ಫ್ಯಾಕ್ಟ್ಚೆಕ್ : ರಾಹುಲ್ ಗಾಂಧಿ ಭಾಗವಹಿಸಿದ್ದ ರ್ಯಾಲಿಯಲ್ಲಿ ಪಾಕ್ ಧ್ವಜಗಳ ಪ್ರದರ್ಶನ ಮಾಡಲಾಗಿದೆ ಎಂದು ಸುಳ್ಳು ಪೋಸ್ಟ್ ಹಂಚಿಕೆ
ನೀವು ಇಲ್ಲಿ ನೋಡುತ್ತಿರುವ ದೃಶ್ಯ ಮುಸ್ಲಿಂ ರಾಷ್ಟ್ರ ಪಾಕಿಸ್ಥಾನದಲ್ಲ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುವ ಕೇರಳದ ವಯನಾಡಿನಲ್ಲಿ ಕಂಡುಬಂದ ದೃಶ್ಯ. ಕೇರಳದ ವಯನಾಡಿನಲ್ಲಿ ರಾಹುಲ್ ಗಾಂಧಿಯವರ ರ್ಯಾಲಿಯಲ್ಲಿ ಪಾಕಿಸ್ತಾನದ ಧ್ವಜಗಳು ಹಾರಾಡುತ್ತಿವೆ ಎಂಬ ಹೇಳಿಕೆಯೊಂದಿಗೆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ರಾಹುಲ್ ಗಾಂಧಿ ಕೇರಳದ ವಯನಾಡಿನಲ್ಲಿ ನಡೆಸಿದ ರ್ಯಾಲಿಯಲ್ಲಿ ಪಾಕಿಸ್ತಾನ ದೇಶದ ಧ್ವಜಗಳನ್ನು ಪ್ರದರ್ಶಿಸಲಾಗಿದೆಯೇ ಎಂದು ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಕೇರಳದ ವಯನಾಡಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರ್ಯಾಲಿಯಲ್ಲಿ ಪಾಕ್ ಧ್ವಜಗಳನ್ನು ಪ್ರದರ್ಶಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಾದ ವಿಡಿಯೋ ಪೋಸ್ಟ್ಅನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್ಗಳನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಏಪ್ರಿಲ್ 4, 2019 ರಂದು ಫೇಸ್ಬುಕ್ ಬಳಕೆದಾರೊಬ್ಬರು ಇದೇ ವಿಡಿಯೋವನ್ನು ಹಂಚಿಕೊಂಡಿರುವುದು ಕಂಡುಬಂದಿದೆ.
ಮತ್ತಷ್ಟು ಮಾಹಿತಿಗಾಗಿ ಸರ್ಚ್ ಮಾಡಿದಾಗ, ವಯನಾಡ್ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ರಾಹುಲ್ ಗಾಂಧಿ, ಐಯುಎಂಎಲ್ ಪಕ್ಷದ ಹೈಪವರ್ ಕಮಿಟಿ ಸದಸ್ಯ ಸೈಯದ್ ಸಾದಿಕ್ ಅಲಿ ಶಿಹಾಬ್ ತಂಗಲ್, ಐಯುಎಂಎಲ್ ಸಂಸದ ಪಿಕೆ ಕುನ್ಹಾಲಿಕುಟ್ಟಿ ಸಾಹಿಬ್, ಪ್ರಿಯಾಂಕಾ ಗಾಂಧಿ ಮತ್ತು ಇತರ ನಾಯಕರು ರೋಡ್ ಶೋ ನಡೆಸಿದರು. ಏಪ್ರಿಲ್ 2019 ರಲ್ಲಿ ನಾಮನಿರ್ದೇಶನಗೊಂಡ ನಂತರ ವಯನಾಡಿನಲ್ಲಿ ರಾಹುಲ್ ಗಾಂಧಿಯವರ ರೋಡ್ಶೋ ದೃಶ್ಯಗಳನ್ನು ಇತರ ಕೆಲವು ಬಳಕೆದಾರರು ಹಂಚಿಕೊಂಡಿದ್ದಾರೆ.
ವಿಡಿಯೊದಲ್ಲಿನ ದೃಶ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ವೀಡಿಯೊದಲ್ಲಿ ಕಂಡುಬರುವ ಹಸಿರು ಬಣ್ಣದ ಧ್ವಜಗಳು IUML ಪಕ್ಷದ ಧ್ವಜಗಳಾಗಿವೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಕೇರಳ ರಾಜ್ಯದ ಒಂದು ರಾಜಕೀಯ ಪಕ್ಷವಾಗಿದೆ. IUML ಪಕ್ಷದ ಧ್ವಜದ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ಕಾಣಬಹುದು. ಪಕ್ಷದ ಧ್ವಜವನ್ನು ಪಾಕಿಸ್ತಾನದ ರಾಷ್ಟ್ರಧ್ವಜ ಎಂದು ಬಿಂಬಿಸುವ ಮೂಲಕ ತಮ್ಮ ಪಕ್ಷದ ವಿರುದ್ಧ ದ್ವೇಷವನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಐಯುಎಂಎಲ್ ’05 ಏಪ್ರಿಲ್ 2019′ ರಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಏಪ್ರಿಲ್ 2019 ರಲ್ಲಿ, ಮುಸ್ಲಿಂ ಲೀಗ್ ಪಕ್ಷವು ಕೇರಳದ ವಯನಾಡಿನಲ್ಲಿ ರಾಹುಲ್ ಗಾಂಧಿಯವರು ಆಯೋಜಿಸಿದ್ದ ಈ ರ್ಯಾಲಿಯ ವಿಡಿಯೊಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಹಂಚಿಕೊಂಡಿದೆ. ಮೇಲಿನ ವಿವರಗಳ ಆಧಾರದ ಮೇಲೆ ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಹಳೆಯದಾಗಿದೆ ಮತ್ತು ಈ ವಿಡಿಯೊದಲ್ಲಿ ಕಂಡುಬುವ ಹಸಿರು ಧ್ವಜಗಳು ಐಯುಎಂಎಲ್ ಪಕ್ಷದ ಧ್ವಜವೇ ಹೊರತು ಪಾಕಿಸ್ತಾನದ ಧ್ವಜವಲ್ಲ ಎಂಬುದು ಖಚಿತವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2019 ರಲ್ಲಿ,ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಯ್ಕೆಯಾದ ಸಂದರ್ಭದಲ್ಲಿ ಕೇರಳದ ವಯನಾಡ್ನಲ್ಲಿ ನಡೆದ ರೋಡ್ಶೋನಲ್ಲಿ ಪ್ರದರ್ಶಿಸಲಾದ ಮುಸ್ಲಿಂಲೀಗ್ ಪಕ್ಷದ ಧ್ವಜಗಳನ್ನು, ರಾಹುಲ್ ರ್ಯಾಲಿಯಲ್ಲಿ ಪಾಕಿಸ್ತಾನಿ ಧ್ವಜಗಳನ್ನು ಬೀಸುತ್ತಿರುವ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಹಿಂದೂಗಳನ್ನು ಟಾರ್ಗೆಟ್ ಮಾಡಿ ಏಡ್ಸ್ ಇಂಜೆಕ್ಷನ್ ನೀಡಲಾಗುತ್ತಿದೆಯೇ?


“Rally” ಶಬ್ದ ಕನ್ನಡದಲ್ಲಿ ತಪ್ಪಾಗಿ, “ರ್ಯಾಲಿ” ಆಗಿ ಬರುವುದನ್ನು ಸರಿಪಡಿಸಲು ಅಸಾಧ್ಯವೇ?!?
ನಾನು ಪ್ರಯತ್ನಿಸಿದೆ, ಆಗಲಿಲ್ಲ. “Rally” ಬದಲಿಗೆ, “ಜನ ಸಮಾವೇಶ” ಹಾಕಬಹುದೆ?