತ್ತಾರೆ. ನೋಟಾ ಬಟನ್ನಾದರೂ ಒತ್ತುತ್ತೇವೆಯೇ ಹೊರತು ಕೊಳಕು ರಾಜಕೀಯ ಮಾಡುವ ಹೆಬ್ಬಾರ್ನ ಗೆಲ್ಲಿಸಲಾರೆವೆಂದು ಕಟ್ಟರ್ ಕಮಲಿಗರು ಕೆರಳಿದ್ದಾರೆ!!
ಮಂತ್ರಿಯಾಗಿ ಜೀವನದ ಕೊನೆಯ ಆಸೆ ಈಡೇರಿಸಿಕೊಳ್ಳಬೇಕೆಂಬ ತೆವಲಿಗೆ ಬಿದ್ದಿರುವ ಹೆಬ್ಬಾರ್ನ ಲೆಕ್ಕಾಚಾರ ಸರಳ ಅಂಕಗಣಿತದಲ್ಲಿದೆ. ನಂಗೆ ಕಳೆದ ಬಾರಿ ಬಿದ್ದ ಮತದೊಂದಿಗೆ ಆಗಿನ ಎದುರಾಳಿ ವಿ.ಎಸ್.ಪಾಟೀಲ್ ಈಗ ಜತೆಗಿರುವುದರಿಂದ ಪ್ಲಸ್ ಆಗಿದೆ. ಸ್ವಜಾತಿ ಹವ್ಯಕರಲ್ಲಿ ಬೇಸರವಿದ್ದರೂ ಸ್ವರ್ಣವಲ್ಲಿ ಸ್ವಾಮಿಗಳ ಫರ್ಮಾನಿಂದ ಲಾಭ ಆಗ್ತದೆ. ಎದುರಾಳಿ ಕಾಂಗ್ರೆಸ್ನ ಭೀಮಣ್ಣ ನಾಯ್ಕಗೆ ಆತನ ದೀವರ ಜಾತಿ ಮತ ಬಿಟ್ಟರೆ ಬೇರಾರದೂ ಸಿಗದು. ಅದಿರು ವ್ಯವಹಾರದ ಕೊಪ್ಪರಿಗೆ ಹಣದಿಂದ ಪ್ರಚಾರ ಸಲೀಸಾಗುತ್ತದೆಂಬ ಅಂದಾಜು ಹೆಬ್ಬಾರ್ ಹಾಕಿದ್ದಾನೆ. ಆದರೆ ಅಷ್ಟು ಸರಳವಾಗಿಲ್ಲ ಉಪಚುನಾವಣಾ ಅಖಾಡ.
ಬಿಜೆಪಿಯ ಟಾಪ್ ಲೀಡರ್ಗಳು ಎರಡೆರಡು ಬಾರಿ ಸಂಧಾನ ಸಭೆ ನಡೆಸಿದರೂ ಬಿಜೆಪಿಯ ಬಹುತೇಕ ಘಟಕಗಳಿನ್ನೂ ಫೀಲ್ಡಿಗೆ ಇಳಿದಿಲ್ಲ. ಹೆಬ್ಬಾರ್ ಗ್ಯಾಂಗಿನ ಜತೆ ಸೇರಲು ಮೂಲ ಬಿಜೆಪಿಗರ ಮನಸು ಒಪ್ಪುತ್ತಿಲ್ಲ. ಹೊರನೋಟಕ್ಕೆ ಹೆಬ್ಬಾರ್ ಹವಾ ಜೋರಿರುವಂತೆ ಕಂಡರೂ ಆತನಿಗೆ ಸ್ವಜಾತಿ ಹವ್ಯಕರು ಮತ್ತು ಯಡ್ಡಿ ದೆಸೆಯಿಂದ 25 ಸಾವಿರದಷ್ಟಿರುವ ಲಿಂಗಾಯತರ ಮತ ಬಿಟ್ಟರೆ ಉಳಿದ ಯಾವ ಸಮುದಾಯದ ಮತವೂ ದೊಡ್ಡ ಪ್ರಮಾಣದಲ್ಲಿ ದಕ್ಕಲಾರದು. ಕ್ಷೇತ್ರ ವ್ಯಾಪ್ತಿಯ ಏಳು ಜಿಪಂ ಕ್ಷೇತ್ರಗಳ ಪೈಕಿ ನಾಲ್ಕು ಬಿಜೆಪಿ (ಇಬ್ಬರು ಕಾಂಗ್ರೆಸ್ನಿಂದ ಹೋದವರು) ಒರವಿದ್ದರೆ ಮೂರು ಕಾಂಗ್ರೆಸ್ ಕಡೆಗಿದೆ. ದೇಶಪಾಂಡೆ ಕರಾರುವಾಕ್ಯ ದಾಳ ಉರುಳಿಸಿದಂತೆ ಕಾಂಗ್ರೆಸ್ ಕ್ಯಾಂಡಿಡೇಟ್ ಬಲಗೊಳ್ಳುತ್ತಿದ್ದಾರೆ. ಸದ್ಯಕ್ಕೆ ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ ಕ್ಷೇತ್ರ ಯಾವ ಮೂಲೆಯಲ್ಲಿ ನಿಂತು ಕಣ್ಣು ಹಾಯಿಸಿದರೂ ಪಕ್ಷಾಂತರಿ ಹೆಬ್ಬಾರ್ಗೆ ಅಖಾಡ ಕಠಿಣ ಆಗುತ್ತಿರುವುದು ಸ್ಪಷ್ಟವಾಗುತ್ತಿದೆ. ದೇಶಪಾಂಡೆ ಇದೇ ನಿಷ್ಠೆ-ಬದ್ಧತೆ-ಹಠದಿಂದ ಕಡೆವರೆಗೂ ಹೋರಾಡಿದರೆ ಕ್ಷೇತ್ರಕ್ಕೆ ಮೋಸ-ವಂಚನೆ ಮಾಡಿದ ಹೆಬ್ಬಾರ್ಗೊಂದು ನೈತಿಕ ಪಾಠವಾಗೋದು ಗ್ಯಾರಂಟಿ ಎಂಬುದು ಕ್ಷೇತ್ರದಲ್ಲಿ ಕೇಳಿಬರುವ ಸಾಮಾನ್ಯ ಮಾತು.
ಸುನೀಲ್ ಶಿರಸಂಗಿ…

