ಫ್ಯಾಕ್ಟ್‌ಚೆಕ್ : ಮುಸ್ಲಿಂ ಪ್ರೇಮಿಯೊಬ್ಬ ತನ್ನ ಹಿಂದೂ ಗೆಳತಿಗೆ ಮಾರಣಾಂತಿಕ ಹಲ್ಲೆ ನಡೆಸಿದನೇ?
ಹಲ್ಲೆಗೊಳಗಾಗಿ ಗಾಯಗೊಂಡ ಯುವತಿಯ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಕಣ್ಣು, ತುಟಿ ಮತ್ತು ಮೂಗಿನ ಮೇಲೆ ಗಾಯಗಳಾಗಿದ್ದು ಕಣ್ಣಿನ ಸುತ್ತ ರಕ್ತ ಹೆಪ್ಪುಗಟ್ಟಿ, ಮುಖವೆಲ್ಲ ಊದಿಕೊಂಡಿದೆ ಎಂದು ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ.
https://twitter.com/Kajal_mishr/status/1648265533308178433
“ಅಂಕಿತಾ ವಿಜಯ್ ಎಂಬ ಕಮ್ಯುನಿಸ್ಟ್ ಹಿಂದೂ ಹುಡುಗಿ ಅಬ್ದುಲ್(ಬಾಯ್‌ಫ್ರೆಂಡ್) ಅನ್ನು ಪ್ರೀತಿಸುತ್ತಿದ್ದಳು, ಸ್ವರ್ಗಕ್ಕೆ ಹೋಗಬೇಕೆಂದು ಬಯಸಿದ್ದಳು, ಆದರೆ ಅವಳು ಬದುಕಿರುವಾಗಲೇ ಅಬ್ದುಲ್ ಅವಳಿಗೆ ನರಕವನ್ನು ತೋರಿಸಿದ್ದಾನೆ. ಇದು ಹಿಂದೂ-ಮುಸ್ಲಿಂ ಪ್ರೇಮ! ಲವ್ ಜಿಹಾದಿನಿಂದ ಹಿಂದೂ ಹುಡುಗಿ ನರಕಯಾತನೆ ಅನುಭವಿಸುತ್ತಾಳೆ” ಎಂಬ ಹೇಳಿಕೆಯೊಂದಿಗೆ ಕಾಜಲ್ ಮಿಶ್ರಾ ಎಂಬುವವರು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಫೋಟೊಗಳನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ವೈರಲ್ ಫೋಟೊದ ಹಿನ್ನಲೆಯನ್ನು ಹಲವು ಪತ್ರಿಕೆಗಳು ಮಾಡಿದ ವರದಿ ಲಭ್ಯವಾಗಿದೆ. ಹಿಂದೂಸ್ತಾನ್ ಟೈಮ್ಸ್ ಇದೇ ಫೋಟೋಗಳೊಂದಿಗೆ ವರದಿಯನ್ನು ಮಾಡಿದ್ದು “ವಿಷಮಕರನ್ ನಟಿ ಅನಿಕಾ ವಿಕ್ರಮನ್ ತನ್ನ ಮಾಜಿ ಪ್ರಿಯಕರನಿಂದ ಹಲ್ಲೆಹೆ ಒಳಗಾಗಿದ್ದಾರೆ ಎಂದು ವರದಿ ಮಾಡಿದೆ. ಮಾನಸಿಕ ಕಿರುಕುಳ ಮತ್ತು ದೈಹಿಕ ಹಲ್ಲೆಯನ್ನು ಮಾಡಿದ್ದಾನೆ ಎಂದು ಆರೋಲಿಸಿ ಫೋಟೋವನ್ನು ಹಂಚಿಕೊಂಡಿದ್ದಾರೆ ಎಂದು ವರದಿ ಮಾಡಿದೆ.
ನ್ಯೂಸ್ 18 ವರದಿ ಪ್ರಕಾರ, ಮಲಯಾಳಿ ನಟಿ ಅನಿಕಾ ವಿಕ್ರಮನ್ ಅವರು ತಮ್ಮ ಮಾಜಿ ಪ್ರಿಯತಮ ಅನೂಪ್ ಪಿಳ್ಳೈ ಯಿಂದ ದೈಹಿಕ ಹಲ್ಲೆಯ ಗಂಭೀರ ಆರೋಪ ಮಾಡಿದ್ದಾರೆ. ತನ್ನ ಮಾಜಿ ಗೆಳೆಯ ಅನುಪ್ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ನಟಿ ತನ್ನ ಗಾಯಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಳೆ. ಆಕೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ ಎಂದು ವರದಿಯಾಗಿದೆ.
gulte.com ವೆಬ್‌ಸೈಟ್ ಪ್ರಕಾರ, ಮಲಯಾಳಿ ನಟಿ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಾನು ಅನುಪ್ ಪಿಳ್ಳೈ ಅವರನ್ನು ಪ್ರೀತಿಸುತ್ತಿದ್ದೇನೆ ಎಂದು ಬರೆದಿದ್ದಾರೆ. ಪಿಳ್ಳೈ ಮೊದಲ ಬಾರಿಗೆ ಚೆನ್ನೈನಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದ್ದನು, ನಂತರ ನಾನು ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಿದಾಗ, ತನ್ನದು ತಪ್ಪಾಯಿತು ಎಂದು ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದ, ಆದರೆ ಆತ ಮತ್ತೆ ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆನಡೆಸಿದ್ದರಿಂದ ಪೊಲೀಸರಿಗೆ ದೂರು ನೀಡಿದ್ದಾಗಿ ತಿಳಿಸಿದ್ದಾಳೆ. ಹಾಗಾಗಿ ಇದು ಹಿಂದೂ ಮುಸ್ಲಿಂ ಎಂಬ ಕೋಮು ಆಯಾಮವೇನು ಇಲ್ಲ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಅನುಪ್ ಪಿಳ್ಳೈ ಎಂಬ ಮಾಜಿ ಪ್ರಿಯಕರನಿಂದ ಮಲಯಾಳಂ ನಟಿ ಅನಿಕಾ ವಿಕ್ರಮನ್ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಪ್ರಕರಣವನ್ನು ಮುಸ್ಲಿಂ ಹುಡುಗನಿಂದ ಹಿಂದೂ ಯುವತಿ ಮೇಲೆ ಹಲ್ಲೆ ಎಂದು ಕೋಮು ದ್ವೇಷದ ಹಿನ್ನಲೆಯಲ್ಲಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಇಬ್ಬರು ಹಿಂದೂ ಧರ್ಮಿಯರಾಗಿದ್ದು ಈ ಘಟನೆಗೆ ಯಾವುದೇ ಕೋಮು ಆಯಾಮವಿಲ್ಲ ಎಂದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಹಿಂದೂ ಯುವಕ ಮುಸ್ಲಿಂ ಯುವತಿಯನ್ನು ಮದುವೆಯಾದರೆ RSS 5ಲಕ್ಷ ಬಹುಮಾನ ನೀಡುತದೆಯೇ?

