ಇಬ್ಬರು ಮಕ್ಕಳ ಬ್ಯಾಂಕ್ ಖಾತೆಗೆ 900 ಕೋಟಿ ರೂ. ಜಮೆ; ಕುಟುಂಬಸ್ಥರು ಸೇರಿ ಅಧಿಕಾರಿಗಳು ಶಾಕ್‌!

ಇಬ್ಬರು ಮಕ್ಕಳ ಬ್ಯಾಂಕ್ ಖಾತೆಗೆ ಇದ್ದಕ್ಕಿದ್ದಂತೆ 900 ಕೋಟಿ ರೂ. ಜಮೆಯಾಗಿದ್ದು, ಕುಟುಂಬಸ್ಥರು, ಗ್ರಾಮಸ್ಥರು ಸೇರಿ ಬ್ಯಾಂಕ್‌ ಅಧಿಕಾರಿಗಳು ಶಾಕ್‌ ಆಗಿರುವ ಘಟನೆ ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಬಗೂರಾ ಪಂಚಾಯ್ತಿಯ ಪಸ್ತಿಯಾ ಗ್ರಾಮದ ಗುರುಚಂದ್ರ ವಿಶ್ವಾಸ್ ಮತ್ತು ಆಸೀತ್ ಕುಮಾರ್ ಎಂಬ ಮಕ್ಕಳ ಖಾತೆಗೆ 900 ಕೋಟಿ ರೂಪಾಯಿ ಜಮೆ ಆಗಿದೆ ಎಂದು ಲೈವ್‌ ಹಿಂದೂಸ್ತಾನ್ ವರದಿ ಮಾಡಿದೆ.

ಭಾರತೀಯ ಸ್ಟೇಟ್ ಬ್ಯಾಂಕ್‌ನ ಸ್ಥಳೀಯ ಕೇಂದ್ರೀಕೃತ ಸಂಸ್ಕರಣಾ ಕೇಂದ್ರ(ಸಿಪಿಸಿ)ಕ್ಕೆ ಈ ಇಬ್ಬರೂ ಮಕ್ಕಳು ಭೇಟಿ ನೀಡಿ, ರಾಜ್ಯ ಸರ್ಕಾರ ಮಕ್ಕಳ ಸಮವಸ್ತ್ರಕ್ಕೆ ಹಣ ಜಮೆ ಮಾಡಿದೆಯೇ ಎಂದು ಪರಿಶೀಲಿಸಿದ್ದಾರೆ. ಈ ವೇಳೆ ತಮ್ಮ ಖಾತೆಗೆ ಅಷ್ಟೊಂದು ದೊಡ್ಡ ಮೊತ್ತದ ಹಣ ಜಮೆ ಆಗಿರುವುದು ತಿಳಿದು ಬಂದಿದೆ.

ಮಕ್ಕಳು ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರು. ಈ ಪೈಕಿ ವಿಶ್ವಾಸ್ ಖಾತೆಗೆ 60 ಕೋಟಿ ರೂ. ಹಾಗೂ ಕುಮಾರ್ ಖಾತೆಗೆ 900 ಕೋಟಿ ರೂಪಾಯಿ ಜಮೆ ಆಗಿದೆ. ಇದರಿಂದ ಅಚ್ಚರಿಗೊಂಡಿರುವ ಶಾಖೆಯ ವ್ಯವಸ್ಥಾಪಕ ಮನೋಜ್ ಗುಪ್ತಾ, ಹಣವನ್ನು ಡ್ರಾ ಮಾಡದಂತೆ ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಬ್ಯಾಂಕಿನ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.

ಇದನ್ನೂ ಓದಿ: 2020ರಲ್ಲಿ ಅತಿ ಹೆಚ್ಚು ಕೊಲೆ, ಅಪಹರಣಗಳು ನಡೆದ ರಾಜ್ಯ ಉತ್ತರ ಪ್ರದೇಶ: NCRB ವರದಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights