ಫ್ಯಾಕ್ಟ್‌ಚೆಕ್ : ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಉಕ್ರೇನ್‌ನಲ್ಲಿ ಐಸ್‌ ಕ್ರೀಮ್ ಸವಿದರೆ?

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಸೋಮವಾರ ಯುದ್ಧ ಪೀಡಿತ ಉಕ್ರೇನ್‌ಗೆ ದಿಢೀರ್‌ ಭೇಟಿ ನೀಡಿದರು. ಬೈಡೆನ್‌ ಉಕ್ರೇನ್‌ ರಾಜಧಾನಿ ಕೀವ್‌ಗೆ ಬಂದಾಗಲೇ ಅನೇಕರಿಗೆ ಮಾಧ್ಯಮಗಳಿಗೆ ಅವರು ಬಂದಿದ್ದು ಗೊತ್ತಾಯಿತು. ಇಷ್ಟು ರಹಸ್ಯ ಕಾಪಾಡಿಕೊಂಡು ಅವರು ಉಕ್ರೇನ್‌ಗೆ ಬಂದಿದ್ದು ಯಾಕೆ ಎಂದು ಈಗ ಗೊತ್ತಾಗಿದೆ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಅನ್ನು ಹಂಚಿಕೊಳ್ಳಲಾಗಿದೆ.

ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಉಕ್ರೇನ್‌ನ ರಾಜಧಾನಿ ಕೈವ್‌ನಲ್ಲಿ ಐಸ್ ಕ್ರೀಮ್ ಸವಿಯುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಮೇ 2021 ರಲ್ಲಿ ‘ರಾಯಿಟರ್ಸ್’ ನಲ್ಲಿ ಇದೇ ರೀತಿಯ ಫೋಟೋವನ್ನು ಪ್ರಕಟಿಸಲಾಗಿದೆ. ಆದರೆ ಮೂಲ ಫೋಟೋದಲ್ಲಿ ಬೈಡೆನ್ ನಿಂತಿರುವ ಸ್ಥಳದ ಹಿನ್ನಲೆ ಚಿತ್ರ ಭಿನ್ನವಾಗಿದೆ. ಚಿತ್ರದ ಕುರಿತು ಮತ್ತಷ್ಟು ಸರ್ಚ್ ಮಾಡಿದಾಗ, “ ಮೇ 27, 2021 ರಂದು ಯುಎಸ್‌ನ ಓಹಿಯೋದ ಕ್ಲೀವ್‌ಲ್ಯಾಂಡ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಧ್ಯಕ್ಷ ಜೋ ಬಿಡೆನ್ ಐಸ್‌ಕ್ರೀಮ್ ಸವಿಯುತ್ತಿರುವ ದೃಶ್ಯ ಎಂದು ತಿಳಿದು ಬಂದಿದೆ. ಅಂದರೆ ಈ ಫೊಟೋ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆದ ಯುದ್ದಕ್ಕೂ ಮೊದಲು ಎಂಬುದು ಸ್ಪಷ್ಟವಾಗಿದೆ.

ಓಹಿಯೋದ ಕ್ಲೀವ್‌ಲ್ಯಾಂಡ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಧ್ಯಕ್ಷ ಜೋ ಬಿಡೆನ್ ಐಸ್‌ಕ್ರೀಮ್ ಸವಿಯುತ್ತಿರುವ ಡಿಜಿಟಲ್‌ನಲ್ಲಿ  ಎಡಿಟ್ ಮಾಡುವ ಮೂಲಕ ಹಿನ್ನೆಲೆ ಫೋಟೋವನ್ನು ಉಕ್ರೇನ್‌ನ ಕೈವ್‌ನಲ್ಲಿರುವ ಕೈವ್ಸ್ಕಾ ಪೆರೆಪಿಚ್ಕಾ ಫುಡ್‌ ಸ್ಟ್ರೀಟ್‌ ಕೇಂದ್ರವನ್ನು ಸೇರಿಸಲಾಗಿದೆ. ಕೈವ್‌ನಲ್ಲಿರುವ ಫುಡ್‌ ಸ್ಟ್ರೀಟ್‌ ಕೇಂದ್ರದ ಹೆಚ್ಚಿನ ವಿವರಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಜೋ ಬಿಡೆನ್ ರಷ್ಯಾದ ಉಕ್ರೇನ್ ಯುದ್ದದ ಒಂದು ವರ್ಷದ ನಂತರ ಉಕ್ರೇನ್‌ಗೆ ಅನಿರೀಕ್ಷಿತ ಭೇಟಿ ನೀಡಿದರು
ಜೋ ಬಿಡೆನ್ ರಷ್ಯಾದ ಉಕ್ರೇನ್ ಯುದ್ದದ ಒಂದು ವರ್ಷದ ನಂತರ ಉಕ್ರೇನ್‌ಗೆ ಅನಿರೀಕ್ಷಿತ ಭೇಟಿ ನೀಡಿದರು

ಒಟ್ಟಾರೆಯಾಗಿ ಹೇಳುವುದಾದರೆ, ಮೇ 27, 2021 ರಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಓಹಿಯೋದ ಕ್ಲೀವ್‌ಲ್ಯಾಂಡ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಐಸ್‌ ಕ್ರೀಮ್‌ ಸವಿದ ಫೋಟೊವನ್ನು ಉಕ್ರೇನ್‌ಗೆ ರಹಸ್ಯವಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಐಸ್ ಕ್ರೀಮ್ ತಿನ್ನುತ್ತಿರುವಂತೆ ಡಿಜಿಟಲ್ ಮೂಲಕ ಎಡಿಟ್ ಮಾಡಿದ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಇಂದಿರಾ ಗಾಂಧಿ ಧರಿಸಿರುವುದು ಬುರ್ಖಾನು ಅಲ್ಲ ಹಿಜಾಬು ಅಲ್ಲ!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights