ಗೃಹಬಂಧನದಿಂದ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಇಂದು ಬಿಡುಗಡೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಅವರನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಲು ಜಮ್ಮು ಕಾಶ್ಮೀರ ಆಡಳಿತ ಮಂಗಳವಾರ ಆದೇಶಿಸಿದೆ. ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆರವುಗೊಳಿಸಿ 370ನೆ ವಿಧಿಯನ್ನು ರದ್ದುಗೊಳಿಸಿದ ನಂತರ ಆಗಸ್ಟ್ 5, 2019 ರಿಂದ ಒಮರ್ ಅಬ್ದುಲ್ಲಾ ಅವರನ್ನು ಅವರ ಹರಿ ನಿವಾಸ ಮನೆಯಲ್ಲಿ ಸಾರ್ವಜನಿಕ ಸುರಕ್ಷಿತ ಕಾಯ್ದೆಯಡಿ ಗೃಹ ಬಂಧನದಲ್ಲಿ ಇರಿಸಲಾಗಿತ್ತು.

ಕೆಲವು ವಾರಗಳ ಹಿಂದೆಯಷ್ಟೇ ಒಮರ್ ಅಬ್ದುಲ್ಲಾ ಅವರ ತಂದೆ ಸಂಸದ ಫಾರುಕ್ ಅಬ್ದುಲ್ಲ ಅವರನ್ನು ಗೃಹಬಂಧನದಿಂದ ಬಿಡುಗಡೆ ಮಾಡಲಾಗಿತ್ತು. ತಮ್ಮ ಬಿಡುಗಡೆಯ ನಂತರ ಫಾರೂಕ್, ಒಮರ್ ಅಬ್ದುಲ್ಲಾ ಮನೆಗೆ ಭೇಟಿ ನೀಡಿದ್ದರು.

ಇಡೀ ದೇಶದಲ್ಲಿ ಕೊರೊನ ಭೀತಿ ಹರಡುತ್ತಿರುವ ಸಮಯದಲ್ಲಿ ಜಮ್ಮು ಕಾಶ್ಮೀರದಲ್ಲಿಯೂ ಕೊರೊನ ಭೀತಿ ಹೆಚ್ಚಿದೆ. ಸುಮಾರು 5000ಕ್ಕೂ ಹೆಚ್ಚು ಜನರನ್ನು ಕೊರೊನ ವೈರಸ್ ಲಕ್ಷಣಗಳಿಗಾಗಿ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಅಲ್ಲದೆ ಹಲವು ತಿಂಗಳುಗಳಿಂದ ಇಂಟರ್ನೆಟ್ ಮತ್ತು ಇತರ ಸಂಪರ್ಕ ಮಾಧ್ಯಮಗಳನ್ನು ಕೇಂದ್ರ ಸರ್ಕಾರ ಅಲ್ಲಿ ಕಡಿತಗೊಳಿಸಿತ್ತು. ಈಗ ಆ ನಿರ್ಬಂಧಗಳನ್ನು ಸಡಿಲಿಸಿರುವುದಾಗಿ ಸರ್ಕಾರ ಹೇಳಿದ್ದಾರೂ ಇನ್ನೂ ಸಹಜ ಸ್ಥಿತಿ ಮರಳಿಲ್ಲ ಎಂಬ ವರದಿಗಳಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights