ರಸ್ತೆಯಲ್ಲಿ ಡ್ಯಾನ್ಸ್ ಮಾಡಿದಾಕೆಗೆ ಸಂಕಷ್ಟ : ಯುವತಿ ವಿರುದ್ಧ ಕ್ರಮಕ್ಕೆ ಸಚಿವ ನರೋತ್ತಮ್ ಮಿಶ್ರಾ ಆದೇಶ!

ಮಧ್ಯಪ್ರದೇಶದ ಇಂದೋರ್ ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಯುವತಿಗೆ ಈಗ ಸಂಕಷ್ಟ ಎದುರಾಗಿದೆ.

ಸೋಷಿಯಲ್ ಮೀಡಿಯಾ ಚಾಲೆಂಜ್ ಸ್ವೀಕರಿಸಿದ ಯುವತಿ ರಸ್ತೆ ಮಧ್ಯೆ ನಿಂತು ಡ್ಯಾನ್ಸ್ ಮಾಡಿದ್ದಳು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಈ ವಿಡಿಯೋ ಆಧಾರದ ಮೇಲೆ ಟ್ರಾಫಿಕ್ ನಿಯಮ ಉಲ್ಲಘಿಸಿದ್ದಕ್ಕಾಗಿ ಯುವತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಆದೇಶಿಸಿದ್ದಾರೆ. ಈ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿದ ಮಿಶ್ರಾ, “ಅವಳ ಉದ್ದೇಶಗಳು ಏನೇ ಇದ್ದರೂ ಅದು ತಪ್ಪು. ಮೋಟಾರ್ ವಾಹನ ಕಾಯಿದೆಗಳ ಅಡಿಯಲ್ಲಿ ಆಕೆಯ ವಿರುದ್ಧ ಕ್ರಮ ಕೈಗೊಳ್ಳಲು ನಾನು ಆದೇಶ ಹೊರಡಿಸುತ್ತೇನೆ, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯಬಾರದು” ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ಟ್ರಾಫಿಕ್ ಸಿಗ್ನಲ್ ಬಿದ್ದಾಕ್ಷಣ ರಸ್ತೆಯ ಮಧ್ಯದಲ್ಲಿ ಯುವತಿ ನೃತ್ಯ ಮಾಡುತ್ತಿರುವುದನ್ನು ನೋಡಬಹುದು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಟ್ರಾಫಿಕ್ ನಿಯಮ ಉಲ್ಲಘಿಸಿದ್ದಕ್ಕಾಗಿ ಪೊಲೀಸರು ನೋಟೀಸು ನೀಡಿರುವ ಮಾಹಿತಿ ತಿಳಿದು ಬಂದಿದೆ.

ಇನ್ಸ್ಟಾಗ್ರಾಂ ಫಾಲೋವರ್ ಶ್ರೇಯಾ ಕುಲ್ರಾ ವಾಹನ ಚಲಿಸುತ್ತಿರುವ ರಸ್ತೆ ಮಧ್ಯದಲ್ಲಿ ನೃತ್ಯ ಮಾಡಿ ವಿಡಿಯೋ ಹರಿಬಿಟ್ಟಿದ್ದರು. ಆಕೆಯ ವಿಡಿಯೋವಿಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಬಳಕೆದಾರರು ಶ್ರೇಯಾ ಅವರ ನೃತ್ಯ ಕೌಶಲ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಬೇಜವಾಬ್ದಾರಿತನ ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights