ವಂಚನೆ ಹಾಗೂ ಬೆದರಿಕೆ ಆರೋಪ; ಬಾಲಿವುಡ್ ನಟ ಸಾಹಿಲ್ ಖಾನ್ ವಿರುದ್ಧದ FIR ರದ್ದು; ಆದರೂ 1 ಲಕ್ಷ ದಂಡ ವಿಧಿಸಿದ ಕೋರ್ಟ್‌!

ಬಾಲಿವುಡ್ ನಟ ಸಾಹಿಲ್ ಖಾನ್ ವಿರುದ್ಧ ಅವರ ಪತ್ನಿ ಆಯೇಶಾ ಶ್ರಾಫ್ ಅವರು ನೀಡಿದ್ದ ವಂಚನೆ ಹಾಗೂ ಕ್ರಿಮಿನಲ್ ಬೆದರಿಕೆಯ ದೂರುಗಳ ಆರೋಪದ ದಾಖಲಾಗಿದ್ದ 2 ಎಫ್‌ಐಆರ್‌ಗಳನ್ನು ಬಾಂಬೆ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.

ಸಾಹಿಲ್ ಖಾನ್ ತನಗೆ ನೀಡಬೇಕಾಗಿರುವ 4 ಕೋಟಿ ರೂ. ಹಣವನ್ನು ಬಾಕಿಯಿರಿಸಿದ್ದಾರೆಂದು ಆಯೇಶಾ ಶ್ರಾಫ್ ತನ್ನ ದೂರಿನಲ್ಲಿ ತಿಳಿಸಿದ್ದರು.

ಆದರೆ, ತಮ್ಮ ನಡುವಿನ ವಿವಾದಗಳನ್ನು ಸೌಹಾರ್ದಯುತವಾಗಿ ಇತ್ಯರ್ಥ ಮಾಡಿಕೊಳ್ಳುವುದಾಗಿ ಸಾಹಿಲ್ ಖಾನ್‌ ಹಾಗೂ ಆಯೇಶಾ ಶ್ರಾಫ್‌ ನ್ಯಾಯಾಲಯಕ್ಕೆ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಎಫ್‌ಐಆರ್‌ಗಳನ್ನು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂಧೆ ಹಾಗೂ ಎನ್.ಜೆ. ಜಾಮದಾರ್ ಅವರಿದ್ದ ನ್ಯಾಯಪೀಠವು ರದ್ದುಪಡಿಸಿದೆ.

ಎರಡೂ ಎಫ್‌ಐಆರ್‌ಗಳಲ್ಲಿ ಯಾವುದೇ ಆರೋಪ ಅಥವಾ ದಾವೆಯನ್ನು ಮುಂದಕ್ಕೊಯ್ಯದಿರಲು ಆಯೇಶಾ ಶ್ರಾಫ್‌ ನಿರ್ಧರಿಸಿರುವುದಾಗಿ ಆಕೆಯ ವಕೀಲರು ಕೋರ್ಟ್‌ಗೆ ತಿಳಿಸಿದ್ದಾರೆ.

ಹೀಗಾಗಿ, ಎಫ್‌ಐಆರ್‌ಗಳನ್ನು ಕೋರ್ಟ್‌ ರದ್ದುಗೊಳಿಸಿದೆ. ಆದಾಗ್ಯೂ ಖಾನ್ ಅವರಿಗೆ ನ್ಯಾಯಾಲವು ಒಂದು ಲಕ್ಷ ರೂ. ದಂಡವನ್ನು ವಿಧಿಸಿದೆ. ಆ ಹಣವನ್ನು ಮಹಾರಾಷ್ಟ್ರ ಶಿಶು ಕಲ್ಯಾಣ ಸಮಿತಿಗೆ ನೀಡುವಂತೆ ಸೂಚಿಸಿದೆ.

ಇದನ್ನೂ ಓದಿ: ಇಬ್ಬರು ಮಕ್ಕಳ ಬ್ಯಾಂಕ್ ಖಾತೆಗೆ 900 ಕೋಟಿ ರೂ. ಜಮೆ; ಕುಟುಂಬಸ್ಥರು ಸೇರಿ ಅಧಿಕಾರಿಗಳು ಶಾಕ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights