ಕೊರೊನಾ ರೋಗಿಯ ಮೃತದೇಹ ಶವಾಗಾರಕ್ಕೆ ಸಾಗಿಸಲು ಆ್ಯಂಬುಲೆನ್ಸಗಳಿಗೆ ಎಷ್ಟು ಹಣ ಕೊಡಬೇಕು ಗೊತ್ತಾ..?

ರಾಜ್ಯ ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೃತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದೇ ಸಂದರ್ಭವನ್ನು ಬಳಸಿಕೊಂಡು ಕೆಲ ಸರ್ಕಾರಿ ಆಸ್ಪತ್ರೆಗಳು ಹಾಗೂ ಆ್ಯಂಬುಲೆನ್ಸ್ ಚಾಲಕರು ಹಣ ವಸೂಲಿಗೆ ಮುಂದಾಗಿವೆ.

ಹೌದು… ಮೊನ್ನೆಯಿಂದಲೂ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಚಿತಾಗಾರದ ಮುಂದೆ ಆ್ಯಂಬುಲೆನ್ಸ್ ಗಳು ಮೃತ ದೇಹಗಳೊಂದಿಗೆ ಸಾಲು ಗಟ್ಟಿ ನಿಂತಿವೆ. ಒಂದೇ ದಿನ ಹೆಚ್ಚೆಚ್ಚು ಶವಗಳನ್ನು ಚಿತಾಗಾರದಲ್ಲಿ ಹಾಕಲಾಗುತ್ತಿದ್ದು ಕುಟುಂಬಸ್ಥರಿಗೆ ಕೊನೆ ಮುಖ ನೋಡಲು, ಪೂಜೆ ಮಾಡಲು ಕೂಡ ಹಣ ವಸೂಲಿ ಮಾಡಲಾಗುತ್ತಿದೆ. ಬೆಂಗಳೂರಿನ ಚಿತಾಗಾರದಲ್ಲಿ ಯಾರದೋ ಚಿತಾಭಸ್ಮಾ ಇನ್ಯಾರದ್ದೋ ಕುಟುಂಬಸ್ಥರಿಗೆ ತಲುಪುತ್ತಿದೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಅದೃಷ್ಟ ಕಳೆದುಕೊಂಡು ಕುಟುಂಬಸ್ಥರಿಗೆ ಕೊರೊನಾ ಸೋಂಕು ತಗುಲಿದರೆ ಮುಗಿತು ಕತೆ ಅಂತಲೇ ಅರ್ಥ. ಯಾಕೆಂದ್ರೆ ಕೊರೊನಾ ರೋಗಿಯನ್ನು ಆಸ್ಪತ್ರೆಗೆ ದಾಖಲಿಸುವಾಗಲೂ ಹಣ, ಚಿಕಿತ್ಸೆಗೂ ಹಣ, ಒಂದು ವೇಳೆ ಸತ್ತರೂ ಹಣ ವಸೂಲಿ ಮಾಡಲಾಗುತ್ತಿದೆ. ಆಸ್ಪತ್ರೆಗೆ ದಾಖಲಿಸುವಾಗಲೂ ಸಾವಿರಾರು ರೂಪಾಯಿ ಹಣ ಕೊಡಬೇಕು. ಚಿಕಿತ್ಸೆಗಂತೂ ಲಕ್ಷಾಂತರ ರೂಪಾಯಿ ಹಣ, ಜೊತೆಗೆ ಸತ್ತಮೇಲೂ ಸಾವಿರಾರು ರೂಪಾಯಿ ಹಣ ಕೊಡಬೇಕು. ಇಲ್ಲವಾದರೆ ಗಂಟೆಗಟ್ಟಲೆ ಶವ ಕಣ್ಮುಂದೆ ಇಟ್ಟುಕೊಂಡು ಕಣ್ಣೀರಾಕುವಂತ ಸ್ಥಿತಿ ಇದೆ.

ಆಸ್ಪತ್ರೆಯಿಂದ ಕೊರೊನಾ ರೋಗಿಯ ಮೃತ ದೇಹವನ್ನು ಶವಗಾರಕ್ಕೆ ಸಾಗಿಸಲು ಪ್ಯಾಕೇಚ್ ರೂಪದಲ್ಲಿ ಹಣ ಕೊಡಬೇಕು. ಕನಿಷ್ಠ ಕನಿಷ್ಠ ಅಂದರೂ ಆಸ್ಪತ್ರೆಯಿಂದ ಶವಾಗಾರಕ್ಕೆ ಶವ ಆ್ಯಂಬುಲೆನ್ಸ್ ನಲ್ಲಿ ತೆಗೆದುಕೊಂಡು ಹೋಗಿ ಚಿತಾಗರಾದಲ್ಲಿ ಸುಟ್ಟು ಚಿತಾಭಸ್ಮ ಕೈಸೇರೋವರೆಗೂ ಏನಿಲ್ಲಾ ಅಂದ್ರು 20ರಿಂದ 30 ಸಾವಿರ ಹಣ ಕೊಡಬೇಕು ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಸಾವಿರ ಸಾವಿರ ಹಣ ಕೊಟ್ಟರೆ ಮಾತ್ರ ಅಂತ್ಯ ಸಂಸ್ಕಾರ ಮಾಡ್ತಾರಂತೆ. ಇಲ್ಲವಾದರೆ ಬೆಳಿಗ್ಗೆಯಿಂದ ಹೀಗೆ ಶವಗಾರದ ಮುಂದೆ ಕಾದು ಕುಳಿತಿರಬೇಕು ಅಂತ ಅಳಲು ತೋಡಿಕೊಳ್ತಾರೆ ಕುಟುಂಬಸ್ಥರು. ಒಂದೆಡೆ ಚಿತಾಗಾರ ಫುಲ್ ಇನ್ನೊಂದರೆ ವಸೂಲಿ ಇಷ್ಟಾದರೂ ಚಿತಾಭಸ್ಮಾ ತಮ್ಮವರದ್ದೇ ಅನ್ನೋ ಗ್ಯಾರೆಂಟಿ ಇಲ್ಲ. ಒಂದೇ ಸಲ ಹೆಚ್ಚೆಚ್ಚು ಶವಸಂಸ್ಕಾರ ಮಾಡುವುದರಿಂದ ಯಾರ ಚಿತಾಭಸ್ಮಾ ಯಾರ ಕೈ ಸೇರುತ್ತೋ ಗೊತ್ತಿಲ್ಲಾ ಅಂತಾರೆ ಕುಟುಂಬ ಸದಸ್ಯರು.

ಆದರೂ ಸರ್ಕಾರ ಉಚಿತ ಆ್ಯಂಬುಲೆನ್ಸ್ ಸೆವೆ ಒದಗಿಸುವ ಭರವಸೆಯನ್ನು ನೀಡಿದೆ. ಆದರೆ ಆಸ್ಪತ್ರೆಗಳ ಮುಂದೆ ಆ್ಯಂಬುಲೆನ್ಸ್ ಗಳ ಹಣ ವಸೂಲಿ ಮಾತ್ರ ಕೈಮುಚ್ಚಿ ನಡೆಯುತ್ತಲೇ ಇದೆ. ಕುಟುಂಬಸ್ಥರನ್ನು ಕಳೆದುಕೊಂಡ ನೋವಿನಲ್ಲಿ ನೆಮ್ಮದಿಯಾಗಿ ಶವಸಂಸ್ಕಾರ ಮಾಡಲೂ ಕೂಡ ಅವಕಾಶವಿಲ್ಲದಂತಾಗಿದೆ.

ಬಡತನದಲ್ಲಿರುವ ಜನ ಜೀವನ ಸಾಗಿಸುವುದೇ ಕಷ್ಟವಾಗಿರುವ ಇಂಥ ಸಂದರ್ಭದಲ್ಲಿ ಕೊರೊನಾ ಬಂದರೆ ಗಾಯದ ಮೇಲೆ ಬರೆ ಹಾಕಿದಂತೆ ಸರಿ.

 

Spread the love

Leave a Reply

Your email address will not be published. Required fields are marked *